ETV Bharat / city

ಸಂಸದ ಕಾರ್ಯಕ್ರಮಕ್ಕೆ ಅಡ್ಡಿ ನೀಡುವಷ್ಟು ಅವಿವೇಕಿಗಳಲ್ಲ.. ಸುಮಲತಾ ಅಂಬಿ​ಗೆ ಶಾಸಕ ಸಾ ರಾ ಮಹೇಶ್ ಟಾಂಗ್ - MLA Sa.Ra. Mahesh

ಶಿಷ್ಟಾಚಾರದ ಪ್ರಕಾರ ಯಾರದ್ದು ತಪ್ಪು, ಯಾರದ್ದು ಸರಿ ಎಂಬುದು ತಿಳಿಯಲಿ. ನಾವು ಸಂಸದರ ಕಾರ್ಯಕ್ರಮಕ್ಕೆ ತಡೆ ನೀಡುವಷ್ಟು ಅವಿವೇಕಿಗಳಲ್ಲ. ಅವರನ್ನು ಯಾರೋ ಮಿಸ್‌ ಗೈಡ್‌ ಮಾಡಿರುವುದರಿಂದ ಈ ರೀತಿ ಆಗಿದೆ‌ ಎಂದು ಟಾಂಗ್ ನೀಡಿದರು..

MLA Sa.Ra. Mahesh
ಶಾಸಕ ಸಾ.ರಾ.ಮಹೇಶ್​ ಸುದ್ದಿಗಾರರೊಂದಿಗೆ ಮಾತನಾಡಿದರು.
author img

By

Published : Mar 11, 2022, 2:45 PM IST

ಮೈಸೂರು : ಸಂಸದರ ಕಾರ್ಯಕ್ರಮಕ್ಕೆ ಕಾಂಗ್ರೆಸ್ ನಾಯಕರು ಬರುವ ಪ್ರೋಟೋಕಾಲ್ ಇದೆಯಾ..? ಆದರೆ, ಸುಮಲತಾ ಅವರ ಕಾರ್ಯಕ್ರಮದಲ್ಲಿ ಕಾಂಗ್ರೆಸ್​ ನಾಯಕರು ಭಾಗವಹಿಸಿದ್ದಾರೆ. ಈ ಬಗ್ಗೆ ಕಾನೂನಿನ ಪ್ರಕಾರ ತನಿಖೆಯಾಗಲಿ ಎಂದು ಶಾಸಕ ಸಾ ರಾ ಮಹೇಶ್ ಒತ್ತಾಯಿಸಿದರು.

ಶಾಸಕ ಸಾ ರಾ ಮಹೇಶ್​ ಸುದ್ದಿಗಾರರೊಂದಿಗೆ ಮಾತನಾಡಿರುವುದು..

ಸಂಸದೆ‌ ಸುಮಲತಾ ಅಂಬರೀಶ್ ಕಾರ್ಯಕ್ರಮಕ್ಕೆ ಜೆಡಿಎಸ್ ಕಾರ್ಯಕರ್ತರ ಅಡ್ಡಿ ವಿಚಾರವಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಮುಂಚನಹಳ್ಳಿ ಗ್ರಾಮದ ರಸ್ತೆ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಅನುದಾನದ ನೀಡಿದೆ.

ರೈತರ ಮನವಿ ಮೇರೆಗೆ ಸುಮಲತಾ ಅಂಬರೀಶ್​ ಅವರೂ ಇಲಾಖೆಯಿಂದ ₹50 ಲಕ್ಷ ಅನುದಾನ ನೀಡಿದ್ದಾರೆ. ಹಾಗಾಗಿ, ಅವರೇ ಗುದ್ದಲಿಪೂಜೆ ನೆರವೇರಿಸಲಿ ಎಂದು ನಾನು ಹೋಗಿರಲಿಲ್ಲ. ಆದರೆ, ಅಲ್ಲಿಯೂ ಇಂಜಿನಿಯರ್​ಗಳು ಸರಿಯಾಗಿ ವ್ಯವಸ್ಥೆ ಮಾಡಲಿಲ್ಲ ಎಂಬ ಕಾರಣ ಹೇಳಿ ಹಿಂತಿರುಗಿದ್ದಾರೆ.

ಆದರೆ, ಮತ್ತೆ ಕಾಂಗ್ರೆಸ್​ ನಾಯಕರೊಂದಿಗೆ ಗುದ್ದಲಿಪೂಜೆ ನಡೆಸಲು ಹೋಗಿದ್ದಾರೆ. ಆಗ ನಮ್ಮ ಕಾರ್ಯಕರ್ತರು ವಿರೋಧಿಸಿದ್ದಾರೆ. ಅದಕ್ಕೆ ನಮ್ಮ ಕಾರ್ಯಕರ್ತರ ಮೇಲೆ ಕೇಸು ದಾಖಲಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅವರು ಪಕ್ಷೇತರರಾಗಿ ಗೆದ್ದಿರುವ ಸಂಸದರು ಎಂದು ಲೇವಡಿ ಮಾಡಿದ ಮಾಜಿ ಸಚಿವರು, ಸಂಸದರ ಕಾರ್ಯಕ್ರಮಕ್ಕೆ ಕಾಂಗ್ರೆಸ್ ನಾಯಕರು ಬರುವ ಪ್ರೋಟೋಕಾಲ್ ಇದೆಯಾ.? ಈ ಬಗ್ಗೆ ಕಾನೂನಿನ ಪ್ರಕಾರ ತನಿಖೆಯಾಗಲಿ.

ಶಿಷ್ಟಾಚಾರದ ಪ್ರಕಾರ ಯಾರದ್ದು ತಪ್ಪು, ಯಾರದ್ದು ಸರಿ ಎಂಬುದು ತಿಳಿಯಲಿ. ನಾವು ಸಂಸದರ ಕಾರ್ಯಕ್ರಮಕ್ಕೆ ತಡೆ ನೀಡುವಷ್ಟು ಅವಿವೇಕಿಗಳಲ್ಲ. ಅವರನ್ನು ಯಾರೋ ಮಿಸ್‌ ಗೈಡ್‌ ಮಾಡಿರುವುದರಿಂದ ಈ ರೀತಿ ಆಗಿದೆ‌ ಎಂದು ಟಾಂಗ್ ನೀಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.