ETV Bharat / city

ಕುಡಿದ ಅಮಲಿನಲ್ಲಿ ತಂದೆಯನ್ನೇ ಕೊಲೆಗೈದ ಮಗ - murder case

ಹಣ ಕೊಡು, ಇಲ್ಲವಾದರೆ ಜಮೀನು ಬರೆದುಕೊಡು ಎಂದು ಜಗಳವಾಡಿದ್ದಾನೆ. ಜಗಳದ ಮಧ್ಯೆ ತಂದೆಯ ಮೇಲೆ ತೀವ್ರ ಹಲ್ಲೆ ನಡೆಸಿದ್ದಾನೆ. ಈ ವೇಳೆ ಗಾಯಗೊಂಡ ಸಣ್ಣಯ್ಯ ಕುಸಿದು ಬಿದ್ದು ಮೃತಪಟ್ಟಿದ್ದಾರೆ..

son-killed-father
ಕುಡಿದ ಅಮಲಿನಲ್ಲಿ ತಂದೆಯನ್ನೇ ಕೊಲೆಗೈದ ಮಗ
author img

By

Published : May 24, 2022, 11:37 AM IST

ಮೈಸೂರು : ಕುಡಿದ ಅಮಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಮಗನೊಬ್ಬ ತಂದೆಯನ್ನು ಕೊಲೆ ಮಾಡಿರುವ ಘಟನೆ ಹುಣಸೂರು ತಾಲೂಕಿನ ಕಸಬಾ ಹೋಬಳಿಯ ಕೆಂಚನಕೆರೆ ಹೊಸಕೋಟೆ ಗ್ರಾಮದಲ್ಲಿ ನಡೆದಿದೆ. 70 ವರ್ಷದ ಸಣ್ಣಯ್ಯ ಕೊಲೆಯಾದ ದುರ್ದೈವಿ.

ಸಣ್ಣಯ್ಯನವರ ಪುತ್ರ ಮಹದೇವ ಎಂಬಾತ ಕುಡಿದು ಬಂದು ಕ್ಷುಲ್ಲಕ ಕಾರಣಕ್ಕೆ ತನ್ನ ತಂದೆಯ ಮೇಲೆ ಜಗಳ ತೆಗೆದಿದ್ದ. ಮೇ 20ರ ಸಂಜೆ ಮಹಾದೇವ ಮನೆಗೆ ಬಂದು ಮಗಳ ಮದುವೆಯ ಸಾಲವನ್ನು ತೀರಿಸಿಲ್ಲ.

ಹಣ ಕೊಡು, ಇಲ್ಲವಾದರೆ ಜಮೀನು ಬರೆದುಕೊಡು ಎಂದು ಜಗಳವಾಡಿದ್ದಾನೆ. ಜಗಳದ ಮಧ್ಯೆ ತಂದೆಯ ಮೇಲೆ ತೀವ್ರ ಹಲ್ಲೆ ನಡೆಸಿದ್ದಾನೆ. ಈ ವೇಳೆ ಗಾಯಗೊಂಡ ಸಣ್ಣಯ್ಯ ಕುಸಿದು ಬಿದ್ದು ಮೃತಪಟ್ಟಿದ್ದಾರೆ.

ಗ್ರಾಮಸ್ಥರ ಮಾಹಿತಿಯ ಮೇರೆಗೆ ಸಣ್ಣಯ್ಯ ಅವರ ಪುತ್ರಿ ಗೌರಮ್ಮ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ಆರೋಪಿ ಮಹದೇವನನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಇದನ್ನೂ ಓದಿ: ಕಾರು ಚಾಲಕ ಸುಬ್ರಹ್ಮಣ್ಯಂ ಕೊಲೆ ಪ್ರಕರಣ: 'ಹೌದು, ನಾನೇ ಹತ್ಯೆ ಮಾಡಿದ್ದು' ಎಂದ ಎಂಎಲ್​ಸಿ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.