ETV Bharat / city

ಸ್ಯಾಂಡಲ್​ವುಡ್​ ಸ್ಮಗ್ಲಿಂಗ್​ ಜಾಲ ಬೇಧಿಸಿದ ಸಿಸಿಬಿ ಪೊಲೀಸ್​, 1 ಕೋಟಿ ರೂ. ಮೌಲ್ಯದ ಶ್ರೀಗಂಧ ವಶಕ್ಕೆ

author img

By

Published : Dec 15, 2021, 1:38 AM IST

ಕೋಟ್ಯಂತರ ರೂ. ಮೌಲ್ಯದ ಶ್ರೀಗಂಧ ಸಾಗಿಸುತ್ತಿದ್ದ ವೇಳೆ ದಾಳಿ ನಡೆಸಿರುವ ಪೊಲೀಸರು 700 ಕೆಜಿ ಶ್ರೀಗಂಧದ ತುಣುಕು ವಶಕ್ಕೆ ಪಡೆದುಕೊಂಡಿದ್ದಾರೆ.

Sandalwood Smuggling case in mysore
Sandalwood Smuggling case in mysore

ಮೈಸೂರು: ಬೃಹತ್​ ಸ್ಯಾಂಡಲ್​ವುಡ್​​ ಸ್ಮಗ್ಲಿಂಗ್​​ ಜಾಲ ಬೇಧಿಸಿರುವ ಸಿಸಿಬಿ ಪೊಲೀಸರು 1 ಕೋಟಿ ರೂ. ಮೌಲ್ಯದ 700 ಕೆಜಿ ಶ್ರೀಗಂಧ, 15 ಸಾವಿರ ಹಣ, 1 ಗೂಡ್ಸ್ ಕ್ಯಾರಿಯರ್ ವಾಹನ, ಎರಡು ಮೊಬೈಲ್​ ಫೋನ್​ ವಶಕ್ಕೆ ಪಡೆದುಕೊಂಡು ಇಬ್ಬರ ಬಂಧನ ಮಾಡಿದ್ದಾರೆ.

ಡಿಸೆಂಬರ್​ 13ರಂದು ಮೈಸೂರು ನಗರದ ಮಂಡಿ ಪೊಲೀಸ್ ಠಾಣಾ ಸರಹದ್ದಿನಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ. ಮಂಡಿ ಮೊಹಲ್ಲಾದ ಪುಲಕೇಶಿ ರಸ್ತೆ & ಎಂಕೆಡಿಕೆ ರಸ್ತೆಯ 2ನೇ ಕ್ರಾಸ್ ಸೇರುವ ಸ್ಥಳದಲ್ಲಿ ಟಾಟಾ ಗೂಡ್ಸ್ ಕ್ಯಾರಿಯರ್ ವಾಹನದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಶ್ರೀಗಂಧದ ಮರದ ತುಂಡುಗಳನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಇದನ್ನೂ ಓದಿರಿ: ಉತ್ತರದಲ್ಲೂ ದಳಪತಿಗಳಿಗೆ ಆಘಾತ; ಡಿಕೆಶಿ, ಸಿದ್ದರಾಮಯ್ಯ ನೇತೃತ್ವದಲ್ಲಿ 'ಕೈ' ಸೇರಿದ ಕೋನರೆಡ್ಡಿ

ಮೈಸೂರಿನ ಸ್ಮಗ್ಲರ್​​ ಒಬ್ಬರಿಂದ ಶ್ರೀಗಂಧದ ಮರದ ತುಂಡು ಖರೀದಿಸಿಕೊಂಡು ಬೆಂಗಳೂರಿನ ಕಡೆಗೆ ಸಾಗಾಣಿಕೆ ಮಾಡಲು ತೆರಳುತ್ತಿದ್ದಾಗ ಗುಪ್ತ ಮಾಹಿತಿ ಸಂಗ್ರಹಿಸಿದ ಸಿಸಿಬಿ ಪೊಲೀಸರು ದಾಳಿ ನಡೆಸಿ, ದಂಧೆಯಲ್ಲಿ ತೊಡಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಈ ಸಂಬಂಧ ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಸಿಬಿಯಲ್ಲಿ ತನಿಖೆ ಮುಂದುವರೆದಿದೆ. ಸ್ಮಗ್ಲಿಂಗ್ ದಂಧೆಯಲ್ಲಿ ಭಾಗಿಯಾಗಿರುವ ಇತರೇ ಆರೋಪಿಗಳ ಪತ್ತೆಗಾಗಿ ಕಾರ್ಯಾಚರಣೆ ಮುಂದುವರೆದಿದೆ.

ಈ ದಾಳಿಯನ್ನ ಡಿಸಿಪಿ ಗೀತಪ್ರಸನ್ನ ಮಾರ್ಗದರ್ಶನದಲ್ಲಿ ಸಿಸಿಬಿಯ ಎಸಿಪಿ ಸಿ.ಕೆ.ಅಶ್ವಥನಾರಾಯಣ ನೇತೃತ್ವದಲ್ಲಿ ಸಿಸಿಬಿಯ ಇನ್ಸ್‌ಪೆಕ್ಟರ್ ಎ.ಮಲ್ಲೇಶ್, ಎಎಸ್‌ಐ. ಆರ್.ರಾಜು, ಸಿಬ್ಬಂದಿಗಳಾದ ಜೋಸೆಫ್ ನೊರೋನ್ಹ, ರಾಧೇಶ್, ಉಮಾಮಹೇಶ್, ಪುರುಷೋತ್ತಮ, ಅನಿಲ್, ರಘು, ಸುನಿಲ್, ಅರುಣ್‌ಕುಮಾರ್, ಶ್ರೀನಿವಾಸ, ಮಮತ ಪತ್ತೆ ಕಾರ್ಯದಲ್ಲಿ ಭಾಗಿಯಾಗಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.