ETV Bharat / city

ಪಾಚಿಯಿಂದ ಪೌಷ್ಟಿಕ ಆಹಾರ: ಕೊರೊನಾ ರೋಗಿಗಳಿಗೆ ವರವಾದ 'ಸ್ಪಿರುಲಿನಾ ಚಿಕ್ಕಿ’

ಸ್ಪಿರುಲಿನಾ ಚಿಕ್ಕಿ ಸೇವಿಸುವುದರಿಂದ ದೇಹದಲ್ಲಿ ಪೌಷ್ಟಿಕಾಂಶ ಹೆಚ್ಚಳವಾಗುತ್ತದೆ. ಹಾಗಾಗಿ ಸರ್ಕಾರಿ ಹಾಗೂ ಖಾಸಗಿ ಸಹಯೋಗದಲ್ಲಿ ಸ್ಪಿರುಲಿನಾ ಚಿಕ್ಕಿಯನ್ನು ತಯಾರಿಸಿ ವೈದ್ಯರು, ನರ್ಸ್, ಸಿಬ್ಬಂದಿ ಹಾಗೂ ಕೊರೊನಾ ಸೋಂಕಿತರಿಗೆ ನೀಡಲಾಗುತ್ತಿದೆ.

ಪಾಚಿಯಿಂದ ಪೌಷ್ಟಿಕ ಆಹಾರ
ಪಾಚಿಯಿಂದ ಪೌಷ್ಟಿಕ ಆಹಾರ
author img

By

Published : Apr 28, 2020, 12:16 PM IST

Updated : Apr 28, 2020, 5:38 PM IST

ಮೈಸೂರು: ರೋಗ ನಿರೋಧಕ ಶಕ್ತಿ ಇಲ್ಲದೇ ಬಳಲುತ್ತಿರುವವರಿಗೆ ಹಾಗೂ ಕೊರೊನಾ ವಾರಿಯರ್ಸ್​ಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ‘ಸ್ಪಿರುಲಿನಾ ಚಿಕ್ಕಿ’ ರಾಮಬಾಣವಾಗಿದೆ. ಮೈಸೂರಿನ ಕೇಂದ್ರೀಯ ಆಹಾರ ಸಂಸ್ಕರಣಾ ಸಂಸ್ಥೆಯು ಕೊರೊನಾ ಸೋಂಕಿತರಿಗೆ ಜೀವ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಕಾರ್ಯಕ್ಕೆ ಮುಂದಾಗಿದ್ದು, ಸ್ಪಿರುಲಿನಾ ಚಿಕ್ಕಿಯನ್ನು ಸರ್ಕಾರಿ ಹಾಗೂ ಖಾಸಗಿ ಸಹಯೋಗದಲ್ಲಿ ತಯಾರಿಸುತ್ತಿದೆ.

ಸ್ಪಿರುಲಿನಾ ಚಿಕ್ಕಿ ದೇಹದಲ್ಲಿ ಪೌಷ್ಟಿಕತೆ ಹೆಚ್ಚಳವಾಗುವಂತೆ ಮಾಡುತ್ತದೆ. ಸ್ಪಿರುಲಿನಾ ಪಾಚಿಯಲ್ಲಿ ಉತ್ತಮ ಸೂಕ್ಷ್ಮ ಪೋಷಕಾಂಶಗಳಿದ್ದು ಜೊತೆಗೆ ನೆಲಗಡಲೆಯನ್ನು ಸೇರಿಸುವುದರಿಂದ ಪ್ರೋಟೀನ್​ ಒದಗಿಸುತ್ತದೆ. ಇದು ಎ-ಜೀವಸತ್ವ, ಬೀಟಾ ಕೆರೋಟಿನ್ ಹಾಗೂ ಸುಲಭವಾಗಿ ಅರಗಬಲ್ಲ ಪ್ರೋಟೀನ್​ಗಳನ್ನು ಒಳಗೊಂಡಿದೆ.

ಸ್ಪಿರುಲಿನಾ ಚಿಕ್ಕಿ ಮಾಡಲು ಮೊದಲು ಸಮುದ್ರದದಲ್ಲಿ ಹಾಗೂ ನದಿಗಳಲ್ಲಿ ಆಳವಾದ ಸ್ಥಳಗಳಲ್ಲಿ ಸಿಗುವ ಪಾಚಿಗಳನ್ನು ತೆಗೆದುಕೊಂಡು ಬಂದು ಅದನ್ನು ಒಂದು ತಿಂಗಳ ಕಾಲ ಒಣಗಿಸಿ, ಹದ ಮಾಡಿ ನಂತರ ಅದನ್ನು ರುಚಿಕರ ತಿಂಡಿಯಾಗಿ ಬಳಸಿಕೊಳ್ಳಲಾಗುವುದು. ಸ್ಪಿರುಲಿನಾ ಚಿಕ್ಕಿಯನ್ನು ಸರ್ಕಾರಿ ಹಾಗೂ ಖಾಸಗಿ ಸಹಯೋಗದಲ್ಲಿ ತಯಾರಿಸಲಾಗುತ್ತಿದ್ದು, ಸಿಎಫ್‌ಟಿಆರ್‌ಐ ತಜ್ಞರು ಈ ತಿನಿಸುಗಳನ್ನು ರೂಪಿಸಿದರೆ, ಸಂಸ್ಥೆಯ ಲೈಸೆನ್ಸ್​ದಾರರು ಅವುಗಳನ್ನು ಬೃಹತ್ ಪ್ರಮಾಣದಲ್ಲಿ ತಯಾರಿಸಲು ಬೇಕಾದ ಸವಲತ್ತುಗಳನ್ನು ಒದಗಿಸುತ್ತಿದ್ದಾರೆ. ಮಕ್ಕಳು, ಮಹಿಳೆಯರು ಹಾಗೂ ಆರೋಗ್ಯ ಕಾರ್ಯಕರ್ತರಿಗೆ ಪೋಷಕಾಂಶಗಳ ಕೊರತೆ ಆಗದಂತೆ ಆಹಾರಗಳನ್ನು ಪೂರೈಸುತ್ತಿದೆ.

ಈಗಾಗಲೇ ಕೋವಿಡ್-19 ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡುತ್ತಿರುವ ವೈದ್ಯರು, ನರ್ಸ್, ಸಿಬ್ಬಂದಿಗೆ ಇದನ್ನು ಪೂರೈಕೆ ಮಾಡಲಾಗುತ್ತಿದೆ. ಸಿಎಫ್‌ಟಿಆರ್‌ಐಗೆ ಬೇಡಿಕೆ ಬಂದರಷ್ಟೇ ಸ್ಪಿರುಲಿನಾ ಚಿಕ್ಕಿ ಕಳುಹಿಸಲಾಗುವುದು.

ಮೈಸೂರಿನಲ್ಲಿ ಪಾಚಿಯಿಂದ ಪೌಷ್ಟಿಕ ಆಹಾರ ತಯಾರಿಕೆ

ಈಟಿವಿ ಭಾರತದೊಂದಿಗೆ ಮಾತನಾಡಿದ ಉದ್ಯಮಿ ಬಾಲಕೃಷ್ಣ ಭಟ್, ಸ್ಪಿರುಲಿನಾ ಚಿಕ್ಕಿ ಅತ್ಯಂತ ಪೌಷ್ಟಿಕಾಂಶದಿಂದ ಕೂಡಿದೆ. ಕೊರೊನಾ ರೋಗಿಗಳಿಗೆ ವೇಗವಾಗಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಸ್ಪಿರುಲಿನಾ ಪಾಚಿಯಲ್ಲಿರುವ ಉತ್ತಮ ಸೂಕ್ಷ್ಮ ಪೋಷಕಾಂಶಗಳ ಜೊತೆಗೆ ನೆಲಗಡಲೆಯು ಉತ್ತಮ ಪ್ರೋಟೀನ್ ಒದಗಿಸುತ್ತದೆ ಎಂದರು.

Last Updated : Apr 28, 2020, 5:38 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.