ಶಿವಮೊಗ್ಗ: ಜಿಲ್ಲೆಯಲ್ಲಿಂದು 182 ಜನರಿಗೆ ಕೊರೊನಾ ಸೋಂಕು ತಗುಲಿದ್ದು, ಸೋಂಕಿತರ ಸಂಖ್ಯೆ 10,806ಕ್ಕೆ ಏರಿಕೆಯಾಗಿದೆ.
ಇಂದು 295 ಮಂದಿ ಸಂಪೂರ್ಣ ಗುಣಮುಖರಾಗಿ ಮನೆಗೆ ಮರಳಿದ್ದು, ಈವರೆಗೆ ಒಟ್ಟು 7,727 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 8 ಮಂದಿ ಕೊರೊನಾಗೆ ಬಲಿಯಾಗಿದ್ದು, ಮೃತರ ಸಂಖ್ಯೆ 191ಕ್ಕೆ ಏರಿಕೆಯಾಗಿದೆ. ಸದ್ಯ ಜಿಲ್ಲೆಯಲ್ಲಿ 2,400 ಸಕ್ರಿಯ ಪ್ರಕರಣಗಳಿವೆ.
ಮೆಗ್ಗಾನ್ ಕೋವಿಡ್ ಅಸ್ಪತ್ರೆಯಲ್ಲಿ 180, ಕೋವಿಡ್ ಕೇರ್ ಸೆಂಟರ್ಲ್ಲಿ 261, ಖಾಸಗಿ ಆಸ್ಪತ್ರೆಯಲ್ಲಿ 313, ಆರ್ಯುವೇದ ಕಾಲೇಜಿನಲ್ಲಿ 153 ಹಾಗೂ ಹೋಂ ಐಸೋಲೇಷನ್ನಲ್ಲಿ 1,493 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ತಾಲೂಕುವಾರು ಸೊಂಕಿತರ ಸಂಖ್ಯೆ: ಶಿವಮೊಗ್ಗ 100, ಭದ್ರಾವತಿ 31, ಶಿಕಾರಿಪುರ 17, ತೀರ್ಥಹಳ್ಳಿ 11, ಸೊರಬ 06, ಸಾಗರ 05, ಹೊಸನಗರ-07 ಹಾಗೂ ಬೇರೆ ಜಿಲ್ಲೆಯಿಂದ ಬಂದ ಐವರಿಗೆ ಸೋಂಕು ತಗುಲಿದೆ.