ಶಿವಮೊಗ್ಗ: ಕೃಷಿ ಸಚಿವ ಬಿ.ಸಿ. ಪಾಟೀಲ್ ಅವರು ತೀರ್ಥಹಳ್ಳಿಯ ತುಂಗಾ ಸೇತುವೆ ವೀಕ್ಷಿಸಿ, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
![agriculture-minister-bc-patil-visit-to-tirthahalli-tunga-bridge](https://etvbharatimages.akamaized.net/etvbharat/prod-images/kn-smg-01-bcpatil-7204213_18012021104302_1801f_1610946782_45.jpg)
ಕಾರ್ಕಳಕ್ಕೆ ಸಾಗುವ ಮಧ್ಯೆ ತೀರ್ಥಹಳ್ಳಿ ಪ್ರವಾಸಿ ಮಂದಿರದಲ್ಲಿ ಉಪಹಾರ ಸೇವಿಸಿ, ಸ್ಥಳೀಯ ಬಿಜೆಪಿ ಮುಖಂಡರೂಂದಿಗೆ ಸಮಾಲೋಚನೆ ನಡೆಸಿದರು. ನಂತರ ಪ್ರವಾಸಿ ಮಂದಿರ ಪಕ್ಕದಲ್ಲಿರುವ ತುಂಗಾ ನದಿಗೆ ಮೈಸೂರಿನ ರಾಜ ಜಯಚಾಮರಾಜೇಂದ್ರ ಒಡೆಯರ್ ಅವರ ಹೆಸರಿನಲ್ಲಿ ಸರ್.ಎಂ. ವಿಶ್ವಶ್ವೇರಯ್ಯನವರು ನಿರ್ಮಿಸಿರುವ ಸೇತುವೆ ವೀಕ್ಷಿಸಿ, ವಿಶ್ವಶ್ವೇರಯ್ಯನವರ ತಾಂತ್ರಿಕ ಕೌಶಲ್ಯತೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಓದಿ: ಗಡಿ ವಿಚಾರ ಎತ್ತುವುದು ಸರಿಯಲ್ಲ, ಮಹಾಜನ್ ವರದಿಯೇ ಅಂತಿಮ: ಡಿ.ಕೆ.ಶಿವಕುಮಾರ್
ತದನಂತರ ಕಾರ್ಕಳ ಕಡೆ ಪ್ರಯಾಣ ಬೆಳೆಸಿದರು. ಈ ವೇಳೆ ಜಿಲ್ಲಾ ಕೃಷಿ ಉಪ ನಿರ್ದೇಶಕ ಕಿರಣ್ ಕುಮಾರ್ ಸಚಿವರಿಗೆ ಸಾಥ್ ನೀಡಿದರು.