ETV Bharat / city

ಬೆಂಗಳೂರಿನ ಕೊರೊನಾ ರೂಲ್ಸ್ ರಾಜ್ಯದ ಇತರೆ ಕಡೆ ಬೇಡ : ಸಚಿವ ಕೆ.ಎಸ್‌.ಈಶ್ವರಪ್ಪ - Bengaluru Corona Rules are not for rest of the state says Minister KS Eshwarappa

ಬೆಂಗಳೂರಿನಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚಿರುವ ಕಾರಣ ಕಠಿಣ ನಿಯಮಗಳನ್ನು ಜಾರಿ ಮಾಡಲಾಗಿದೆ. ರಾಜ್ಯದ ಇತರೆ ಜಿಲ್ಲೆಗಳಿಗೆ ಇದೇ ನಿರ್ಬಂಧ ಬೇಡ. ಈ ಬಗ್ಗೆ ನಾಳಿನ ಸಚಿವ ಸಂಪುಟ ಸಭೆಯಲ್ಲಿ ಸಿಎಂಗೆ ತಿಳಿಸುವುದಾಗಿ ಸಚಿವ ಕೆ.ಎಸ್‌.ಈಶ್ವರಪ್ಪ ಹೇಳಿದ್ದಾರೆ..

Bengaluru's Corona Rules are not for rest of the state: Minister KS Eshwarappa
ಬೆಂಗಳೂರಿನ ಕೊರೊನಾ ರೂಲ್ಸ್ ರಾಜ್ಯದ ಇತರೆ ಕಡೆ ಬೇಡ: ಸಚಿವ ಕೆ.ಎಸ್‌.ಈಶ್ವರಪ್ಪ
author img

By

Published : Jan 5, 2022, 4:24 PM IST

ಶಿವಮೊಗ್ಗ : ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚಿರುವ ಬೆಂಗಳೂರಿನ ಕಠಿಣ ನಿಯಮಗಳು ಕೋವಿಡ್‌ ಕಡಿಮೆ ಇರುವ ಇತರೆ ಜಿಲ್ಲೆಗಳಿಗೆ ಬೇಡ ಎಂದು ಸಿಎಂಗೆ ಮನವಿ ಮಾಡುತ್ತೇನೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.

ಬೆಂಗಳೂರಿನ ಕೊರೊನಾ ರೂಲ್ಸ್ ರಾಜ್ಯದ ಇತರ ಕಡೆ ಬೇಡ : ಸಚಿವ ಕೆ.ಎಸ್‌.ಈಶ್ವರಪ್ಪ

ನಗರದಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಕೊರೊನಾ ಪಾಸಿಟಿವಿ ಸಂಖ್ಯೆ ಹೆಚ್ಚಿದೆ. ಆದರೆ, ಇತರೆ ಜಿಲ್ಲೆಯಲ್ಲಿ ಪಾಸಿಟಿವ್ ಸಂಖ್ಯೆ ಎರಡು, ಐದು ಹೆಚ್ಚಿದ್ರೆ ಹತ್ತು ಇರಬಹುದು. ಬೆಂಗಳೂರಿನಲ್ಲಿ ಕೊರೊನಾ ಕಂಟ್ರೋಲ್ ಮಾಡುವುದು ಎಲ್ಲರ ಜವಾಬ್ದಾರಿ ಇದೆ. ಬೆಂಗಳೂರಿನಲ್ಲಿ ಕೊರೊನಾ ಜಾಸ್ತಿ ಇದೆ ಅಂತಾ ಇತರೆ ಕಡೆ ಕಠಿಣ ನಿಮಯ ಜಾರಿ ಎಷ್ಟು ಸರಿ ಅಂತಾ ನನಗೆ ಜನ ಪ್ರಶ್ನೆ ಮಾಡ್ತಾ ಇದ್ದಾರೆ ಎಂದರು.

ಈಗಾಗಲೇ ಶಿವಮೊಗ್ಗ ಜಿಲ್ಲೆಯಲ್ಲಿ ಜನ ಮಾಸ್ಕ್, ಸ್ಯಾನಿಟೈಜರ್ ಹಾಗೂ ಅಂತರ ಕಾಪಾಡಿಕೊಂಡು ಇದ್ದಾರೆ. ಇಲ್ಲಿ ಸಮಸ್ಯೆ ಇಲ್ಲ. ಆದರೆ, ಇಲ್ಲೂ ಸಹ ಅಂತಹ ಕ್ರಮ ತೆಗೆದುಕೊಂಡರೆ ಹೇಗೆ ಅಂತಾ ಪ್ರಶ್ನೆ ಮಾಡ್ತಾ ಇದ್ದಾರೆ. ಈ ಕುರಿತು ನಾನು ನಾಳೆ ನಡೆಯಲಿರುವ ಕ್ಯಾಬಿನೆಟ್‌ ಸಭೆಯಲ್ಲಿ ಕೇಳುತ್ತೇನೆ ಎಂದು ಸಚಿವ ಈಶ್ವರಪ್ಪ ಹೇಳಿದರು.

ಬೆಂಗಳೂರಿನಲ್ಲಿ ಕಠಿಣ ನಿಮಯ ಜಾರಿಯ ಜೊತೆಗೆ ಗಡಿ ಜಿಲ್ಲೆಯಲ್ಲೂ ಕ್ರಮಕ್ಕೆ ಸೂಚಿಸುತ್ತೇನೆ. ಶಿವಮೊಗ್ಗ ಸೇರಿದಂತೆ ಚಿಕ್ಕಮಗಳೂರು, ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಯಿಂದ ಫೋನ್ ಮಾಡಿ ಕೇಳುತ್ತಿದ್ದಾರೆ. ನಾವು ಖರೀದಿಗೆ ಬೆಂಗಳೂರಿಗೆ ಹೋಗಲ್ಲ. ಇಲ್ಲೇ ವ್ಯಾಪಾರ ಮಾಡುತ್ತಿದ್ದೀವಿ ಅಂತಾ ಹೇಳ್ತಾ ಇದ್ದಾರೆ. ಅಲ್ಲದೆ ವಿದ್ಯಾರ್ಥಿಗಳು ಸಹ ಮನವಿ ಮಾಡ್ತಾ ಇದ್ದು, ಇದರ ಬಗ್ಗೆಯೂ ಸಚಿವ ಸಂಪುಟದಲ್ಲಿ ಹೇಳುತ್ತೇನೆ ಎಂದು ವಿವರಿಸಿದರು.

ಕೊರೊನಾ ಹೇಗೆ ಕಂಟ್ರೋಲ್‌ ಮಾಡಬೇಕು ಅಂತಾ ನಮಗೆ ತಿಳಿದಿದೆ. ಮಾಧ್ಯಮದಲ್ಲಿ‌ ಚೀನಾದಲ್ಲಿ ಅನ್ನ ಸಿಗಲ್ಲ ಅಂತಾ ತೋರಿಸಿದ ತಕ್ಷಣ ನಮ್ಮಲ್ಲೂ‌ ಹಾಗೆ ಆಗುತ್ತದೆ ಎಂದು ಜನ ಗಾಬರಿಯಾಗುತ್ತಾರೆ. ಆದರೆ, ಇಲ್ಲಿನ ಸನ್ನಿವೇಶ ಬೇರೆ ಇದೆ ಎಂದು ಸಚಿವ ಈಶ್ವರಪ್ಪ ಹೇಳಿದರು.

ಕಾಂಗ್ರೆಸ್‌ ಪಾದಯಾತ್ರೆ ಪ್ರತಿಷ್ಠೆಯಾಗಿಸಬಾರದು : ಮೇಕೆದಾಟು ಯೋಜನೆಗಾಗಿ ಕಾಂಗ್ರೆಸ್ ಪಾದಯಾತ್ರೆ ನಡೆಸುವುದು ಸರಿಯಲ್ಲ. ಅದು ಈ ಸಂದರ್ಭದಲ್ಲಿ ಮಾಡುವುದು ಸರಿಯಲ್ಲ. ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಆಡಳಿತ ನಡೆಸಿದವರು. ಅಧಿಕಾರ ನಡೆಸಿದವರು ಸರ್ಕಾರಕ್ಕೆ ಸಲಹೆ ನೀಡಲಿ. ಆದರೆ, ಬೆಂಗಳೂರಿನಲ್ಲಿ ಕೊರೊನಾ ಹೆಚ್ಚಾಗಿರುವ ಸಂದರ್ಭದಲ್ಲಿ ಪಾದಯಾತ್ರೆ ಎಲ್ಲಿಂದ ಮಾಡ್ತೀರಿ? ಎಷ್ಟು ಜನರನ್ನು ಕರೆದು‌ಕೊಂಡು ಹೋಗ್ತಿರಿ? ಅವರಿಗೆಲ್ಲಾ ಕೊರೊನಾ ಅಂಟಿ‌ಕೊಂಡ್ರೆ ಹೇಗೆ? ಅಂತಾ ಯೋಚನೆ ಮಾಡಬೇಕಿದೆ. ಈ ಪಾದಯಾತ್ರೆಯನ್ನು ಕಾಂಗ್ರೆಸ್ ಪ್ರತಿಷ್ಠೆಯಾಗಿ ತೆಗೆದುಕೊಳ್ಳಬಾರದು‌ ಎಂದು ಸಲಹೆ‌ ನೀಡಿದರು.‌

ಅವರ ಹೋರಾಟಕ್ಕೆ ನನ್ನ ವೈಯಕ್ತಿಕ ಬೆಂಬಲವಿದೆ. ಒಂದು‌ ವಿರೋಧ ಪಕ್ಷವಾಗಿ ಏನ್ ಹೋರಾಟ ಮಾಡುತ್ತಾರೂ ಮಾಡಲಿ.‌ ಕೊರೊನಾ ಕಂಟ್ರೋಲ್ ಮಾಡುವಾಗ ನೀವು ಪಾದಯಾತ್ರೆ ಮಾಡ್ತೀವಿ ಅಂತಾ ಸವಾಲು ಹಾಕುವುದು ಸರಿಯಲ್ಲ ಎಂದರು.‌ ಅವರು ಹೋರಾಟ ಮಾಡುವುದು ತಪ್ಪಲ್ಲ, ಅವರು ಸಿಎಂ ಜೊತೆ ಕುಳಿತುಕೊಂಡು‌ ಮಾತನಾಡಲಿ ಎಂದು ಸಚಿವ ಈಶ್ವರಪ್ಪ ಇದೇ ವೇಳೆ ಸಲಹೆ ನೀಡಿದರು.

ಕೊರೊನಾ ಕರ್ಪ್ಯೂ ಅನ್ನು ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಎಂದು ಹೇಳಲು ಇಷ್ಟಪಡುವುದಿಲ್ಲ. ಕೊರೊನಾದಿಂದ ಸತ್ತಾಗ ಯಾರಿಂದಲೂ ಉಳಿಸಿಕೊಳ್ಳಲು ಸಾಧ್ಯವಿಲ್ಲ. ಇದರಲ್ಲಿ ನಾನು ರಾಜಕೀಯ ಮಾಡಲು ಇಷ್ಟಪಡಲ್ಲ. ಅವರಿಂದ ಕೊರೊನಾ ಬಂದು ಅವರಿಗೂ ಸೇರಿದಂತೆ ಇತರರಿಗೂ ಸಹ ಕೊರೊನಾ ಬಂದಾಗ ನೋವು ಅನುಭವಿಸುವಂತಾಗಬಾರದು. ಎಲ್ಲಿ ಸಮಸ್ಯೆ ಇದೆ ಅಲ್ಲಿ ಕ್ರಮ ತೆಗೆದುಕೊಂಡ್ರೆ, ಜನ ಮೆಚ್ಚುತ್ತಾರೆ. ಪಾದಯಾತ್ರೆಗೆ ಏನ್ ಅನುಮತಿ ನೀಡಬೇಕು ಎಂದು ನಾಳಿನ ಕ್ಯಾಬಿನೆಟ್‌ನಲ್ಲಿ‌ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದರು.‌

ಜನತೆ ಮುಂದೆ ಗೂಂಡಾಗಿರಿ ಸರಿಯಲ್ಲ : ರಾಮನಗರದಲ್ಲಿ ಸಿಎಂ ಮುಂದೆ ಎಂಪಿ‌ ಆದವರು, ನಮ್ಮ ಮಂತ್ರಿ ಅಶ್ವತ್ಥ್ ನಾರಾಯಣ ಒಬ್ಬರಿಗೊಬ್ಬರು ಮಾತನಾಡಿದ್ದನ್ನು‌ ರಾಜ್ಯದ ಜನತೆ ನೋಡಿದ್ದಾರೆ. ನಿಮ್ಮ‌ ಸಾಧನೆಯನ್ನು ನಿಮ್ಮ ಭಾಷಣದಲ್ಲಿ ಹೇಳಿ, ನಿಮ್ಮ ಭಾವನೆಯನ್ನು ಹಂಚಿಕೊಳ್ಳಿ, ಈಗ ಕೇಂದ್ರದ ಜಲ‌ಜೀವನ್ ಮಿಷನ್ ಅ‌ನ್ನು ರಾಮಮಗರಕ್ಕೆ ನೀಡಬೇಕಿದೆ. ಇದಕ್ಕೆ ಎಂಪಿ ಸುರೇಶ್ ಸೇರಿದಂತೆ ಎಲ್ಲಾ ಶಾಸಕರು ಸಹಕಾರ ನೀಡಬೇಕಿದೆ. ನಿಮ್ಮ ಸಾಧನೆಯನ್ನು ಹೇಳಿಕೊಳ್ಳಿ. ಆದರೆ, ಗೂಂಡಾಗಿರಿ ಬೇಡ ಎಂದರು.

ಇದನ್ನೂ ಓದಿ: ಹಿರಿಯರು ಸಚಿವ ಸ್ಥಾನ ಬಿಟ್ಟು ಕೊಡಲಿ: ರೇಣುಕಾಚಾರ್ಯ ಹೇಳಿಕೆಗೆ ಈಶ್ವರಪ್ಪ ಹೇಳಿದ್ದೇನು?

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.