ಚಿಕ್ಕಮಗಳೂರು: ಶಿವಮೊಗ್ಗದಲ್ಲಿ ಭಾರೀ ಶಬ್ಧದೊಂದಿಗೆ ಭೂಮಿ ಕಂಪಿಸಿರುವ ಅನುಭವ ಆಗಿರುವ ಬೆನ್ನಲ್ಲೇ ಚಿಕ್ಕಮಗಳೂರಿನಲ್ಲೂ ಅಂತಹ ಘಟನೆ ನಡೆದಿದೆ.
ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದ ಕಾಫಿನಾಡಿಗರಿಗೆ ಭೂಕಂಪನದ ಅನುಭವ ಆಗಿರುವ ಘಟನೆ ನಡೆದಿದೆ. ಭೂಮಿ ಒಳಗಿಂದ ಭಾರೀ ಶಬ್ಧ ಕೇಳಿ ಬಂದಿದ್ದು, ಇದರಿಂದ ಭಯಗೊಂಡು ಮನೆಯಿಂದ ಜನರು ಓಡಿ ಹೊರಗೆ ಬಂದಿರುವ ಘಟನೆ ನಡೆದಿದೆ.
ಓದಿ: ಶಿವಮೊಗ್ಗದಲ್ಲಿ ಕಂಪಿಸಿದ ಭೂಮಿ: ಭಯಭೀತರಾಗಿ ಮನೆಯಿಂದ ಹೊರ ಬಂದ ಜನ!
ಜಿಲ್ಲೆಯ ಕೊಪ್ಪ, ಎನ್.ಆರ್.ಪುರ, ತರೀಕೆರೆ ತಾಲೂಕಿನ ಕೆಳ ಭಾಗದ ಸುತ್ತಮುತ್ತ ಈ ರೀತಿಯ ಶಬ್ಧ ಕೇಳಿ ಬಂದಿದ್ದು, ರಾತ್ರಿ 10.21ರಿಂದ 10.23 ರವರೆಗೆ ಈ ಅನುಭವ ವಾಗಿದೆ. ಬಾಂಬ್ ಸ್ಫೋಟಗೊಂಡಿರುವ ರೀತಿಯಲ್ಲಿ ಶಬ್ಧ ಕೇಳಿ ಬಂದಿದ್ದು, ಇದರಿಂದ ಈ ಭಾಗದ ಜನರು ಭಯಭೀತರಾಗಿದ್ದಾರೆ.