ಶಿವಮೊಗ್ಗ: 25 ವಿಧಾನ ಪರಿಷತ್ ಕ್ಷೇತ್ರಗಳಲ್ಲಿ ಭಾರತೀಯ ಜನತಾ ಪಾರ್ಟಿಯ 15 ಅರ್ಭ್ಯರ್ಥಿಗಳು ಭಾರಿ ಅಂತರದಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಭವಿಷ್ಯ ನುಡಿದಿದ್ದಾರೆ.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 15 ಕ್ಷೇತ್ರಗಳಲ್ಲಿ ನಾವು ಗೆಲ್ಲುತ್ತೇವೆ. ಇದರಿಂದ ವಿಧಾನ ಪರಿಷತ್ನಲ್ಲಿ ನಮಗೆ ಬಹುಮತ ಸಿಗುತ್ತದೆ. ಇನ್ನೊಬ್ಬರ ಮೇಲೆ ಅವಲಂಬಿತರಾಗುವುದು ತಪ್ಪುತ್ತದೆ ಎಂದರು.
ಮಾರ್ಚ್ವರೆಗೂ ದೇಶದ ಜನತೆಗೆ ಉಚಿತ ಆಹಾರ ಧಾನ್ಯ ವಿತರಣೆ ಮಾಡುತ್ತೇವೆ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ತೀರ್ಮಾನಕ್ಕೆ ನಾವು ಅಭಿನಂದನೆ ಸಲ್ಲಿಸುತ್ತೇವೆ ಎಂದು ಇದೇ ವೇಳೆ ಬಿಎಸ್ವೈ ಹೇಳಿದ್ರು.
ಕಾಂಗ್ರೆಸ್ನ ಸ್ನೇಹಿತರು ಟೀಕೆ ಮಾಡಿಕೊಂಡೇ ಹೊರಟಿದ್ದಾರೆ. ಚುನಾವಣಾ ಫಲಿತಾಂಶದ ನಂತರ ವಾಸ್ತವ ಸ್ಥಿತಿ ಏನು ಎನ್ನುವುದು ಅವರಿಗೆ ಅರ್ಥ ಆಗುತ್ತದೆ ಯಡಿಯೂರಪ್ಪ ಟಾಂಗ್ ನೀಡಿದ್ರು.
ಬೆಲೆ ಏರಿಕೆ ಚುನಾವಣೆ ಮೇಲೆ ಪರಿಣಾಮ ಬೀರಲ್ಲ:
ಬೆಲೆ ಏರಿಕೆ ಚುನಾವಣೆ ಮೇಲೆ ಯಾವುದೇ ರೀತಿಯಲ್ಲಿ ಪರಿಣಾಮ ಬೀರಲ್ಲ. ಈಗಾಗಲೇ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಮಾಡಲಾಗಿದೆ. ಸರ್ಕಾರದ ಅರ್ಧ ಬೊಕ್ಕಸ ಪಿಂಚಣಿ, ಸೇರಿದಂತೆ ಇತರೆ ಖರ್ಚುಗಳಿಗೆ ಹೋಗುತ್ತದೆ. ಇದರ ನಡುವೆ 200 ರೂ. ಪಿಂಚಣಿ ಹೆಚ್ಚಿಸಲಾಗಿದೆ. ಇದರ ಜತೆ ನಮ್ಮ ಸರ್ಕಾರ ಮಾಡಿರುವ ಒಳ್ಳೆ ಕೆಲಸಗಳು ಚುನಾವಣೆಗೆ ಪರಿಣಾಮಕಾರಿಯಾಗುತ್ತದೆ. ಎಲ್ಲಿ ಜೆಡಿಎಸ್ ಎಲ್ಲಿ ಸ್ಪರ್ಧೆ ಮಾಡುವುದಿಲ್ಲವೋ, ಅಲ್ಲಿ ಬೆಂಬಲ ನೀಡಿ ಎಂದು ವಿನಂತಿಸಿದ್ದೇನೆ ಎಂದು ಬಿಎಸ್ವೈ ಇದೇ ವೇಳೆ ಹೇಳಿದರು.
ಇದನ್ನೂ ಓದಿ: ACB raid: ಡ್ರೈನೇಜ್ ಪೈಪ್‌ನಲ್ಲಿ ಹಣ ಅಡಗಿಸಿಟ್ಟಿದ್ದ JE ಶಾಂತಗೌಡಗೆ 14 ದಿನ ನ್ಯಾಯಾಂಗ ಬಂಧನ