ETV Bharat / city

ಡಿಕೆಶಿ ಏಸುಕುಮಾರ್​ ಆಗಲು ಹೋಗಬೇಡಿ ಅಂತಾ ಪ್ರತಾಪ್​ ಸಿಂಹ ಅಂದಿದ್ಯಾಕೆ? - ಮೋದಿ ಭಾಷಣಕ್ಕೆ ಕಾಂಗ್ರೆಸ್ ಟೀಕೆ

ಸಿದ್ದಗಂಗಾ ಮಠದಲ್ಲಿ ಪ್ರಧಾನಿ ಮೋದಿ ಭಾಷಣದ ಬಗ್ಗೆ ಕಾಂಗ್ರೆಸ್ ಟೀಕಿಸಿದ್ದಕ್ಕೆ ಪ್ರತಿಕ್ರಿಯಿಸಿದ ಸಂಸದ ಪ್ರತಾಪ್​ ಸಿಂಹ, ಶಿವನ ಭಕ್ತನ ಮೇಲೆ ಕಾಂಗ್ರೆಸ್ಸಿಗರಿಗೇಕೆ ಇಷ್ಟೊಂದು ಮತ್ಸರ?ಎಂದು ಪ್ರಶ್ನಿಸಿದರು.

mp pratap simha reaction about congress Criticism
ಸಂಸದ ಪ್ರತಾಪ್​ ಸಿಂಹ
author img

By

Published : Jan 3, 2020, 2:16 PM IST

ಮೈಸೂರು: ಶಿವನ ಭಕ್ತನ ಮೇಲೆ ಕಾಂಗ್ರೆಸ್ಸಿಗರಿಗೇಕೆ ಇಷ್ಟೊಂದು ಮತ್ಸರ? ಎಂದು ಸಂಸದ ಪ್ರತಾಪ್​ ಸಿಂಹ ಪ್ರಶ್ನಿಸಿದ್ದಾರೆ.

ಡಿ.ಕೆ.ಶಿವಕುಮಾರ್ ನೀವು ಏಸುಕುಮಾರ್ ಆಗಬೇಡಿ. ಕಪಾಲ ಬೆಟ್ಟ ಶಿವನ ಬೆಟ್ಟ. ಆ ಬೆಟ್ಟವನ್ನು ಏಸುಬೆಟ್ಟ ಮಾಡಿ ನೀವು ಏಸುಕುಮಾರ ಅನಿಸಿಕೊಳ್ಳಬೇಡಿ. ಶಿವ ಮತ್ತು ಭಕ್ತರ ನಡುವಿನ ಸಂಬಂಧ ಇದು. ಅದನ್ನು ಮುರಿಯಬೇಡಿ ಎಂದು ಪ್ರತಾಪ್ ಸಿಂಹ ಹೇಳಿದರು.

ಸಿದ್ದಗಂಗಾ ಮಠದಲ್ಲಿ ಪ್ರಧಾನಿ ಭಾಷಣದ ಬಗ್ಗೆ ಕಾಂಗ್ರೆಸ್ ಟೀಕಿಸಿದ್ದಕ್ಕೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್​ಗೆ ಏಕೆ ಈ ಮಟ್ಟದ ಉರಿ ಎಂದು ನಮಗೆ ಗೊತ್ತಾಗುತ್ತಿಲ್ಲ. ಮಠಕ್ಕೆ ಹೋದ ಪ್ರಧಾನಿಯನ್ನ ಸಿದ್ದರಾಮಯ್ಯ ಟೀಕಿಸುತ್ತಾರೆ ಎಂದು ಕುಟುಕಿದರು.

ಸಂಸದ ಪ್ರತಾಪ್​ ಸಿಂಹ

ಕಾಂಗ್ರೆಸ್ ನಾಯಕರಿಂದ ಹೇಳಿಸಿಕೊಂಡು ನಾವು ಮೋದಿ ಜೊತೆ ಮಾತನಾಡಬೇಕಿಲ್ಲ. ದೇಶದ ಜ್ವಲಂತ ಸಮಸ್ಯೆ ಬಗ್ಗೆ ಭವಿಷ್ಯದ ಪ್ರಜೆಗಳಿಗೆ ಪ್ರಧಾನಿ ತಿಳುವಳಿಕೆ ಕೊಟ್ಟಿದ್ದರಲ್ಲಿ ತಪ್ಪೇನಿದೆ? ಯಾಕಿ ಇಷ್ಟು ಉರಿದುಕೊಂಡು ಟ್ವೀಟ್ ಮಾಡುತ್ತಿದ್ದೀರಿ‌ ಎಂದು ಕಾಂಗ್ರೆಸ್ ನಾಯಕರಿಗೆ ಪ್ರಶ್ನಿಸಿದರು.

ಪ್ರಧಾನಿ ಹಣೆಗಿಟ್ಟಿದ್ದ ವಿಭೂತಿಯನ್ನ ಕಾಂಗ್ರೆಸ್ ರಾಷ್ಟ್ರೀಯ ವಕ್ತಾರರು ವ್ಯಂಗ್ಯ ಮಾಡುತ್ತಾರೆ‌. ಕಾಲಭೈರವೇಶ್ವರ ಜಾಗದಲ್ಲಿ ಡಿಕೆಶಿ ಏಸು ಪ್ರತಿಮೆ ನಿರ್ಮಾಣ ಮಾಡ್ತೀನಿ ಅಂತಾರೆ. ಇದನ್ನ ನೋಡಿದ್ರೆ ಶಿವನ ಭಕ್ತರ ಬಗ್ಗೆ ಕಾಂಗ್ರೆಸ್ ಮತ್ಸರ ಉಂಟಾಗಿರಬೇಕು ಎಂದರು.

ಕಾಂಗ್ರೆಸ್ಸಿಗರಂತೆ ಸೋನಿಯಾ ಮುಂದೆ ಮಂಡಿಯೂರಿ ಮಾತನಾಡುವ ದಯನೀಯ ಸ್ಥಿತಿ ಬಿಜೆಪಿಯವರಿಗೆ ಬಂದಿಲ್ಲ. ಕಾಂಗ್ರೆಸ್ ನಾಯಕರಿಂದ ನಾವು ಸರ್ಟಿಫಿಕೇಟ್ ಪಡೆಯಬೇಕಾಗಿಲ್ಲ. ಕರ್ನಾಟದ ಜನ 1998ರಿಂದ ಸಂಸದರ ಸಂಖ್ಯೆ ಹೆಚ್ಚಿಸುತ್ತಲೇ ಬಂದಿದ್ದಾರೆ. ಮೋದಿ ಯಾವಾಗಲೂ ರಾಜ್ಯದ ಪರ ಎಂದು ಸಮರ್ಥಿಸಿಕೊಂಡರು.

Intro:ಪ್ರತಾಪಸಿಂಹBody:ಶಿವನ ಭಕ್ತನ ಮೇಲೆ ಕಾಂಗ್ರೆಸ್ಸಿಗರಿಗೆ ಮತ್ಸರ: ಸಂಸದ ಪ್ರತಾಪಸಿಂಹ
ಮೈಸೂರು: ಶಿವನ ಭಕ್ತನ ಮೇಲೆ ಕಾಂಗ್ರೆಸ್ಸಿಗರಿಗೆ ಯಾಕೆ ಇಷ್ಟೊಂದು ಮತ್ಸರವೆಂದು ಸಂಸದ ಪ್ರತಾಪಸಿಂಹ ಪ್ರಶ್ನಿಸಿದ್ದಾರೆ.
ಮೈಸೂರಿನಲ್ಲಿ‌ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,ಸಿದ್ದಗಂಗಾ ಮಠದಲ್ಲಿ ಪ್ರಧಾನಿ ಭಾಷಣದ ಬಗ್ಗೆ ಕಾಂಗ್ರೆಸ್ ಟೀಕೆ ವಿಚಾರ ಉತ್ತರಿಸಿ.ಕಾಂಗ್ರೆಸ್ ಗೆ ಏಕೆ ಈ ಮಟ್ಟದ ಉರಿ ಅಂತ ನಮಗೆ ಗೊತ್ತಾಗುತ್ತಿಲ್ಲ.ಮಠಕ್ಕೆ ಹೋದ ಪ್ರಧಾನಿಯನ್ನ ಸಿದ್ದರಾಮಯ್ಯ ಟೀಕಿಸುತ್ತಾರೆ ಎಂದು ಕುಟುಕಿದರು.ಕಾಂಗ್ರೆಸ್ ನಾಯಕರಿಂದ ಹೇಳಿಸಿಕೊಂಡು ನಾವು ಮೋದಿ ಜೊತೆ ಮಾತನಾಡಬೇಕಿಲ್ಲ.ದೇಶದ ಜ್ವಲಂತ ಸಮಸ್ಯೆ ಬಗ್ಗೆ ಭವಿಷ್ಯದ ಪ್ರಜೆಗಳಿಗೆ ಪ್ರಧಾನಿ ತಿಳುವಳಿಕೆ ಕೊಟ್ಟಿದ್ದರಲ್ಲಿ ತಪ್ಪೇನಿದೆ ಎಂದರು.
ಯಾಕೇ ಇಷ್ಟು ಉರಿದುಕೊಂಡು ಟ್ವಿಟ್ ಮಾಡುತ್ತಿದ್ದೀರಿ‌ ಕಾಂಗ್ರೆಸ್ ನಾಯಕರಿಗೆ ಪ್ರಶ್ನಿಸಿದರು.
ಡಿ.ಕೆ.ಶಿವಕುಮಾರ್ ನೀವೂ ಏಸುಕುಮಾರ್ ಆಗಬೇಡಿ.
ಕಪಾಲಿ ಅಥವಾ ಕಪಾಲ ಬೆಟ್ಟ ಶಿವನ ಬೆಟ್ಟ.ಆ ಬೆಟ್ಟವನ್ನು ಏಸು ಬೆಟ್ಟ ಮಾಡಿ ನೀವು ಏಸುಕುಮಾರ ಅನಿಸಿಕೊಳ್ಳಬೇಡಿ.ಶಿವ ಮತ್ತು ಭಕ್ತರ ನಡುವಿನ ಸಂಬಂಧ ಇದು.ಆ ಸಂಬಂಧವನ್ನು ನೀವು ಮುರಿಯಬೇಡಿ ಎಂದು ವ್ಯಂಗ್ಯವಾಡಿದರು.
ಪ್ರಧಾನಿ ವಿಭೂತಿಯನ್ನ ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ವ್ಯಂಗ್ಯ ಮಾಡುತ್ತಾರೆ‌.ಕಾಲಭೈರವೇಶ್ವರ ಜಾಗದಲ್ಲಿ ಡಿಕೆಶಿ ಏಸು ಪ್ರತಿಮೆ ನಿರ್ಮಾಣ ಮಾಡ್ತೀನಿ ಅಂತಾರೆ.
ಇದನ್ನ ನೋಡಿದ್ರೆ ಶಿವನ ಭಕ್ತರ ಬಗ್ಗೆ ಕಾಂಗ್ರೆಸ್ ಮತ್ಸರ ಉಂಟಾಗಿರಬೇಕು.ಯಾಕಾಗಿ ಇಷ್ಟು ಮತ್ಸರ.ಯಾಕೇ ಇಷ್ಟು ಉರಿ.ಮೋದಿ ಟೀಕಿಸಿದ ಕಾಂಗ್ರೆಸ್ಸಿಗರ ಕಾಲೆಳೆದರು.

ಕಾಂಗ್ರೆಸ್ಸಿಗರಂತೆ ಸೋನಿಯಾ ಮುಂದೆ ಮಂಡಿಯೂರಿ ಮಾತನಾಡುವ ದಯನೀಯ ಸ್ಥಿತಿ ಬಿಜೆಪಿಯವರಿಗೆ ಬಂದಿಲ್ಲ.ನೆರೆ ಪರಹಾರದ ಬಗ್ಗೆ ಮಾತನಾಡದ ಮೋದಿ ಟೀಕಿಸಿದ ಕಾಂಗ್ರೆಸ್ಸಿಗರಿಗೆ ತಿರುಗೇಟು ನೀಡಿದರು.

ಕಾಂಗ್ರೆಸ್ ನಾಯಕರಿಂದ ನಾವು ಸರ್ಟಿಫಿಕೇಟ್ ಪಡೆಯಬೇಕಾಗಿಲ್ಲ.ಕರ್ನಾಟದ ಜನ ನಮಗೆ 1998ರಿಂದ ಸಂಸದರ ಸಂಖ್ಯೆ ಹೆಚ್ಚಿಸುತ್ತಲೇ ಬಂದಿದ್ದಾರೆ.ಮೋದಿಯೂ ಯಾವಾಗಲು ರಾಜ್ಯದ ಪರ ಇದ್ದಾರೆ ಎಂದರು.

(ವಿಡಿಯೋ ಮೊಜೊನಲ್ಲಿ ಕಳುಹಿಸಲಾಗಿದೆ)Conclusion:ಪ್ರತಾಪಸಿಂಹ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.