ETV Bharat / city

ಸಿದ್ದು ವಿರುದ್ಧದ ಅಕ್ರಮ ನಿವೇಶನ ಆರೋಪ- ಮೈಸೂರಿನಿಂದ ಬೆಂಗಳೂರು ವಿಶೇಷ ಕೋರ್ಟ್‌ಗೆ ಶಿಫ್ಟ್‌ - undefined

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮೈಸೂರಿನಲ್ಲಿ ದಾಖಲಾಗಿದ್ದ ಪ್ರಕರಣವನ್ನು ಬೆಂಗಳೂರು ನ್ಯಾಯಾಲಯಕ್ಕೆ ಶಿಫ್ಟ್​ ಮಾಡಲಾಗಿದೆ. ಅಕ್ರಮ ಭೂ ಒತ್ತುವರಿ, ಅಧಿಕಾರ ದುರ್ಬಳಕೆ ಆರೋಪದಡಿ ಮೈಸೂರು ತಾಲೂಕಿನ ಹಿನಕಲ್​ನಲ್ಲಿ ಸಿದ್ದರಾಮಯ್ಯ ವಿರುದ್ಧ ದೂರು ದಾಖಲಾಗಿತ್ತು.

ಸಿದ್ದರಾಮಯ್ಯ
author img

By

Published : May 11, 2019, 1:41 PM IST

ಮೈಸೂರು : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಅಕ್ರಮ ನಿವೇಶನದ ಆರೋಪ ಪ್ರಕರಣವನ್ನು ಮೈಸೂರು ನ್ಯಾಯಾಲಯದಿಂದ ಬೆಂಗಳೂರು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿದೆ.

ಅಕ್ರಮ ಭೂ ಒತ್ತುವರಿ, ಅಧಿಕಾರ ದುರ್ಬಳಕೆ ಆರೋಪದಡಿ ಮೈಸೂರು ತಾಲೂಕಿನ ಹಿನಕಲ್​ನಲ್ಲಿ ದೂರು ದಾಖಲಾಗಿತ್ತು. ಈ ಪ್ರಕರಣವನ್ನು ನಾಗರಿಕ ಹಿರಿಯ ನ್ಯಾಯಾಧೀಶ, ಸಿಜೆಎಂ ಯಶವಂತ‌ ಕುಮಾರ್,​ ಮೈಸೂರು ಕೋರ್ಟ್​ನಿಂದ ಬೆಂಗಳೂರು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ವರ್ಗಾಯಿಸಿ ಆದೇಶ ಹೊರಡಿಸಿದ್ದಾರೆ.

case shifted to Bangalore court
ಪ್ರಕರಣ ವರ್ಗಾವಣೆ

ಏನಿದು ಪ್ರಕರಣ...

ಸಿದ್ದರಾಮಯ್ಯ ಅವರು, ಮೈಸೂರು ಹಿನಕಲ್ ಪಂಚಾಯತ್‌ ವ್ಯಾಪ್ತಿಯಲ್ಲಿ ಸಾಕಮ್ಮ ಎಂಬುವರ ಸರ್ವೇ ನಂ. 70/4a ನಲ್ಲಿ ಜಮೀನು ಖರೀದಿ ಮಾಡಿದ್ದರು. ಬಳಿಕ ಮುಡಾ(ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ)ದಿಂದ ಅನುಮತಿ ಪಡೆಯದೆ ಸರ್ವೇ ನಂ. 70/4a ರ ಸರ್ಕಾರಿ ಜಾಗದಲ್ಲಿ ಮನೆ ಕಟ್ಟಿದ್ದರು ಎಂದು ಆರೋಪಿಸಲಾಗಿತ್ತು. ಬಳಿಕ 2003ರಲ್ಲಿ ಮನೆಯನ್ನು ಸಿದ್ದರಾಮಯ್ಯ ಮಾರಾಟ ಮಾಡಿದ್ದರು ಎಂಬ ಆರೋಪವನ್ನೂ ಮಾಡಲಾಗಿತ್ತು. ಈ ಬಗ್ಗೆ ಸಾಮಾಜಿಕ ಕಾರ್ಯಕರ್ತ ಗಂಗರಾಜು ಎಂಬವರು, ಸಿದ್ದರಾಮಯ್ಯ ಅಕ್ರಮವಾಗಿ ನಿವೇಶನ ಮಾರಾಟ ಮಾಡಿದ್ದಾರೆ ಎಂದು ಲಕ್ಷ್ಮೀಪುರಂ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣದ ಕುರಿತು ಪೊಲೀಸರು ಬಿ. ರಿಪೋರ್ಟ್ ಹಾಕಿದ್ದರು. ಬಳಿಕ ಬಿ-ರಿಪೋರ್ಟ್ ಪ್ರಶ್ನಿಸಿ ನ್ಯಾಯಾಲಯದ‌ ಮೊರೆ ಹೋಗಿದ್ದ ದೂರುದಾರ, ಮಾಜಿ ಸಿಎಂ ಸಿದ್ದರಾಮಯ್ಯ, ಅಂದಿನ ಮುಡಾ ಅಧ್ಯಕ್ಷ ಸಿ ಬಸವೇಗೌಡ, ಅಂದಿನ‌ ಮುಡಾ ಆಯುಕ್ತ ಧ್ರುವಕುಮಾರ್ ಹಾಗೂ ಈಗಿನ ಮುಡಾ ಆಯುಕ್ತ ಪಿ ಎಸ್ ಕಾಂತರಾಜ್ ವಿರುದ್ಧ ದೂರು ನೀಡಿದ್ದರು.

case shifted to Bangalore court
ಪ್ರಕರಣ ಬೆಂಗಳೂರು ನ್ಯಾಯಾಲಯಕ್ಕೆ ಶಿಫ್ಟ್

ಈಗಾಗಲೇ ಪ್ರಕರಣಕ್ಕೆ‌ ಸಂಬಂಧಿಸಿದಂತೆ ಸುಮಾರು 68 ದಾಖಲೆಗಳ ಪರಿಶೀಲನೆ ಮಾಡಲಾಗಿದೆ. ಇನ್ನೂ 30ಕ್ಕೂ ಅಧಿಕ ದಾಖಲೆಗಳ ಪರಿಶೀಲನೆ ಮಾಡಬೇಕಾಗಿದೆ. ಆದ್ದರಿಂದ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಪ್ರಕರಣವನ್ನು ವರ್ಗಾವಣೆ ಮಾಡಲಾಗಿದೆ. ಜೂನ್ 10 ರಂದು ಬೆಂಗಳೂರಿನ‌ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ದಾಖಲೆಗಳ ಪರಿಶೀಲನೆ ನಡೆಯಲಿದೆ.

Intro:ಸಿದ್ದರಾಮಯ್ಯBody:ಸಿದ್ದರಾಮಯ್ಯ ಅವರ ಮುಡಾ ನಿವೇಶನ ಪ್ರಕರಣ: ಬೆಂಗಳೂರು ನ್ಯಾಯಾಲಯಕ್ಕೆ ಶಿಫ್ಟ್
ಮೈಸೂರು:ಮೈಸೂರು ತಾಲ್ಲೂಕಿನ ಹಿನಕಲ್ ನಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಕ್ರಮ ನಿವೇಶನ ಪ್ರಕರಣವನ್ನು ಮೈಸೂರು ನ್ಯಾಯಾಲಯದಿಂದ ಬೆಂಗಳೂರು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಲಾಗಿದೆ.
ಅಕ್ರಮ ಭೂ ಒತ್ತುವರಿ, ಸರ್ಕಾರಿ ಅಧಿಕಾರ ದುರ್ಬಳಕೆ ಆರೋಪದಡಿ ದಾಖಲಾಗಿದ್ದ ದೂರಿನ ಪ್ರಕರಣವನ್ನು ನಾಗರಿಕ ಹಿರಿಯ ನ್ಯಾಯಾಧಿಶ, ಸಿಜೆಎಂ ಯಶವಂತ‌ ಕುಮಾರ್ ‌ರಿಂದ
ಮೈಸೂರು ಕೋರ್ಟ್ ನಿಂದ ಬೆಂಗಳೂರು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಪ್ರಕರಣ ವರ್ಗಾವಣೆ ಆದೇಶ ಹೊರಡಿಸಿದ್ದಾರೆ.
ಏನಿದು ಪ್ರಕರಣ: ಸಿದ್ದರಾಮಯ್ಯ ಅವರು,ಮೈಸೂರು ಹಿನಕಲ್ ಪಂಚಾಯ್ತಿ‌ ವ್ಯಾಪ್ತಿಯಲ್ಲಿ ಸಾಕಮ್ಮ ಎಂಬುವವರ ಸರ್ವೇನಂ 70/4a ನಲ್ಲಿ ಭೂಸ್ವಾದೀನ ಮಾಡಿರಲಿಲ್ಲ.
ಸ್ವಾಧೀನವಾಗದ  ಜಮೀನು ಖರೀದಿ ಮಾಡಿದ್ದ ಸಿದ್ದರಾಮಯ್ಯ
ಬಳಿಕ ಮುಡಾದಿಂದ ಅನುಮತಿ ಪಡೆಯದೆ ಸರ್ವೇ ನಂ70/4a ರಲ್ಲಿ ಸರ್ಕಾರಿ ಜಾಗದಲ್ಲಿ ಮನೆ ಕಟ್ಟಿದ್ದರು.

ಬಳಿಕ 2003ರಲ್ಲಿ ಬೇರೆಯವರಿಗೆ ಮಾರಾಟ ಮಾಡಿರುವ ಕಟ್ಟಿದ ಮನೆಯನ್ನು  ಸಿದ್ದರಾಮಯ್ಯ ಮಾರಾಟ ಮಾಡಿದ್ದರು.

ಸಾಮಾಜಿಕ ಕಾರ್ಯಕರ್ತ  ಗಂಗರಾಜು ಎಂಬುವರು ಲಕ್ಷ್ಮೀಪುರ ಠಾಣೆಯಲ್ಲಿ ನೀಡಿಯಲ್ಲಿ ಸಿದ್ದರಾಮಯ್ಯ ಅವರು ಅಕ್ರಮವಾಗಿ ನಿವೇಶನ ಮಾರಾಟ ಮಾಡಿದ್ದಾರೆ ಎಂದು ಲಕ್ಷ್ಮಿಪುರಂ ಠಾಣೆಯಲ್ಲಿ ದೂರು ನೀಡಿದ್ದರು.ಪ್ರಕರಣದ ಕುರಿತು ಬಿ. ರಿಪೋರ್ಟ್ ಹಾಕಿದ್ದರು.

ಬಿ ರಿಪೋರ್ಟ್ ಬಗ್ಗೆ ಪ್ರಶ್ನಿಸಿ ನ್ಯಾಯಾಲಯದ‌ ಮೊರೆ ಹೋಗಿದ್ದ ದೂರುದಾರ,ಮಾಜಿ ಸಿಎಂ ಸಿದ್ದರಾಮಯ್ಯ, ಅಂದಿನ ಮುಡಾ ಅಧ್ಯಕ್ಷ ಸಿ ಬಸವೇಗೌಡ, ಅಂದಿನ‌ ಮುಡಾ ಆಯುಕ್ತ ಧ್ರುವಕುಮಾರ್ , ಸದ್ಯ ಮುಡಾ ಆಯುಕ್ತ ಪಿ ಎಸ್ ಕಾಂತರಾಜ್ ವಿರುದ್ಧ ದೂರು ನೀಡಿದ್ದರು.ಸದ್ಯ ಈಗಾಗಲೇ ಪ್ರಕರಣಕ್ಕೆ‌ ಸಂಭಧಿಸಿದಂತೆ ಸುಮಾರು 68 ದಾಖಲೆಗಳ ಪರಿಶೀಲನೆ ಮಾಡಲಾಗಿದ್ದು, 30 ಕ್ಕೂ ಅಧಿಕ ದಾಖಲೆಗಳ ಪರಿಶೀಲನೆ ಮಾಡಬೇಕಾಗಿದೆ.ಆದರಿಂದ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಲಾಗಿದೆ.ಜೂನ್ 10 ರಂದು ಬೆಂಗಳೂರಿನ‌ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಪರಿಶೀಲನೆ ನಡೆಯಲಿದೆ.Conclusion:ಸಿದ್ದರಾಮಯ್ಯ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.