ETV Bharat / city

ಕಬಿನಿ ಬಲದಂಡೆ ನಾಲೆಗೆ ಉರುಳಿಬಿದ್ದ ಕಾರು; ಇಬ್ಬರು ವಕೀಲರ ಸಾವು, ಓರ್ವ ಪ್ರಾಣಾಪಾಯದಿಂದ ಪಾರು - car plunges into kabini canal

ಮೈಸೂರು ಜಿಲ್ಲೆಯ ಸರಗೂರು ತಾಲೂಕಿನ ಸಾಗರೆ ಗ್ರಾಮದ ಬಳಿ ಕಬಿನಿ ನಾಲೆಗೆ ಕಾರು ಉರುಳಿ ಬಿದ್ದು, ಇಬ್ಬರು ವಕೀಲರು ಜಲ ಸಮಾಧಿಯಾಗಿದ್ದಾರೆ.

two advocates drown to death
two advocates drown to death
author img

By

Published : Jul 29, 2022, 9:38 PM IST

ಮೈಸೂರು: ಸರಗೂರು ತಾಲೂಕಿನ ಸಾಗರೆ ಗ್ರಾಮದ ಬಳಿ ಕಬಿನಿ ಬಲದಂಡೆ ಕಾಲುವೆಗೆ ಕಾರು ಉರುಳಿ ಬಿದ್ದು,ಇಬ್ಬರು ವಕೀಲರು ಮೃತಪಟ್ಟಿರುವ ಘಟನೆ ನಡೆದಿದೆ. ಮತ್ತೋರ್ವ ವಕೀಲ ಈಜಿ ದಡ ಸೇರಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಹುಣಸೂರಿನ ದಿನೇಶ್ ಹಾಗೂ ಶಂಕರ್ ಮೃತಪಟ್ಟ ವಕೀಲರು‌. ಹುಣಸೂರಿನ ವಕೀಲರಾದ ಅಶೋಕ್​, ದಿನೇಶ್, ಶಂಕರ್ ಈ ಮೂವರು ಚಿಕ್ಕದೇವಮ್ಮ ದೇವಸ್ಥಾನದ ಬೆಟ್ಟಕ್ಕೆ ಬಂದಿದ್ದರು. ಇಲ್ಲಿಂದ ವಾಪಸ್​​ ಹೋಗುತ್ತಿದ್ದಾಗ ಕಬಿನಿ ಜಲಾಶಯಕ್ಕೆ ಹೋಗುವ ಸಂದರ್ಭದಲ್ಲಿ ಕಾಲುವೆಗೆ ಕಾರು ಬಿದ್ದಿದೆ. ಕಾರು ನಿಯಂತ್ರಣ ತಪ್ಪಿ ಕಬಿನಿ ಬಲದಂಡೆ ನಾಲೆಗೆ ಉರುಳಿ ಬಿದ್ದಿದೆ ಎಂದು ತಿಳಿದು ಬಂದಿದೆ.

ಕಬಿನಿ ಬಲದಂಡೆ ನಾಲೆಗೆ ಉರುಳಿಬಿದ್ದ ಕಾರು

ವಕೀಲರಾದ ಅಶೋಕ್ ಈಜಿಕೊಂಡು ದಡ ಸೇರಿದರೆ, ಉಳಿದ ಇಬ್ಬರು ಮುಳುಗಿ ಮೃತಪಟ್ಟಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಇಬ್ಬರ ಮೃತದೇಹ ಹೊರತೆಗೆದಿದ್ದಾರೆ. ಸರಗೂರು ಠಾಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿರಿ: ಕಾರು - ಆಟೋ ಮಧ್ಯೆ ಭೀಕರ ರಸ್ತೆ ಅಪಘಾತ: ಸ್ಥಳದಲ್ಲೇ 7 ಮಂದಿ ದುರ್ಮರಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.