ಶಿವಮೊಗ್ಗ: ಆಟೋ ಚಾಲಕನೊಬ್ಬ ಅನುಮಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಗರದ ಎಂಆರ್ಎಸ್ ವೃತ್ತದಲ್ಲಿ ನಡೆದಿದೆ.
ನಗರದ ಕ್ಲಾರ್ಕ್ ಪೇಟೆಯ ಇಜಾಜ್ ಅಹಮದ್(38) ಸಾವನ್ನಪ್ಪಿದ ವ್ಯಕ್ತಿ. ಈತ ಆಟೋ ಚಾಲಕನಾಗಿದ್ದು, ಇಂದು ಬೆಳಗಿನ ಜಾವ ಈತನ ಆಟೋ ಹಾಗೂ ಶವ ಎರಡು ಎಂಆರ್ಎಸ್ ವೃತ್ತ ಬಳಿ ದೊರಕಿದೆ. ಮೃತದೇಹದ ಮೈ ಮೇಲೆ ಗಾಯದ ಗುರುತುಗಳು ಪತ್ತೆಯಾಗಿದೆ.
ಸ್ಥಳಕ್ಕೆ ಕೋಟೆ ಪೊಲೀಸರು ಭೇಟಿ ನೀಡಿ ಅನುಮಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.