ಮೈಸೂರು: ನಮ್ಮ ತಂದೆ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಹಿಜಾಬ್ ಗೂ ಕಾವಿ ಬಟ್ಟೆಗೂ ಹೋಲಿಕೆ ಮಾಡಿಲ್ಲ. ಕೆಲವು ಮಾಧ್ಯಮಗಳು ಹಾಗೂ ಬಿಜೆಪಿಗರು ಇದನ್ನು ವಿವಾದಾತ್ಮಕವಾಗಿ ತಿರುಚಿದ್ದಾರೆ ಎಂದು ಶಾಸಕ ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ನಗರಲ್ಲಿಂದು ಪ್ರತಿಕ್ರಿಯಿಸಿದ ಅವರು, ಎಲ್ಲಾ ಧರ್ಮಗಳಲ್ಲೂ ತಲೆಯ ಮೇಲೆ ಬಟ್ಟೆ ಹಾಕಿಕೊಳ್ಳುವ ಸಂಸ್ಕೃತಿ ಇದೆ ಎಂಬುದನ್ನು ಹೇಳಿದ್ದಾರೆ. ಹಿಜಾಬ್ ಹಾಗೂ ಸ್ವಾಮೀಜಿಗಳ ಕಾವಿ ಬಗ್ಗೆ ಹೇಳಿಕೆ ನೀಡಿಲ್ಲ. ಜನಸಾಮಾನ್ಯರಿಗೆ ಅರ್ಥ ಮಾಡಿಸಲು ಈ ರೀತಿ ಹೇಳಿರುವುದಾಗಿ ಸಮರ್ಥಿಸಿಕೊಂಡಿದ್ದಾರೆ.
ಇದರಲ್ಲಿ ವಿವಾದ ಮಾಡುವುದು ಏನಿದೆ. ಬಿಜೆಪಿಯವರು ಮತ್ತು ಬಿಜೆಪಿಯ ಐಟಿ ಸೆಲ್ ಹೇಳಿಕೆಯನ್ನು ತಿರುಚಿ ವಿವಾದ ಉಂಟು ಮಾಡುತ್ತಿದೆ ಎಂದು ಯತೀಂದ್ರ ಸಿದ್ದರಾಮಯ್ಯ ಆರೋಪಿಸಿದರು. ಎಸ್ಎಸ್ಎಲ್ ಸಿ ಪರೀಕ್ಷೆ ಬರೆಯಲು ಮುಸ್ಲಿಂ ಹೆಣ್ಣು ಮಕ್ಕಳಿಗೆ ದುಪ್ಪಟ್ಟ ಬಳಸಲು ಅವಕಾಶ ಮಾಡಿಕೊಡಬೇಕೆಂದು ಸಿದ್ದರಾಮಯ್ಯ ಈ ರೀತಿ ಹೇಳಿದ್ದಾರೆ ಎಂದರು.
ಎಲ್ಲಾ ಧರ್ಮಗಳಲ್ಲಿ ಶಿರವಸ್ತ್ರ ಧರಿಸುವ ಸಂಸ್ಕೃತಿ ಇದೆ. ಹಿಂದೂ ಮಹಿಳೆಯರು, ಜೈನ ಮಹಿಳೆಯರು ತಲೆಗೆ ದುಪ್ಪಟ್ಟಾ ಧರಿಸುತ್ತಾರೆ. ಅಂತೆಯೇ ಸ್ವಾಮೀಜಿಗಳು ತಲೆಯ ಮೇಲೆ ದುಪ್ಪಟ್ಟಾ ಹಾಕುತ್ತಾರೆ ಎಂಬುದನ್ನು ಹೇಳಿದ್ದಾರೆ. ಅದನ್ನು ಬಿಟ್ಟು ಹಿಜಾಬ್ ಬಗ್ಗೆ ನಮ್ಮ ತಂದೆ ಮಾತನಾಡಿಲ್ಲ ಎಂದು ಯತೀಂದ್ರ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.
ಓದಿ : ನನ್ಗೆ ಸ್ವಾಮೀಜಿಗಳ ಮೇಲೆ ಗೌರವವಿದೆ, ನೀವ್ ಯಾವ್ದ್ ಯಾವ್ದಕ್ಕೋ ಲಿಂಕ್ ಮಾಡ್ಬೇಡಿ.. ಮಾಧ್ಯಮದವರ ಮೇಲೆ ಸಿದ್ದು ಗರಂ