ಮೈಸೂರು: ಚಾಮರಾಜ ವಿಧಾನಸಭಾ ಕ್ಷೇತ್ರದಲ್ಲಿ ಹರೀಶ್‌ಗೌಡನಿಗೆ ಟಿಕೆಟ್ ತಪ್ಪಿಸಿ ಪ್ರೊ. ಕೆ ಎಸ್ ರಂಗಪ್ಪನವರಿಗೆ ಕೊಡಲು ಹೆಚ್ ಡಿ ಕುಮಾರಸ್ವಾಮಿ ಮತ್ತು ಸಾ ರಾ ಮಹೇಶ್ ಕಾರಣ. ಆದ್ರೂ ರಂಗಪ್ಪ ಅಸಮಾಧಾನ ಹೊರಹಾಕಿರುವುದು ಆಶ್ಚರ್ಯ ತಂದಿದೆ ಎಂದು ಶಾಸಕ ಜಿ ಟಿ ದೇವೇಗೌಡ ಹೇಳಿದರು.
ಜಲದರ್ಶಿನಿ ಅತಿಥಿ ಗೃಹದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೆ ಎಸ್ ರಂಗಪ್ಪ ಅವರು ಹೆಚ್ ಡಿ ದೇವೇಗೌಡ, ಕುಮಾರಸ್ವಾಮಿ ಸಂಬಂಧಿಗಳು. ಅಸಮಾಧಾನ ಬರುತ್ತೆ, ನಂತರ ಅದು ಕಡಿಮೆಯಾಗುತ್ತದೆ. ರಂಗಪ್ಪ ಅವರನ್ನು ರಾಜಕೀಯಕ್ಕೆ ಕರೆತಂದವರು ಹೆಚ್‌ಡಿಡಿ ಕುಟುಂಬ ಎಂದರು.
ಇನ್ನು ಶಾಸಕ ಸಾ ರಾ ಮಹೇಶ್ ಬಗ್ಗೆ ಪದೇಪದೆ ಪ್ರತಿಕ್ರಿಯೆ ನೀಡುವುದಿಲ್ಲ. ಮಾಜಿ ಸಚಿವ ಚೆಲುವರಾಯ ಸ್ವಾಮಿ ಮೈಸೂರಿನಲ್ಲಿ ನಡೆದ ಚಿಂತನ ಮಂಥನ ಸಭೆಯಲ್ಲಿ ಏನು ಮಾತನಾಡಿದ್ದಾರೋ ಗೊತ್ತಿಲ್ಲ. ನಾನು ಸಭೆಗೆ ಹೋಗಿಲ್ಲವೆಂದು ತಿಳಿಸಿದರು. ದಸರಾ ಯುವ ಸಂಭ್ರಮ ನಾಳೆ ಆರಂಭವಾಗುತ್ತಿದೆ. 278 ತಂಡಗಳು ಆಗಮಿಸುತ್ತಿದ್ದು, 10 ದಿನಗಳ ವಿಸ್ತರಣೆ ಮಾಡಲಾಗುತ್ತಿದೆ. ನನ್ನ ಕ್ಷೇತ್ರದಲ್ಲಿರುವ ಸಮಸ್ಯೆಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸುತ್ತಿದ್ದೇನೆ ಎಂದರು.