ETV Bharat / city

ಸೀಲ್​ಡೌನ್ ಪ್ರದೇಶದಿಂದ ಕಳ್ಳದಾರಿಯಲ್ಲಿ ಸಂಚಾರ: ಪ್ರಶ್ನಿಸಿದ್ದಕ್ಕೆ ಗ್ರಾಮಸ್ಥರ ಮೇಲೆ ಹಲ್ಲೆ

author img

By

Published : Jun 2, 2020, 11:37 PM IST

ಸೀಲ್ ಡೌನ್ ಆದ ಹಕ್ಕಿಪಿಕ್ಕಿ ಕ್ಯಾಂಪ್ ಪ್ರದೇಶದಿಂದ ಜನರು ಕಳ್ಳ ದಾರಿಯ ಮೂಲಕ ಬರುವುದನ್ನು ಪ್ರಶ್ನಿಸಿದ್ದಕ್ಕೆ, ಪಕ್ಕದ ಗ್ರಾಮಸ್ಥರ ಮೇಲೆ ದಾಳಿ ಮಾಡಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಚಿಕ್ಕಮರಡಿಯಲ್ಲಿ ನಡೆದಿದೆ.

Arriving seal-down area, attacking villagers for questioning
ಶಿವಮೊಗ್ಗ: ಸೀಲ್ ಡೌನ್ ಪ್ರದೇಶದಿಂದ ಕಳ್ಳದಾರಿಯಲ್ಲಿ ಆಗಮನ, ಪ್ರಶ್ನಿಸಿದ್ದಕ್ಕೆ ಗ್ರಾಮಸ್ಥರ ಮೇಲೆ ಹಲ್ಲೆ

ಶಿವಮೊಗ್ಗ: ನಿಮ್ಮ ಊರು ಸೀಲ್‌ಡೌನ್ ಆಗಿದೆ,‌ ಹೀಗಾಗಿ ನಿಮ್ಮೂರಿನಿಂದ ಹೊರಬರಬೇಡಿ ಎಂದು ಹೇಳಿದ್ದಕ್ಕೆ ಆಕ್ರೋಶಗೊಂಡ ಜನರು ಪಕ್ಕದ ಗ್ರಾಮದ ಮೇಲೆ ದಾಳಿ ನಡೆಸಿರುವ ಘಟನೆ ಚಿಕ್ಕಮರಡಿಯಲ್ಲಿ ನಡೆದಿದೆ.

ಚಿಕ್ಕಮರಡಿ ಗ್ರಾಮದ ಜನರ ಮೇಲೆ‌ ಹಕ್ಕಿಪಿಕ್ಕಿ ಜನರು ದಾಳಿ ನಡೆಸಿ ಹಲ್ಲೆ ಮಾಡಿದ್ದಾರೆ. ಹಕ್ಕಿಪಿಕ್ಕಿ ಕ್ಯಾಂಪ್ ನ 150 ಕ್ಕೂ ಹೆಚ್ಚು ಜನರು ಸೇರಿ ದಾಳಿ ನಡೆಸಿರುವುದರಿಂದ ಚಿಕ್ಕಮರಡಿ ಗ್ರಾಮದ 15 ಜನರಿಗೆ ಗಂಭೀರ ಗಾಯವಾಗಿದ್ದು, ಗಾಯಾಳುಗಳನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಎರಡು ದಿನದ ಹಿಂದೆ ಹಕ್ಕಿಪಿಕ್ಕಿ ಕ್ಯಾಂಪ್ ನ ಮೂರು ಜನರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಹೀಗಾಗಿ ಹಕ್ಕಿಪಿಕ್ಕಿ ಕ್ಯಾಂಪ್​ನ್ನು ಸೀಲ್ ಡೌನ್ ಮಾಡಲಾಗಿತ್ತು. ಆದರೆ‌ ಕಳ್ಳದಾರಿಯ ಮೂಲಕ ಪಕ್ಕದ ಊರಿಗೆ ಬರುತ್ತಿದ್ದ ಹಕ್ಕಿಪಿಕ್ಕಿ ಕ್ಯಾಂಪ್ ಜನರನ್ನು ಪ್ರಶ್ನಿಸಿದ್ದಕ್ಕೆ ಚಿಕ್ಕಮರಡಿ ಗ್ರಾಮದೊಳಗೆ ನುಗ್ಗಿ ಹಲ್ಲೆ‌ನಡೆಸಿದ್ದಾರೆ.

ಸ್ಥಳಕ್ಕೆ ಗ್ರಾಮಾಂತರ ಪೋಲಿಸರು ದೌಡಾಯಿಸಿದ್ದು, ಡಿವೈಎಸ್ಪಿ ಸೇರಿ ಹಲವು ಹಿರಿಯ ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂ ಹೊಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.