ETV Bharat / city

ಹಾಲು ತರಲು ಹೋದ ಮಹಿಳೆಯ ಕೊಲೆ: ಹೆತ್ತ ಮಗನೆದುರೇ ನಡೀತು ಭೀಕರ ಹತ್ಯೆ - ಮೈಸೂರು ಅಪರಾಧ ಸುದ್ದಿ

ವ್ಯಕ್ತಿಯೊಬ್ಬ ಹಾಲು ತರಲು ಹೋದ ಮಹಿಳೆಯನ್ನು ಹೊಂಚು ಹಾಕಿ ಬರ್ಬರವಾಗಿ ನಡುಬೀದಿಯಲ್ಲೇ ಕೊಲೆಗೈದು ಅಟ್ಟಹಾಸ ಮೆರೆದ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.

Woman murdered in Mysore, mother murdered in front of the son in Mysore, Mysore crime news, Mysore news, ಮೈಸೂರಿನಲ್ಲಿ ಮಹಿಳೆ ಕೊಲೆ, ಮೈಸೂರಿನಲ್ಲಿ ಮಗನ ಎದುರೇ ತಾಯಿ ಹತ್ಯೆ, ಮೈಸೂರು ಅಪರಾಧ ಸುದ್ದಿ, ಮೈಸೂರು ಸುದ್ದಿ,
ಬೆಳ್ಳಂಬೆಳಗ್ಗೆ ಹಾಲು ತರಲು ಹೋದ ಮಹಿಳೆಯ ಹತ್ಯೆ
author img

By

Published : Jul 29, 2022, 12:08 PM IST

ಮೈಸೂರು: ಹಾಲು ತರಲು ಅಂಗಡಿಗೆ ಹೋದ ಮಹಿಳೆಯನ್ನು ದುಷ್ಕರ್ಮಿಯೊಬ್ಬ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಂಜನಗೂಡು ತಾಲೂಕಿನ ಹಳೇಪುರ ಗ್ರಾಮದಲ್ಲಿ ಇಂದು ನಡೆದಿದೆ. ಮಿಣುಕಮ್ಮ(45 ವರ್ಷ) ಕೊಲೆಯಾದ ಮಹಿಳೆ. ಮದರಿ ಮಹಾದೇವನಾಯಕ ಕೊಲೆಗಡುಕ ಎಂದು ತಿಳಿದು ಬಂದಿದೆ.

ಹಾಲಿಗಾಗಿ ಬೆಳಗ್ಗೆ ಬೀದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಿಣುಕಮ್ಮಳನ್ನು ಹೊಂಚು ಹಾಕಿ ಕಾಯುತ್ತಿದ್ದ ಮಹಾದೇವನಾಯಕ ಮಚ್ಚಿನಿಂದ ಕೊಚ್ಚಿ ಕೊಂದಿದ್ದಾನೆ. ದುಷ್ಕೃತ್ಯದ ದೃಶ್ಯ ನೋಡಿ ಬೆಚ್ಚಿಬಿದ್ದ ಮಗನ ಕಿರುಚಾಟ ಕೇಳಿ ಆರೋಪಿ ಮಚ್ಚ ಬಿಸಾಡಿ ಪರಾರಿಯಾಗಿದ್ದಾನೆ.

ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಘಟನಾ ಸ್ಥಳಕ್ಕೆ ಕವಲಂದೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ವಶಕ್ಕೆ ಪಡೆದ ಪೊಲೀಸರು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಆರೋಪಿಯ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಕವಲಂದೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಮುಖ್ಯಮಂತ್ರಿ ಭೇಟಿ ಬೆನ್ನಲ್ಲೇ ಮಂಗಳೂರಿನಲ್ಲಿ ಮತ್ತೊಂದು ಹತ್ಯೆ: ಯುವಕನ ಬರ್ಬರ ಕೊಲೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.