ETV Bharat / city

ಇಬ್ಬರ ಅಂಗಾಂಗ ದಾನ, 14 ಮಂದಿಯ ಜೀವಕ್ಕೆ ಆಸರೆ - appollo bgs hospital

ಬ್ರೇನ್ ಡೆಡ್ ಆಗಿ ಮೃತಪಟ್ಟಿದ್ದ ಇಬ್ಬರ ಅಂಗಗಳು ಸುಮಾರು 14 ಮಂದಿಗೆ ಆಸರೆಯಾಗಿರುವ ಘಟನೆ ಮೈಸೂರಿನ ಅಪೋಲೊ ಬಿಜಿಎಸ್ ಆಸ್ಪತ್ರೆಯಲ್ಲಿ ನಡೆದಿದೆ.

organ-donation-in-mysore-helped-14-persons
ಇಬ್ಬರ ಅಂಗಾಂಗ ದಾನ, 14 ಮಂದಿಯ ಜೀವಕ್ಕೆ ಆಸರೆ
author img

By

Published : Aug 20, 2021, 1:49 AM IST

ಮೈಸೂರು: ಮೃತಪಟ್ಟ ಇಬ್ಬರು, 14 ಮಂದಿಯ ಜೀವನಕ್ಕೆ ಆಸರೆಯಾಗಿದ್ದಾರೆ. ಹುಣಸೂರಿನ ಲಾರೆನ್ಸ್ (40) ಹಾಗೂ ಕುಶಾಲನಗರದ ಶೋಭಾ (48) ಅಂಗಾಂಗಗಳನ್ನು, ಮೈಸೂರಿನ ಅಪೋಲೊ ಬಿಜಿಎಸ್ ಆಸ್ಪತ್ರೆಯಲ್ಲಿ ದಾನ ಮಾಡಿದ್ದು, ಈ ಅಂಗಗಳು 14 ಜೀವಗಳಿಗೆ ಆಸರೆಯಾಗಿದೆ.

4 ಮೂತ್ರ ಪಿಂಡಗಳು, 2 ಲಿವರ್, 4 ಹೃದಯದ ಕವಾಟ, 4 ಕಾರ್ನಿಯಗಳನ್ನು ದಾನ ಮಾಡಲಾಗಿದ್ದು, ಮೂಲಕ ಒಂದೇ ಬಾರಿ 14 ಜನರಿಗೆ ಮಂದಿ ಜೀವದಾನದ ಜೊತೆಗೆ ಹೊಸ ಚೈತನ್ಯವನ್ನು ಪಡೆಯಲಿದ್ದಾರೆ.

organ donation in Mysore helped  14 persons
ಅಪೋಲೊ ಬಿಜಿಎಸ್ ಆಸ್ಪತ್ರೆ ಪ್ರಕಟಣೆ

ಆಗಸ್ಟ್ 16ರಂದು ಲಾರೆನ್ಸ್ ಅಪಘಾತಕ್ಕೀಡಾಗಿದ್ದು, ಗಂಭೀರ ಸ್ಥಿತಿಯಲ್ಲಿದ್ದರು. ಮೂರನೇ ದಿನ, ಇವರಿಗೆ ಬ್ರೈನ್ ಡೆಡ್ ಎಂದು ವೈದ್ಯರು ಘೋಷಿಸಿದ್ದರು. ಮೆದುಳಿನ ರಕ್ತಸ್ರಾವದಿಂದ ಬಳಲುತ್ತಿದ್ದ ಶೋಭಾ ಕೂಡಾ ಬ್ರೇನ್ ಡೆಡ್ ಸ್ಥಿತಿಯಲ್ಲಿದ್ದು, ಇವರ ಅಂಗಾಗಗಳನ್ನು ದಾನಮಾಡಲಾಗಿತ್ತು.

ಮೈಸೂರಿನ ಅಪೋಲೊ ಬಿಜಿಎಸ್ ಆಸ್ಪತ್ರೆಯ ವೈದ್ಯರು 1994ರ ಮಾನವ ಅಂಗಾಂಗ ಕಸಿ ಕಾಯ್ದೆಯಿಂದ ನಿಗದಿಪಡಿಸಿದ ಆಸ್ಪತ್ರೆಯ ಪ್ರೋಟೋಕಾಲ್ ಪ್ರಕಾರ ಅವರ ಅಂಗಗಳನ್ನು ಬೇರೊಬ್ಬರಿಗೆ ಕಸಿ ಮಾಡಲಾಯಿತು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ವಿಷ್ಣುವಿನ ದಶಾವತಾರಗಳ ಸಂಕೇತವಿರುವ ಅಪರೂಪದ ಆಮೆ ಪತ್ತೆ..!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.