ಮೈಸೂರು: ಉಲ್ಬಣಗೊಳ್ಳುತ್ತಿರುವ ಕೋವಿಡ್ ನಿಯಂತ್ರಣಕ್ಕೆ ಸರ್ಕಾರ ಪಣ ತೊಟ್ಟಿದ್ದು, ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಈ ಹಿನ್ನೆಲೆ, ಮೈಸೂರಿನ ಗಾಯತ್ರಿ ಚಿತ್ರಮಂದಿರ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.
ಕರ್ಫ್ಯೂ ಆದೇಶದಿಂದ ಮಾಲೀಕರು ಬಹಳಾನೇ ನಷ್ಟ ಅನುಭವಿಸುವಂತಾಗಿದೆ. ಸರ್ಕಾರದ ನಿಯಮಗಳಂತೆ ಶೇ.50ರಷ್ಟು ಆಸನದ ವ್ಯವಸ್ಥೆ ಮಾಡಬೇಕಿತ್ತು. ಆದ್ರೆ ಗಾಯತ್ರಿ ಥಿಯೇಟರ್ನಲ್ಲಿ ಕನ್ನಡ ಸೇರಿದಂತೆ ಯಾವುದೇ ಭಾಷೆಯ ಚಿತ್ರ ಪ್ರದರ್ಶನ ಮಾಡದಿರಲು ಮಾಲೀಕರು ನಿರ್ಧರಿಸಿದ್ದಾರೆ.
ಮೈಸೂರಿನ ಚಾಮರಾಜ ಜೋಡಿ ರಸ್ತೆಯಲ್ಲಿರುವ ಬಹಳಷ್ಟು ಹಳೆಯದಾದ ಗಾಯತ್ರಿ ಚಿತ್ರಮಂದಿರ ಕಳೆದ ವರ್ಷ ಕೊರೊನಾ ಸಂಕಷ್ಟಕ್ಕೆ ತುತ್ತಾಗಿತ್ತು. ನಗರದ ಶಾಂತಲಾ, ಲಕ್ಷ್ಮಿ ಹಾಗೂ ಸರಸ್ವತಿ ಚಿತ್ರಮಂದಿರಗಳು ಮುಚ್ಚಿದ್ದವು.
ಇದೀಗ ಗಾಯತ್ರಿ ಚಿತ್ರ ಮಂದಿರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಗಾಯತ್ರಿ ಥಿಯೇಟರ್ ಮಾಲೀಕ ರಾಜರಾಮ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಬಿಎಂಟಿಸಿ, ಮೆಟ್ರೋ ಸಿಬ್ಬಂದಿಗೆ ಕೋವಿಡ್ ಸೋಂಕು; 264 ಮಂದಿ ನೌಕರರಿಗೆ ಪಾಸಿಟಿವ್!