ETV Bharat / city

ಮದುವೆಯಾದ ಒಂದೇ ದಿನಕ್ಕೆ ಬೇರೆ ಬೇರೆಯಾದ ಜೋಡಿ.. ಅಷ್ಟಕ್ಕೂ ಅಲ್ಲಿ ನಡೆದಿದ್ದೇನು? - marriage

ಪ್ರೀತಿಸಿ ಮದುವೆಯಾಗಿದ್ದ ಯುವ ಜೋಡಿಯನ್ನು ಯುವತಿಯ ಪೋಷಕರು ಮತ್ತು ಸಂಬಂಧಿಗಳು ಸೇರಿ ಬೇರೆ ಮಾಡಿರುವ ಆರೋಪ ಕೇಳಿಬಂದಿದೆ. ಪ್ರಿಯತಮೆಗಾಗಿ ಯುವಕ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾನೆ.

mysuru love marriage
ಮದುವೆಯಾದ ಒಂದೇ ದಿನಕ್ಕೆ ಬೇರೆಯಾದ ಜೋಡಿ
author img

By

Published : Mar 30, 2022, 6:15 PM IST

ಮೈಸೂರು: ಪ್ರೀತಿಸಿ ಮದುವೆಯಾಗಿದ್ದ ಜೋಡಿ ಇನ್ನೇನು ಹೊಸ ಜೀವನ ಆರಂಭಿಸಿ ಸುಖ ಸಂಸಾರದ ಕನಸು ಕಂಡಿದ್ದರು. ಆದ್ರೆ ಅವರ ಈ ಆಕಾಂಕ್ಷೆಗೆ ಕೊಳ್ಳಿ ಬಿದ್ದಿದೆ. ಯುವತಿಯ ಪೋಷಕರು ಯುವಕನ ಮೇಲೆ ಹಲ್ಲೆ ಮಾಡಿ ಆಕೆಯನ್ನು ಒತ್ತಾಯಪೂರ್ವಕವಾಗಿ ಕರೆದೊಯ್ದು ಯುವ ಜೋಡಿಯನ್ನು ಆರಂಭದಲ್ಲೇ ಬೇರೆ ಬೇರೆ ಮಾಡಿರುವ ಆರೋಪ ಪ್ರಕರಣ ಜಿಲ್ಲೆಯ ಹುಣಸೂರಿನಲ್ಲಿ ಬೆಳಕಿಗೆ ಬಂದಿದೆ.

ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಕದಬಹಳ್ಳಿ ಗ್ರಾಮದ ಅಭಿಷೇಕ್ ಮತ್ತು ಚೋಳೇನಹಳ್ಳಿ ಗ್ರಾಮದ ಅನನ್ಯ ಪರಸ್ಪರ ಪ್ರೀತಿಸುತ್ತಿದ್ದರು. ಮಾರ್ಚ್​ 28ರಂದು ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಶ್ರೀ ಬಾಲ ತ್ರಿಪುರ ಸುಂದರಿ ಅಮ್ಮನವರ ದೇವಸ್ಥಾನದಲ್ಲಿ ಇಬ್ಬರು ಮದುವೆಯಾದರು. ಇದಾದ ಒಂದೇ ದಿನದಲ್ಲಿ ಇಬ್ಬರಿಗೂ ಆಘಾತ ಕಾದಿತ್ತು. ಯುವತಿಯನ್ನು ಆಕೆಯ ಪೋಷಕರು ಮನೆಗೆ ಕರೆದೊಯ್ದಿದ್ದಾರೆ ಎಂದು ನವವಿವಾಹಿತ ಅಭಿಷೇಕ್​ ಆರೋಪಿದ್ದಾರೆ.

ಮದುವೆಯಾದ ಒಂದೇ ದಿನಕ್ಕೆ ಬೇರೆಯಾದ ಜೋಡಿ

ಮಾ. 29 ರಂದು ಊರಿಗೆ ಮರಳುತ್ತಿದ್ದಾಗ ಹುಣಸೂರಿನ ಕೆಫೆ ಕಾಫಿ ಡೇ ಬಳಿ ಅನನ್ಯಳ ಸಂಬಂಧಿಗಳು ಬಂದು ಅಭಿಷೇಕ್​ಗೆ ಹೊಡೆದಿದ್ದರಂತೆ. ನಂತರ ಅನನ್ಯಳನ್ನು ಕರೆದುಕೊಂಡು ಹೋಗಿದ್ದಾರೆ. ನೊಂದ ಅಭಿಷೇಕ್​ ಹುಣಸೂರು ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆದರೆ, ಪೊಲೀಸರು ಕ್ರಮ ಕೈಗೊಳ್ಳುತ್ತಿಲ್ಲವೆಂದು ಅಭಿಷೇಕ್ ಅಸಮಾಧಾನ ಹೊರಹಾಕಿದ್ದಾರೆ.

ಇದನ್ನೂ ಓದಿ: ನಾಳೆ ನಿಮ್ಗೂ ನಿಮ್ಮ ಹೆಂಡ್ತಿಗೂ ಬುರ್ಕಾ ಹಾಕ್ತಾರೆ.. ಅರಬ್ ಚಿಂತನೆ ಭಾರತದಲ್ಲಿ ತರೋದು ಬೇಡ.. ಕಲ್ಲಡ್ಕ ಪ್ರಭಾಕರ್​ ಭಟ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.