ಶಿವಮೊಗ್ಗ: ಬೇಲಿಗೆ ಹಾಕಿದ್ದ ಬಲೆಗೆ ಸಿಲುಕಿದ್ದ ಜಿಂಕೆಯೊಂದು ನರಳಿ, ನರಳಿ ಸಾವನ್ನಪ್ಪಿರುವ ಘಟನೆ ಹೊಸನಗರ ತಾಲೂಕಿನ ಬೇಳೂರು ಗ್ರಾಮದಲ್ಲಿ ನಡೆದಿದೆ.
ಕಾಡು ಪ್ರಾಣಿಗಳ ಹಾವಳಿ ತಡೆಯಲು ಅಡಿಕೆ ತೋಟದ ಬೇಲಿಗೆ ಮೀನಿನ ಬಲೆ ಹಾಕಿದ್ದರು. ಈ ವೇಳೆ ಆಹಾರ ಅರಸಿ ನಿನ್ನೆ ರಾತ್ರಿ ಇಲ್ಲಿಗೆ ಬಂದಿದ್ದ ಜಿಂಕೆ ಬಲೆಯಲ್ಲಿ ಸಿಲುಕಿಕೊಂಡಿತ್ತು. ತೋಟದ ಮಾಲೀಕ ವಿನಯ್ ತೋಟಕ್ಕೆ ಬಂದಾಗ ಜಿಂಕೆ ಬಲೆಯಲ್ಲಿ ಸಿಲುಕಿರುವುದು ತಿಳಿದು ಬಂದಿತ್ತು. ಬಳಿಕ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು.
ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಬಂದು ಬಲೆಯಿಂದ ಬಿಡಿಸುವಷ್ಟರಲ್ಲಿ ಜಿಂಕೆ ಸಾಕಷ್ಟು ನಿತ್ರಾಣಗೊಂಡು, ಸಾವನ್ನಪ್ಪಿದೆ. ಅದರ ಮರಣೋತ್ತರ ಪರೀಕ್ಷೆಯನ್ನು ಅರಣ್ಯ ಇಲಾಖೆ ನಡೆಸಿದೆ.