ETV Bharat / city

ಎಂ.ಜಿ. ರಸ್ತೆ ತರಕಾರಿ ಮಾರ್ಕೆಟ್​ ಸ್ಥಳಾಂತರಕ್ಕೆ ಸಿದ್ಧತೆ ಶುರು ಮಾಡಿದ ಮೈಸೂರು ಪಾಲಿಕೆ - mysore corona news

ಮೈಸೂರು ನಗರದ ಎಂ‌.ಜಿ.ರಸ್ತೆಯಲ್ಲಿರುವ ತರಕಾರಿ ಮಾರುಕಟ್ಟೆಯನ್ನು ಸ್ಥಳಾಂತರಿಸಲು ಮಹಾನಗರ ಪಾಲಿಕೆ ಸಜ್ಜಾಗಿದೆ. ಇದಕ್ಕೆ ಬೇಕಾದ ಅಗತ್ಯ ತಯಾರಿ ಶುರು ಮಾಡಿದ್ದು, ಈ ಬಗ್ಗೆ ನಗರ ಪಾಲಿಕೆ ಅಭಿವೃದ್ಧಿ ಅಧಿಕಾರಿ ಭರತ್ ಕುಮಾರ್ ವಿವರಣೆ ನೀಡಿದ್ದು ಹೀಗೆ.

mysore city corporation
ಮೈಸೂರು ಮಹಾನಗರ ಪಾಲಿಕೆ
author img

By

Published : Mar 27, 2020, 12:26 PM IST

ಮೈಸೂರು: ಎಂ‌.ಜಿ.ರಸ್ತೆಯಲ್ಲಿರುವ ತರಕಾರಿ ಮಾರುಕಟ್ಟೆಯನ್ನು ಸ್ಥಳಾಂತರ ಮಾಡಲು ನಗರ ಪಾಲಿಕೆ ಸಜ್ಜುಗೊಂಡಿದ್ದು, ಅಗತ್ಯ ತಯಾರಿ ಶುರು ಮಾಡಿದೆ.

ಎಂ.ಜಿ.ರಸ್ತೆಯಲ್ಲಿ ತರಕಾರಿ ಮಾರುಕಟ್ಟೆಯಲ್ಲಿ ಸುಮಾರು 500ಕ್ಕೂ ಹೆಚ್ಚು ಮಂದಿ ತರಕಾರಿ ಹಾಗೂ ಹಣ್ಣು-ಹಂಪಲು ವ್ಯಾಪಾರ ಮಾಡುತ್ತಿದ್ದಾರೆ. ಇಲ್ಲಿಗೆ ಖರೀದಿಗೆ ಬರುವ ಗ್ರಾಹಕರು ಹಾಗೂ ವ್ಯಾಪಾರಿಗಳ ನಡುವೆ ಅಂತರ ಕಾಯ್ದುಕೊಳ್ಳಲು ಸಮಸ್ಯೆಯಾಗುತ್ತಿರುವುದರಿಂದ ಎಂ.ಜಿ.ರಸ್ತೆಯಲ್ಲಿರುವ ತರಕಾರಿ ಮಾರುಕಟ್ಟೆಯನ್ನು ದಸರಾ ವಸ್ತು ಪ್ರದರ್ಶನದ ಆವರಣಕ್ಕೆ ಸ್ಥಳಾಂತರ ಮಾಡಲು ಜಿಲ್ಲಾಧಿಕಾರಿ ಅವರ ಆದೇಶದಂತೆ ಮೈಸೂರು ಮಹಾನಗರ ಪಾಲಿಕೆ ಸಮಾರೋಪಾದಿಯಲ್ಲಿ ಕೆಲಸ ಮಾಡುತ್ತಿದೆ.

ವ್ಯಾಪಾರಿಗಳಿಗೆ ಅನುಕೂಲಕರ ಸ್ಥಳ ಹಾಗೂ ಪಾರ್ಕಿಂಗ್ ವ್ಯವಸ್ಥೆ, ಅಂತರ ಕಾಯ್ದುಕೊಳ್ಳಲು ಬೇಕಾದ ಮಾರ್ಪಾಡು ಹೀಗೆ ಎಲ್ಲವನ್ನು ಸಜ್ಜು ಮಾಡುತ್ತಿದೆ. ಈ ಸಂಬಂಧ ಮಾಧ್ಯಮಗಳೊಂದಿಗೆ ಮಾತನಾಡಿದ ನಗರ ಪಾಲಿಕೆ ಅಭಿವೃದ್ಧಿ ಅಧಿಕಾರಿ ಭರತ್ ಕುಮಾರ್ ವಿವರಣೆ ನೀಡಿದ್ದು ಹೀಗೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.