ಮೈಸೂರು : ಕಪಿಲೆ ಹಾಗೂ ಕಾವೇರಿ ಅಬ್ಬರಕ್ಕೆ ಮೈಸೂರು ಜಿಲ್ಲೆಯಾದ್ಯಂತ 65 ಮನೆಗಳಿಗೆ ಹಾನಿಯಾದ್ರೆ, 26 ಕುಟುಂಬಗಳು ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿವೆ. ನಂಜನಗೂಡಿನಲ್ಲಿ 2 ಮನೆ, ಹೆಚ್‌ಡಿಕೋಟೆಯಲ್ಲಿ 15 ಎಕರೆ ಬೆಳೆ, 17 ಮನೆಗಳು ಹಾನಿ, ಹುಣಸೂರಿನಲ್ಲಿ 13 ಮನೆ, ಪಿರಿಯಾಪಟ್ಟಣದಲ್ಲಿ 6 ಮನೆ, ಸರಗೂರಿನಲ್ಲಿ 20 ಎಕರೆ ಪ್ರದೇಶ, 27 ಮನೆಗಳು ಹಾನಿಯಾಗಿವೆ.
ನಂಜನಗೂಡಿನ ಸೀತಾರಾಮ ಕಲ್ಯಾಣ ಭವನದಲ್ಲಿ 120 ಮಂದಿ ಸಂತ್ರಸ್ತರು, ಅಂಗನವಾಡಿ ಕೇಂದ್ರ ಸರಸ್ವತಿ ಕಾಲೋನಿಯಲ್ಲಿ 10 ಮಂದಿ ಸಂತ್ರಸ್ತರು, ಕೆಆರ್‌ನಗರ ತಾಲೂಕಿನ ಹಿಂದುಳಿದ ವರ್ಗಗಳ ಬಾಲಕರ ವಸತಿ ನಿಲಯದಲ್ಲಿ 4 ಸಂತ್ರಸ್ತರು ಒಟ್ಟು 133 ಮಂದಿ ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ. ಪ್ರವಾಹದ ಸ್ಥಳಗಳಲ್ಲಿ ಬದಲಿ ಸಂಚಾರದ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.