ಮೈಸೂರು: ಗ್ರಾ.ಪಂಚಾಯತ್ ಮಾಜಿ ಅಧ್ಯಕ್ಷರನ್ನೇ ಸೋಲಿಸಿ, ಇದೇ ಮೊದಲ ಬಾರಿಗೆ ಗಿರಿಜನ ಅಭ್ಯರ್ಥಿಯೊಬ್ಬರು ವಿಜಯಶಾಲಿಯಾಗಿದ್ದಾರೆ.
ಹುಣಸೂರು ತಾಲೂಕಿನ ಹರಳಹಳ್ಳಿ ಕ್ಷೇತ್ರದಿಂದ ಮಾಜಿ ಅಧ್ಯಕ್ಷ ರಾಜನಾಯ್ಕರ ವಿರುದ್ಧ ಗಿರಿಜನ ಅಭ್ಯರ್ಥಿ ಅಣ್ಣಯ್ಯ ಗೆಲುವು ಸಾಧಿಸಿದ್ದಾರೆ.
ರಾಜನಾಯ್ಕ ಈ ಬಾರಿಯ ಚುನಾವಣೆಯಲ್ಲೂ ಗೆಲುವಿನ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ, ಮತದಾರರು ಈ ಬಾರಿ ಗಿರಿಜನ ಅಭ್ಯರ್ಥಿ ಅಣ್ಣಯ್ಯಗೆ ಮಣೆ ಹಾಕಿದ್ದಾರೆ.