ಶಿವಮೊಗ್ಗ : ಬಿಜೆಪಿ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಇಂದು ಶಿವಮೊಗ್ಗದಲ್ಲಿ ಬಿಜೆಪಿ ಕಾರ್ಯಕರ್ತರು ಶೋಭಯಾತ್ರೆ ನಡೆಸಿದರು. ಶಿವಮೊಗ್ಗದ ರಾಮಣ್ಣ ಶ್ರೇಷ್ಟಿ ಪಾರ್ಕ್ನಿಂದ ಪ್ರಾರಂಭವಾದ ಶೋಭಯಾತ್ರೆಯು ಗಾಂಧಿ ಬಜಾರ್, ಶಿವಪ್ಪ ನಾಯಕ ವೃತ್ತ, ನೆಹರು ರಸ್ತೆ, ಗೋಪಿ ವೃತ್ತದ ಮೂಲಕ ನಿಜಲಿಂಗಪ್ಪ ಸಭಾಭವನ ತಲುಪಿತು. ಇಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿ ನಡೆಸಿದ ಭಾಷಣವನ್ನು ಕಾರ್ಯಕರ್ತರಿಗೆ ವೀಕ್ಷಿಸಲು ಅವಕಾಶ ಮಾಡಿ ಕೊಡಲಾಗುತ್ತಿತ್ತು.
ಈ ವೇಳೆ ಮಾತನಾಡಿ ಸಚಿವ ಈಶ್ವರಪ್ಪನವರು, ಏಪ್ರಿಲ್ 6 ಬಿಜೆಪಿಯ ಸಂಸ್ಥಾಪನಾ ದಿನ. ಇದರಿಂದ ಇಂದು ಶಿವಮೊಗ್ಗದಲ್ಲಿ ಕಾರ್ಯಕರ್ತರು ಶೋಭಾಯಾತ್ರೆ ನಡೆಸಿದ್ದಾರೆ. ದೇಶದಲ್ಲಿ ಬಿಜೆಪಿ ಕಾರ್ಯಕರ್ತರು ಪಕ್ಷವನ್ಜು ಶಕ್ತಿಶಾಲಿಯಾಗಿ ಕಟ್ಡಿ, ದೇಶದ ಸಾಮಾನ್ಯ ಜನರಿಗೆ ಅನುಕೂಲವಾಗುವಂತಹ ಆಡಳಿತ ತರಬೇಕು ಎನ್ನುವಂತಹ ಚಿಂತನೆ ಮಾಡುವಂತಹ ದಿನವಾಗಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿರವರು ದೇಶದ ಬಿಜೆಪಿ ಕಾರ್ಯಕರ್ತರಿಗೆ ಕರೆ ಕೊಟ್ಟಿದ್ದಾರೆ. ಸೇವೆಗಳ ಜೊತೆಗೆ ಉತ್ತಮ ಆಡಳಿತ ಕೊಟ್ಟು ದೇಶವನ್ನು ಅಭಿವೃದ್ದಿ ದಿಕ್ಕಿನಲ್ಲಿ ತೆಗೆದುಕೊಂಡು ಹೋಗಬೇಕೆಂದು ಕರೆ ನೀಡಿದ್ದಾರೆ. ಮೋದಿ ಅವರ ಮಾತನ್ನು ನಾವು ಪರಿಪಾಲನೆ ಮಾಡುತ್ತೇವೆ ಎಂದರು. ಶೋಭಯಾತ್ರೆಯಲ್ಲಿ ಶಾಸಕರಾದ ರುದ್ರೇಗೌಡ, ಡಿ.ಎಸ್.ಅರುಣ್, ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಇದ್ದರು.
ಇದನ್ನೂ ಓದಿ: ಬಿಜೆಪಿಯವರು ಸಮಾಜದ ಸಾಮರಸ್ಯ ಹಾಳು ಮಾಡುತ್ತಿದ್ದಾರೆ: ಸಿದ್ದರಾಮಯ್ಯ