ಮೈಸೂರು: ಜಗದ್ವಿಖ್ಯಾತ ಮೈಸೂರು ಅರಮನೆಗೂ ಅಕಾಲಿಕ ಮಳೆಯಿಂದ ತೊಂದರೆ ಉಂಟಾಗಿದೆ. ಸತತ ಮಳೆಯಿಂದಾಗಿ ಮೈಸೂರಿನ ಅಂಬಾವಿಲಾಸ ಅರಮನೆಯ ಛಾವಣಿ ಸೋರುತ್ತಿದ್ದು, ಕೆಲವೆಡೆ ಪ್ಲಾಸ್ಟರಿಂಗ್ ಕಿತ್ತು ಬಂದಿದೆ. ಜೊತೆಗೆ ಗೋಡೆಗಳು ತೇವಗೊಂಡಿವೆ.
ಅರಮನೆಯ ಚಾವಣಿಯಲ್ಲಿ ಕೆಲವೆಡೆ ಈ ಹಿಂದೆ ಸಹ ಸೋರಿಕೆ ಕಂಡುಬಂದಿತ್ತು. ಸಕಾಲಕ್ಕೆ ದುರಸ್ತಿ ಕಾರ್ಯ ಕೈಗೊಂಡು ಸರಿಪಡಿಸಲಾಗಿತ್ತು. ಕಳೆದ ಕೆಲವು ದಿನಗಳಿಂದ ಎಡಬಿಡದೆ ಸುರಿದ ಮಳೆಯಿಂದಾಗಿ ಮತ್ತೆ ಸೋರಿಕೆ ಉಂಟಾಗಿದೆ.
ಇದನ್ನೂ ಓದಿ: ಬೆಂಗಳೂರು ಬಳಿ ರಸ್ತೆ ಅಪಘಾತ.. 3 ದಿನದ ಹಿಂದೆ ಮದುವೆ, ವರ ಸಾವು, ವಧು ಸ್ಥಿತಿ ಗಂಭೀರ!
ರಾಜವಂಶಸ್ಥರು ವಾಸಿಸುತ್ತಿರುವ ಭಾಗದಲ್ಲಿ ನೀರು ಹೆಚ್ಚಿನ ಪ್ರಮಾಣದಲ್ಲಿ ಸೋರಿಕೆ ಆಗುತ್ತಿದೆ. ಅರಮನೆಯ ನಿರ್ವಹಣೆಗೆ ಸರ್ಕಾರ ಆಸಕ್ತಿ ತೋರದಿರುವುದಕ್ಕೆ ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ಅಸಮಾಧಾನ ಹೊರಹಾಕಿದ್ದಾರೆ ಎಂದು ಅರಮನೆ ಮೂಲಗಳಿಂದ ತಿಳಿದು ಬಂದಿದೆ.
![Mysore Amba Vilas Palace](https://etvbharatimages.akamaized.net/etvbharat/prod-images/13729857_palace2.jpg)
ಇದನ್ನೂ ಓದಿ: ಹೆಣ್ಣು ಮಗುವೆಂದು ದುರ್ಗಮ್ಮ ಗುಡಿ ಮುಂದೆ ನವಜಾತ ಶಿಶು ಬಿಟ್ಟು ಹೋದ ಪಾಪಿಗಳು
ಇನ್ನು ಅರಮನೆ ಮಂಡಳಿಯ ಸುಪರ್ದಿಗೆ ಬರುವ ಸ್ಥಳದಲ್ಲಿ ಮಳೆಯಿಂದಾಗಿ ಯಾವುದೇ ಹಾನಿ ಉಂಟಾಗಿಲ್ಲ ಹಾಗೂ ಛಾವಣಿ ಸೋರಿಕೆಯಾಗಿಲ್ಲ ಎಂದು ಅರಮನೆ ಮಂಡಳಿ ಉಪ ನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ ಮಾಹಿತಿ ನೀಡಿದ್ದಾರೆ.
![Mysore Amba Vilas Palace](https://etvbharatimages.akamaized.net/etvbharat/prod-images/13729857_palacee2.jpg)