ಮೈಸೂರು : ರೀ ಅಶೋಕ್ ಅವರೇ, ಎಷ್ಟು ಸಾರಿ ಹೇಳೋದ್ರೀ, ನಿಮ್ಮೇಲ್ಲೆ ಇದೇ ಮೊದಲಲ್ಲ ಸಾಕಷ್ಟು ಬಾರಿ ಕಂಪ್ಲೇಂಟ್‌ಗಳು ಬಂದಿವೆ. ಆದ್ರೂ ನಾ ಸುಮ್ನಿದ್ದೆ. ಮೊದಲು ಈ ಕೆಲಸಗಳನ್ನ ಮಾಡ್ಸ್‌ರೀ.. ಹೀಗೆ ವರುಣಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಪುರಸಭೆ ಮುಖ್ಯಾಧಿಕಾರಿಗೆ ಆವಾಜ್ ಹಾಕಿದ ಟಿ.ನರಸೀಪುರ ತಾಲೂಕಿನ ಹೆಳವರಹುಂಡಿ ಗ್ರಾಮದಲ್ಲಿ ನಡೆಯಿತು.
ನಮ್ಮ ಗ್ರಾಮಕ್ಕೆ ಯಾವುದೇ ಅನುದಾನ ಬಂದಿಲ್ಲ. ಮನೆ ನಿರ್ಮಾಣ,ಸಮುದಾಯ ಭವನಗಳು ಸೇರಿ ಯಾವುದೇ ಕಾಮಗಾರಿ ನಡೆಯುತ್ತಿಲ್ಲ. ಹಕ್ಕು ಪತ್ರಗಳನ್ನು ನೀಡದೆ ಪುರಸಭೆ ಅಧಿಕಾರಿಗಳು ನಿರ್ಲ್ಯಕ್ಷ ತೋರುತ್ತಿದ್ದಾರೆ ಎಂದು ಗ್ರಾಮಸ್ಥರು ಶಾಸಕರ ವಿರುದ್ಧ ಕಿಡಿಕಾರಿದರು. ಇದರಿಂದ ಸಿಟ್ಟಿಗೆದ್ದ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಪುರಸಭೆ ಮುಖ್ಯಾಧಿಕಾರಿ ಅಶೋಕ್ರನ್ನು ಸ್ಥಳಕ್ಕೆ ಕರೆಯಿಸಿಕೊಂಡು ಕ್ಲಾಸ್ ತೆಗೆದುಕೊಂಡ್ರು.
ನಿಮ್ಮ ಬಗ್ಗೆ ಹಲವು ದೂರುಗಳು ಬರುತ್ತಿವೆ. ಜನರ ಕೆಲಸಗಳನ್ನು ಮಾಡುವುದಾದ್ರೆ ಮಾಡಿ, ಇಲ್ಲವಾದ್ರೆ ಬೇರೆ ಕಡೆ ಹೋಗಿ ಎಂದು ಆವಾಜ್ ಹಾಕಿದ್ದಾರೆ. ನಮ್ಮವರು ಹೇಳಿದರು ಎಂಬ ಕಾರಣಕ್ಕೆ ನಿಮ್ಮನ್ನು ಉಳಿಸಿಕೊಂಡಿದ್ದೇನೆ.. ಸಾರ್ವಜನಿಕರು ನಮ್ಮನ್ನು ಪ್ರಶ್ನೆ ಮಾಡುತ್ತಿದ್ದಾರೆ ಏನು ಹೇಳಬೇಕು ಎಂದು ಕಿಡಿಕಾರಿದರು.