ETV Bharat / city

ನಮ್ಮ ಜಾಗವನ್ನು ನಾವು ಭದ್ರ ಮಾಡಿಕೊಳ್ಳಲು ಬೋರ್ಡ್ ಹಾಕಿಸಿದ್ದೇವೆ: ಪ್ರಮೋದಾದೇವಿ ಒಡೆಯರ್

author img

By

Published : Jan 2, 2021, 7:46 PM IST

ನಮ್ಮ ಜಾಗವನ್ನು ನಾವು ಭದ್ರ ಮಾಡಿಕೊಳ್ಳಬೇಕು ಎನ್ನುವ ಕಾರಣಕ್ಕಾಗಿ ಬೋರ್ಡ್ ಹಾಕಿಸಿದ್ದೇವೆ. ನಮ್ಮ ಆಸ್ತಿಯನ್ನು ನಾವು ಸುರಕ್ಷತೆ ಮಾಡುತ್ತಿದ್ದೇವೆ. ಹೀಗಾಗಿ ಯಾರಿಗೋ ತೊಂದರೆ ಕೊಡಬೇಕು ಅನ್ನುವುದು ನನ್ನ ಉದ್ದೇಶ ಅಲ್ಲ. ಮುಂದೆಯೂ ಅಗತ್ಯಬಿದ್ದರೆ ಹೆಲಿಪ್ಯಾಡ್ ಬಳಸಿಕೊಳ್ಳಲಿ ಎಂದು ಹೆಲಿಪ್ಯಾಡ್ ಜಾಗಕ್ಕೆ ಬೇಲಿ ಹಾಕಿದ ವಿಚಾರವಾಗಿ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಹೇಳಿದರು.

we-are-ready-to-take-care-of-our-property
ರಾಣಿ ಪ್ರಮೋದಾದೇವಿ ಒಡೆಯರ್

ಮೈಸೂರು: ಹೆಲಿಪ್ಯಾಡ್ ಇರುವ ಜಾಗ ನಮ್ಮದು. ಆ ಜಾಗದಲ್ಲಿ ಯಾರೋ ಹೊರಗಿನವರು ಬೇಲಿ ಹಾಕುವುದನ್ನು ಗಮನಿಸಿದ್ದೇವೆ. ಅದಕ್ಕಾಗಿ ನಮ್ಮ ಜಾಗವನ್ನು ನಾವು ಭದ್ರ ಮಾಡಿಕೊಳ್ಳಬೇಕು ಎನ್ನುವ ಉದ್ದೇಶದಿಂದ ಬೋರ್ಡ್ ಹಾಕಿಸಿದ್ದೇವೆ ಎಂದು ಹೆಲಿಪ್ಯಾಡ್ ಜಾಗಕ್ಕೆ ಬೇಲಿ ಹಾಕಿದ ವಿಚಾರವಾಗಿ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಸ್ಪಷ್ಟನೆ ನೀಡಿದರು.

ನಮ್ಮ ಜಾಗವನ್ನು ನಾವು ಭದ್ರ ಮಾಡಿಕೊಳ್ಳಲು ಬೋರ್ಡ್ ಹಾಕಿಸಿದ್ದೇವೆ- ಪ್ರಮೋದಾದೇವಿ ಒಡೆಯರ್

ಈ ಕುರಿತು ಮೈಸೂರಿನಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪ್ರಮೋದಾ ದೇವಿ ಒಡೆಯರ್, ಜೂನ್ ತಿಂಗಳಲ್ಲಿ ಹೈಕೋರ್ಟ್ ನೀಡಿದ ತೀರ್ಪಿನ ಪ್ರಕಾರ ಹೆಲಿಪ್ಯಾಡ್ ಇರುವ ಜಾಗ ನಮ್ಮದು. ಆ ಜಾಗದಲ್ಲಿ ಯಾರೋ ಹೊರಗಿನವರು ಬೇಲಿ ಹಾಕುವುದನ್ನು ಗಮನಿಸಿದ್ದೇವೆ. ನಮ್ಮ ಜಾಗವನ್ನು ನಾವು ಭದ್ರ ಮಾಡಿಕೊಳ್ಳಬೇಕು ಎನ್ನುವ ಕಾರಣಕ್ಕಾಗಿ ಬೋರ್ಡ್ ಹಾಕಿಸಿದ್ದೇವೆ. ನಮ್ಮ ಆಸ್ತಿಯನ್ನು ನಾವು ಸುರಕ್ಷತೆ ಮಾಡುತ್ತಿದ್ದೇವೆ. ಹೀಗಾಗಿ ಯಾರಿಗೋ ತೊಂದರೆ ಕೊಡಬೇಕು ಎನ್ನುವುದು ನನ್ನ ಉದ್ದೇಶ ಅಲ್ಲ. ಮುಂದೆಯೂ ಅಗತ್ಯಬಿದ್ದರೆ ಹೆಲಿಪ್ಯಾಡ್ ಬಳಸಿಕೊಳ್ಳಲಿ ಎಂದು ಹೇಳಿದರು.

ಓದಿ: ರಾಜಕೀಯಕ್ಕೆ ನಾನು ಸೂಟ್ ಆಗುವುದಿಲ್ಲ : ಪ್ರಮೋದಾ ದೇವಿ ಒಡೆಯರ್

ಕುರುಬರಹಳ್ಳಿ, ಆಲನಹಳ್ಳಿ, ಚೌಡಳ್ಳಿ ಜಾಗದ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಪ್ರಮೋದಾ ದೇವಿ ಒಡೆಯರ್, ಹೈಕೋರ್ಟ್ ಜೂನ್‌ ತಿಂಗಳಲ್ಲಿ ನೀಡಿದ ತೀರ್ಪಿನ ಪ್ರಕಾರ ಸದರಿ ಜಾಗ ನಮ್ಮದು, 1971ರ ದಾಖಲೆಗಳಂತೆ ರಾಜವಂಶಕ್ಕೆ ಸೇರಿದ 1500 ಎಕರೆ ಜಾಗ ಇತ್ತು. 2010ರವರೆಗೂ ಯಾವುದೇ ವಿವಾದ ಇರಲಿಲ್ಲ. ಹರ್ಷಗುಪ್ತಾ ಅವರು ಡಿಸಿ ಆಗಿದ್ದ ಸಂದರ್ಭದಲ್ಲಿ ಸದರಿ ಜಾಗವನ್ನು ಬಿ ಖರಾಬು ಅಂತ ಡಿಸಿ ಕೋರ್ಟ್‌ ತೀರ್ಪು ನೀಡಿತು. ಬಳಿಕ ಬಂದ ವಸ್ತ್ರದ್ ಅವರು ರಾಜವಂಶಸ್ಥರ ಜಾಗ ಅಂತ ಬರೆದರು. ಅವರೇ ತಮ್ಮ ತೀರ್ಪನ್ನು ವಾಪಸ್ ಪಡೆದು ಬಿ ಖರಾಬು ಎಂದರು.

ಇದಾದ ಬಳಿಕ ಶಿಖಾ ಅವರು ಡಿಸಿ ಆಗಿದ್ದ ವೇಳೆ ಅವರು ಮೊದಲ ಬಾರಿ ನೋಟಿಸ್ ಕೊಟ್ಟರು. ಆ ನೋಟಿಸ್ ಆಧಾರದ ಮೇಲೆ ಮಾಲೀಕತ್ವದ ಹಕ್ಕು ಪ್ರತಿಪಾದಿಸಿ ನ್ಯಾಯಾಲಯದಲ್ಲಿ ಅರ್ಜಿ ಹಾಕಿದ್ದೆವು. ಜೂನ್​ನಲ್ಲಿ ತೀರ್ಪು ಬಂದಿದ್ದು, ಸದರಿ ಜಾಗ ನಮ್ಮದು ಅಂತ ಆದೇಶಿಸಲಾಗಿದೆ. ಈಗ ಅಲ್ಲಿ ಎಷ್ಟು ಜಾಗ ಇದೆಯೋ ಎಂಬುದು ಗೊತ್ತಿಲ್ಲ. ಹೊಸದಾಗಿ ಸರ್ವೇ ಮಾಡಿಕೊಡಿ ಎಂದು ಕಂದಾಯ ಇಲಾಖೆಗೆ ಪತ್ರ ಬರೆದಿದ್ದೇವೆ. ಆದರೆ ಇದುವರೆಗೂ ಯಾವುದೇ ಪ್ರಕ್ರಿಯೆ ನಡೆದಿಲ್ಲ‌. ಮುಂದೆ ಏನು ಮಾಡಬೇಕು ಅಂತ ಕಾನೂನು ತಜ್ಞರ ಸಲಹೆ ಪಡೆದು ತೀರ್ಮಾನ ಕೈಗೊಳ್ಳುತ್ತೇವೆ ಎಂದು ಪ್ರಮೋದಾ ದೇವಿ ಒಡೆಯರ್ ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.