ETV Bharat / city

ಶಿವಮೊಗ್ಗ: ಕಾರು ಚಾಲಕನ ಅಜಾಗರೂಕ ಚಾಲನೆ, 7 ಎಮ್ಮೆಗಳು ಸಾವು

ಗಾಡಿಕೊಪ್ಪದ ನಿವಾಸಿ ಮಂಜುನಾಥ್ ಎಂಬುವರಿಗೆ ಸೇರಿದ ಏಳು ಎಮ್ಮೆಗಳು ಕಾರು ಚಾಲಕನ ಅಜಾಗರೂಕತೆಗೆ ಬಲಿಯಾಗಿವೆ.

Careless of Car driver: 7 Buffalo died
ಕಾರು ಚಾಲಕನ ಅಜಾಕರೂಕ ಚಾಲನೆ: 7 ಎಮ್ಮೆಗಳು ಸಾವು; 5ಕ್ಕೆ ಗಾಯ
author img

By

Published : May 16, 2022, 11:09 AM IST

Updated : May 16, 2022, 12:44 PM IST

ಶಿವಮೊಗ್ಗ: ಕಾರು ಚಾಲಕನ ನಿರ್ಲಕ್ಷ್ಯದ ಚಾಲನೆಗೆ ಏಳು ಎಮ್ಮೆಗಳು ಬಲಿಯಾಗಿರುವ ಘಟನೆ ಶಿವಮೊಗ್ಗ ಹೊರ ವಲಯದಲ್ಲಿ ನಡೆದಿದೆ. ಗಾಡಿಕೊಪ್ಪದ ರಾಷ್ಟ್ರೀಯ ಹೆದ್ದಾರಿ‌ 206ರಲ್ಲಿ ಬ್ರಿಜಾ ಕಾರೊಂದು ರಸ್ತೆ ಪಕ್ಕದಲ್ಲಿ ಸಾಗುತ್ತಿದ್ದ ಎಮ್ಮೆಗಳಿಗೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಎಮ್ಮೆಗಳು ಸ್ಥಳದಲ್ಲೇ ಸಾವನ್ನಪ್ಪಿವೆ. 5 ಎಮ್ಮೆಗಳಿಗೆ ಗಾಯಗಳಾಗಿವೆ.

ಗಾಡಿಕೊಪ್ಪದ ನಿವಾಸಿ ಮಂಜುನಾಥ್ ಎಂಬುವರಿಗೆ ಸೇರಿದ ಎಮ್ಮೆಗಳಾಗಿದ್ದು, ನಿನ್ನೆ ರಾತ್ರಿ ಮಲ್ಲಿಗೇನಹಳ್ಳಿ ಕಡೆ ಮೇಯಲು ಹೋಗಿದ್ದ ಎಮ್ಮೆಗಳನ್ನು ಮನೆ ಕಡೆ ಕರೆದುಕೊಂಡು ಬರುವಾಗ ಕಾರು ವೇಗವಾಗಿ ಬಂದು ಎಮ್ಮೆಗಳ ಗುಂಪಿಗೆ ಬಡಿದಿದೆ.

ಕಾರು ಚಾಲಕನ ಅಜಾಗರೂಕ ಚಾಲನೆ, 7 ಎಮ್ಮೆಗಳು ಸಾವು

ಮಂಜುನಾಥ್ ಜೋರಾಗಿ ಕೂಗಿಕೊಳ್ಳುತ್ತಿದ್ದಂತೆಯೇ ಕಾರಿನಲ್ಲಿದ್ದ ಇಬ್ಬರು ಯುವಕರು ಕಾರು ಬಿಟ್ಟು ಪರಾರಿಯಾಗಿದ್ದಾರೆ. ಸ್ಥಳಕ್ಕೆ ಪಶ್ಚಿಮ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾರು ವಿದ್ಯಾನಗರ ಮೂಲದವರದ್ದು ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಗೋಕಾಕ್​ನಲ್ಲಿ ಸ್ವಂತ ತಮ್ಮನ ಹೆಣ ಉರುಳಿಸಿದ ಪಾಪಿ ಅಣ್ಣ!

Last Updated : May 16, 2022, 12:44 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.