ETV Bharat / city

ಜೇಮ್ಸ್ ಚಿತ್ರಕ್ಕೆ ಪುನೀತ್ ವಾಯ್ಸ್ : ಶಿವರಾಜ್ ಕುಮಾರ್ ಸಂತಸ - punith rajkumar voice regained in james movie

ಜೇಮ್ಸ್ ಚಿತ್ರಕ್ಕೆ ನಟ ದಿವಂಗತ ಪುನೀತ್ ರಾಜ್ ಕುಮಾರ್ ಅವರ ಧ್ವನಿಯನ್ನು ಮರುಹೊಂದಾಣಿಕೆ ಮಾಡಲಾಗಿದ್ದು, ನಟ ಶಿವರಾಜ್ ಕುಮಾರ್ ಸಂತೋಷ ವ್ಯಕ್ತಪಡಿಸಿದ್ದಾರೆ..

punith-rajkumar-voice-regained-in-james-movie
ಜೇಮ್ಸ್ ಚಿತ್ರಕ್ಕೆ ಪುನೀತ್ ವಾಯ್ಸ್: ಶಿವರಾಜ್ ಕುಮಾರ್ ಸಂತಸ
author img

By

Published : Apr 19, 2022, 12:09 PM IST

ಮೈಸೂರು : ಜೇಮ್ಸ್ ಚಿತ್ರಕ್ಕೆ ನಟ ದಿವಂಗತ ಪುನೀತ್ ರಾಜಕುಮಾರ್ ಅವರ ಧ್ವನಿಯನ್ನು ಮರು ಹೊಂದಾಣಿಕೆ ಮಾಡಿರುವುದು ತುಂಬಾ ಸಂತೋಷವಾಗಿದೆ. ಈ ಪ್ರಯೋಗ ಚಿತ್ರದ ಬಿಡುಗಡೆಗೂ ಮುನ್ನ ಮಾಡಬಹುದಿತ್ತು ಎಂದು ನಟ ಶಿವರಾಜ್ ಕುಮಾರ್ ಹೇಳಿದ್ದಾರೆ.

ಮೈಸೂರಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶಿವರಾಜ್ ಕುಮಾರ್, ಜೇಮ್ಸ್ ಚಿತ್ರಕ್ಕೆ ಪುನೀತ್ ರಾಜಕುಮಾರ್ ಅವರ ಧ್ವನಿಯನ್ನು ಮರು ಹೊಂದಾಣಿಕೆ ಮಾಡಿರುವ ವಿಚಾರ ತಿಳಿದು ನನಗೆ ನಿಜಕ್ಕೂ ಸಂತಸ ಮತ್ತು ಅಚ್ಚರಿ ಆಗಿದೆ. ಈ ರೀತಿಯ ತಂತ್ರಜ್ಞಾನ ಇದೆ ಎಂಬುದು ವಿಶೇಷವಾಗಿದೆ ಎಂದು ಹೇಳಿದ್ದಾರೆ.

ಜೇಮ್ಸ್ ಚಿತ್ರದ ಪುನೀತ್ ವಾಯ್ಸ್ ಅನ್ನು ತಂತ್ರಜ್ಞರು ಮರು ಹೊಂದಾಣಿಕೆ ಮಾಡಬಹುದು ಎಂದು ಹೇಳಿದ್ದಾರೆ. ಇದು ಯಾವ ರೀತಿ ಎಂಬುದು ನನಗೆ ಸರಿಯಾಗಿ ಗೊತ್ತಿಲ್ಲ. ತಂತ್ರಜ್ಞರಿಂದ ಮಾಹಿತಿ ಪಡೆದು ಇದರ ಬಗ್ಗೆ ತಿಳಿದುಕೊಳ್ಳುತ್ತೇನೆ ಎಂದರು.

ಜೇಮ್ಸ್ ಚಿತ್ರಕ್ಕೆ ಪುನೀತ್ ವಾಯ್ಸ್, ಸಂತಸ ವ್ಯಕ್ತಪಡಿಸಿದ ಶಿವರಾಜ್ ಕುಮಾರ್

ಪುಷ್ಪ ಮತ್ತು ಕೆಜಿಎಫ್ ವಿವಾದದ ಕುರಿತು ಮಾತನಾಡಿದ ಅವರು, ಸಿನಿಮಾ ಕ್ಷೇತ್ರ ಎಂಬುವುದು ಒಂದು ಸಮುದ್ರವಿದ್ದಂತೆ ಅದರಲ್ಲಿ ಯಾರು ಬೇಕಾದರೂ ಈಜಿ ಮೇಲೆ ಹಾಗೂ ಕೆಳಗೂ ಹೋಗಬಹುದು. ಈ ವಿಚಾರವನ್ನು ಸಿನಿಮಾ ಪ್ರೇಕ್ಷಕರಿಗೆ ಬಿಡೋಣ ಎಂದು ತಿಳಿಸಿದರು. ವಿವಾದಗಳ ಬಗ್ಗೆ ತಲೆ ಕೆಡಿಸಕೊಳ್ಳಬಾರದು ಎಂದು ಹೇಳಿದ್ದಾರೆ ಶಿವಣ್ಣ.

ಓದಿ :ಸಂಚಾರಿ ವಿಜಯ್ ಅಭಿನಯದ ಕೊನೆಯ ಚಿತ್ರಕ್ಕೆ ಸಾಥ್ ನೀಡಿದ ಶ್ರೀನಗರ ಕಿಟ್ಟಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.