ETV Bharat / city

8 ವರ್ಷದಿಂದ ಅಂಗನವಾಡಿ ಕೇಂದ್ರಕ್ಕೆ ಕರೆಂಟ್ ಇಲ್ಲ: ಅಧಿಕಾರಿಗಳಿಗೆ ಶಾಸಕ ಅಶ್ವಿನ್​ಕುಮಾರ್​ ಕ್ಲಾಸ್​ - anganavadi centre

ಅಂಗನವಾಡಿ ಕೇಂದ್ರಕ್ಕೆ 8 ವರ್ಷಗಳಿಂದ ವಿದ್ಯುತ್​ ಸಂಪರ್ಕ ಇಲ್ಲ ಎಂಬುದೇ ಆಶ್ಚರ್ಯಕರ ಸಂಗತಿ. ಅಧಿಕಾರಿಗಳಾದ ನೀವು ಏನು ಮಾಡುತ್ತಿದ್ದೀರಾ?, ನಾಚಿಕೆ ಆಗಲ್ವಾ. ಏನ್​ ಕೆಲ್ಸಾ ಮಾಡ್ತಾ ಇದೀರಾ ಎಂದು ಶಾಸಕರು ಗುಡುಗಿದರು.

not supply electricity
8 ವರ್ಷದಿಂದ ಅಂಗನವಾಡಿ ಕೇಂದ್ರಕ್ಕೆ ಕರೆಂಟ್ ಇಲ್ಲ
author img

By

Published : Nov 10, 2021, 2:38 PM IST

ಮೈಸೂರು: ತಲಕಾಡಿನ ಅಂಗನವಾಡಿ ಕೇಂದ್ರಕ್ಕೆ ಎಂಟು ವರ್ಷದಿಂದ ವಿದ್ಯುತ್ ಪೂರೈಕೆ ಆಗದೇ ಇರುವುದರಿಂದ ಶಾಸಕ ಅಶ್ವಿನ್​ಕುಮಾರ್ ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಅಂಗನವಾಡಿ ಕೇಂದ್ರಕ್ಕೆ 8 ವರ್ಷಗಳಿಂದ ವಿದ್ಯುತ್​ ಪೂರೈಕೆ ಮಾಡಿಲ್ಲ ಎಂದು ಗ್ರಾಮಸ್ಥರು ಶಾಸಕರ ಗಮನಕ್ಕೆ ತಂದಾಗ ಸಿಡಿಪಿಒ ಬಸವರಾಜು, ಪಿಡಿಒ ಧರಣೀಶ್, ಯೋಜನಾಧಿಕಾರಿ ಮಹದೇವಯ್ಯ ಅವರನ್ನ ಶಾಸಕರು ಕ್ಲಾಸ್ ತೆಗೆದುಕೊಂಡರು.
ಸ್ಥಳದಲ್ಲೇ ಇದ್ದ ಅಧಿಕಾರಿಗಳಿಗೆ ಶಾಸಕ ಈ ಬಗ್ಗೆ ಪ್ರಶ್ನಿಸಿದಾಗ, ಅಧಿಕಾರಿಗಳು ತಡಬಡಾಯಿಸಿದ್ದಾರೆ.

ಅಂಗನವಾಡಿ ಕೇಂದ್ರಕ್ಕೆ 8 ವರ್ಷಗಳಿಂದ ವಿದ್ಯುತ್​ ಸಂಪರ್ಕ ಇಲ್ಲ ಎಂಬುದೇ ಆಶ್ಚರ್ಯಕರ ಸಂಗತಿ. ಅಧಿಕಾರಿಗಳಾದ ನೀವು ಏನು ಮಾಡುತ್ತಿದ್ದೀರಾ?. ನಾಚಿಕೆ ಆಗಲ್ವಾ. ಏನ್​ ಕೆಲ್ಸಾ ಮಾಡ್ತಾ ಇದೀರಾ ಎಂದು ಗುಡುಗಿದರು.

ಸಿಡಿಪಿಒ, ಪಿಡಿಒ ಯೋಜನಾಧಿಕಾರಿಗಳ ಮೇಲೆ ಕ್ರಮ ವಹಿಸಲು ಜಿಲ್ಲಾಧಿಕಾರಿಗೆ ಪತ್ರ ಬರೆಯುವಂತೆ ತಹಸೀಲ್ದಾರ್​ಗೆ ಶಾಸಕ ಅಶ್ವಿನ್ ಕುಮಾರ್ ತಾಕೀತು ಮಾಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.