ETV Bharat / city

ಶಿವಮೊಗ್ಗ: ಮನೆ ಮನೆಗಳಲ್ಲಿ ಆಕರ್ಷಕ ದಸರಾ ಬೊಂಬೆ ಪ್ರದರ್ಶನ - shimogga leatest news

ಶಿವಮೊಗ್ಗದ ಅಚ್ಚುತರಾವ್ ಬಡಾವಣೆಯ ಸಿತಾರ ಹಾಗೂ ದುರ್ಗಿಗುಡಿಯ ಎಲ್‌ಎಲ್‌ಆರ್ ರಸ್ತೆಯ ಪ್ರಸನ್ನ ಅವರ ಮನೆಯಲ್ಲಿ ಹಲವಾರು ವರ್ಷಗಳಿಂದ ಗೊಂಬೆ ಪ್ರದರ್ಶನ ಮಾಡಲಾಗುತ್ತಿದ್ದು, ನೋಡುಗರನ್ನು ಆಕರ್ಷಿಸುತ್ತಿದೆ.

dasara-doll-decoration-news-in-shimogga
ಶಿವಮೊಗ್ಗ ಮನೆ ಮನೆಗಳಲ್ಲಿ ಆಕರ್ಷಕ ದಸರಾ ಬೊಂಬೆ ಪ್ರದರ್ಶನ...
author img

By

Published : Oct 24, 2020, 4:40 PM IST

ಶಿವಮೊಗ್ಗ: ನವರಾತ್ರಿ ಹಬ್ಬದಲ್ಲಿ ಗೊಂಬೆ ಕೂರಿಸುವ ಪದ್ಧತಿ ವಿಶೇಷವಾಗಿದೆ. ಮನೆಮನೆಗಳಲ್ಲಿ ಬಣ್ಣಬಣ್ಣದ ಗೊಂಬೆಗಳನ್ನು ಕೂರಿಸುವ ಮಹಿಳೆಯರು ಆರತಿ ಬೆಳಗಿ ಸಂಭ್ರಮಿಸುತ್ತಾರೆ. ಅದೇ ರೀತಿ ಶಿವಮೊಗ್ಗದ ಮನೆ ಮನೆಗಳಲ್ಲಿಯೂ ದಸರಾ ಗೊಂಬೆಗಳು ವಿಜೃಂಭಿಸುತ್ತಿವೆ.

ಶಿವಮೊಗ್ಗ ಮನೆ ಮನೆಗಳಲ್ಲಿ ಆಕರ್ಷಕ ದಸರಾ ಬೊಂಬೆ ಪ್ರದರ್ಶನ

ಶಿವಮೊಗ್ಗದ ಅಚ್ಚುತರಾವ್ ಬಡಾವಣೆಯ ಸಿತಾರ ಹಾಗೂ ದುರ್ಗಿಗುಡಿಯ ಎಲ್‌ಎಲ್‌ಆರ್ ರಸ್ತೆಯ ಪ್ರಸನ್ನ ರವರ ಮನೆಯಲ್ಲಿ ಗೊಂಬೆ ಪ್ರದರ್ಶನ ಮಾಡಲಾಗುತ್ತಿದೆ. ಅವರ ಮನೆಯಲ್ಲಿ ಕೂರಿಸಿರುವ ನೂರಾರು ಗೊಂಬೆಗಳು ಸಾರ್ವಜನಿಕರನ್ನು ಆಕರ್ಷಿಸುತ್ತಿವೆ. ಮೂರು ತಲೆಮಾರಿನಿಂದ ಸಿತಾರ ಅವರ ಮನೆಯಲ್ಲಿ ಗೊಂಬೆಗಳನ್ನು ಕೂರಿಸಲಾಗುತ್ತಿದ್ದು, ಅವುಗಳು ವಿಶೇಷ ಅಲಂಕಾರದಿಂದ ಕಂಗೊಳಿಸುತ್ತಿವೆ. ಈ ಬಾರಿಯೂ ದಶಾವತಾರ, ರಾಮ, ಕೃಷ್ಣ-ರುಕ್ಮಿಣಿ, ಮಹಿಷಾ ಮರ್ಧಿನಿ ಸೇರಿದಂತೆ ಹಲವು ತರಹೇವಾರಿ ವಿಶೇಷತೆಯುಳ್ಳ ಬೊಂಬೆಗಳನ್ನು ಜೋಡಿಸಿದ್ದು, ನೋಡುಗರನ್ನು ಆಕರ್ಷಿಸುತ್ತಿವೆ.

ಪ್ರಸನ್ನ ಅವರ ಮನೆಯಲ್ಲಿ 60 ವರ್ಷಗಳಿಂದ ವಿವಿಧ ರೀತಿಯ ಗೊಂಬೆಗಳನ್ನು ಪ್ರದರ್ಶನಕ್ಕೆ‌ ಇಡಲಾಗುತ್ತದೆ. ಇವರ ಬಳಿ ನೂರು ವರ್ಷದ ಹಿಂದಿನ ಪಟ್ಟದ ಗೊಂಬೆಯಿಂದ ಇಂದಿನ ಆಧುನಿಕ ಗೊಂಬೆಗಳೂ ಇವೆ.

ಪಟ್ಟದ ಗೊಂಬೆಗಳು, ರಂಗನ ಶೇಷಶಯನ ಗೊಂಬೆ, ಮದುವೆಧಾರೆಯ ಗೊಂಬೆಗಳು, ಮದುವೆ ದಿಬ್ಬಣ, ಶ್ರೀರಾಮ, ಸೀತೆ,‌ ಲಕ್ಷ್ಮಣ, ಆಂಜನೇಯ, ವಿಷ್ಣುವಿನ ದಶಾವತಾರ, ಲಕ್ಷ್ಮಿ, ಸರಸ್ವತಿ, ಕೋಲಾಟದ ಗೊಂಬೆಗಳಿಲ್ಲ ರಾರಾಜಿಸುತ್ತಿವೆ. ಇವರ ಮಗ ಸ್ವೀಡನ್‌ಗೆ ಹೋದಾಗ ಮಿಲಿಟರಿ ಪಡೆಯ ಗೊಂಬೆಗಳನ್ನೂ ತಂದಿದ್ದಾರಂತೆ. ಈ ವರ್ಷ ವಿಶೇಷವಾಗಿ ಈ ಗೊಂಬೆಗಳಿಗಾಗಿ ಕೊಟ್ಟಿಗೆ ನಿರ್ಮಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.