ETV Bharat / city

'ಕಾನೂನು ಮೀರಿ ಪ್ರತಿಮೆಗಳನ್ನು ಸ್ಥಾಪಿಸಬಾರದು': ಶಾಸಕ ಎಸ್.ಎ.ರಾಮದಾಸ್

author img

By

Published : Sep 18, 2021, 4:18 PM IST

ಡಾ.ವಿಷ್ಣುವರ್ಧನ್ ಅವರ ಪ್ರತಿಮೆ ನಿರ್ಮಾಣ ವಿಚಾರ ವಿವಾದ ಆಗುವುದು ಬೇಡ. ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾದ ಪ್ರತಿಮೆ ನಿರ್ಮಾಣ ಮಾಡುವುದು ತಪ್ಪು ಎಂದು ಸುಪ್ರೀಂಕೋರ್ಟ್ ಹೇಳಿದೆ. ಸುಪ್ರೀಂಕೋರ್ಟ್ ತೀರ್ಪನ್ನು ನಾವು ಗೌರವಿಸೋಣ..

MLA S.A.Ramdas
ಶಾಸಕ ಎಸ್.ಎ.ರಾಮದಾಸ್

ಮೈಸೂರು: ಕಾನೂನು ಮೀರಿ ಯಾರೂ ಕೂಡ ಪ್ರತಿಮೆ ಸ್ಥಾಪಿಸಬಾರದು. ವಿಷ್ಣುವರ್ಧನ್ ಯಾವತ್ತಿಗೂ ಕಾನೂನು ಮೀರಿದವರಲ್ಲ ಎಂದು ಶಾಸಕ ಎಸ್.ಎ.ರಾಮದಾಸ್ ತಿಳಿಸಿದರು.

'ಕಾನೂನು ಮೀರಿ ಪ್ರತಿಮೆಗಳನ್ನು ಸ್ಥಾಪಿಸಬಾರದು': ಶಾಸಕ ಎಸ್.ಎ.ರಾಮದಾಸ್

ಮೈಸೂರಿನ ಖಾಸಗಿ ಹೋಟೆಲ್​​ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಾ.ವಿಷ್ಣುವರ್ಧನ್ ಅವರ ಪ್ರತಿಮೆ ನಿರ್ಮಾಣ ವಿಚಾರ ವಿವಾದ ಆಗುವುದು ಬೇಡ. ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾದ ಪ್ರತಿಮೆ ನಿರ್ಮಾಣ ಮಾಡುವುದು ತಪ್ಪು ಎಂದು ಸುಪ್ರೀಂಕೋರ್ಟ್ ಹೇಳಿದೆ. ಸುಪ್ರೀಂಕೋರ್ಟ್ ತೀರ್ಪನ್ನು ನಾವು ಗೌರವಿಸೋಣ. ಭವಿಷ್ಯದಲ್ಲಿ ಕಾನೂನಾತ್ಮಕವಾಗಿ ಪ್ರತಿಮೆ ನಿರ್ಮಾಣ ಮಾಡುತ್ತೇವೆ ಎಂದು ಭರವಸೆ ನೀಡಿದರು.

ಖಾಸಗಿ ಬಿಲ್ ಮಂಡನೆ:

ರಾಜ್ಯದಲ್ಲಿನ ಅನಧಿಕೃತ ದೇವಾಲಯಗಳನ್ನು ಅಧಿಕೃತಗೊಳಿಸಲು ವಿಧಾನಸಭೆಯಲ್ಲಿ ಗುರುವಾರ ಖಾಸಗಿಯಾಗಿ ಹೊಸ ಬಿಲ್ ಮಂಡನೆ ಮಾಡಲಾಗುವುದು. ರಾಜ್ಯದಲ್ಲಿ 2,814 ಅನಧಿಕೃತ ದೇವಾಲಯಗಳಿವೆ. ಅವುಗಳನ್ನು ಅಧಿಕೃತಗೊಳಿಸಲು ಕ್ರಮ ವಹಿಸಲಾಗುವುದು. 'ಅನಧಿಕೃತ ಹಿಂದೂ ದೇವಾಲಯಗಳ ಕ್ರಮಬದ್ಧಗೊಳಿಸುವಿಕೆ ಕಾಯಿದೆ 2021'ನ್ನು ಪಾಸ್ ಮಾಡಲು ವಿಪಕ್ಷಗಳಿಗೆ ಮನವಿ ಮಾಡಲಾಗುವುದು ಎಂದು ತಿಳಿಸಿದರು.

ಈ ಬಿಲ್​​ನಲ್ಲಿ ಭವಿಷ್ಯದಲ್ಲಿ ಅನಧಿಕೃತ ದೇವಸ್ಥಾನ ನಿರ್ಮಿಸಿದರೆ ಕಾನೂನು ಕ್ರಮಕ್ಕೂ ಅವಕಾಶವಿದೆ. ಯಾವುದೇ ಅನಧಿಕೃತ ದೇವಾಲಯ ನಿರ್ಮಾಣವಾಗದಂತೆ ತಡೆಯಲು ಕಾಯ್ದೆಯ ಉದ್ದೇಶವಾಗಿದೆ. ಈ ಖಾಸಗಿ ಬಿಲ್ ಅ​ನ್ನು ಸರ್ಕಾರದ ಬಿಲ್ ಆಗಿ ಮಂಡಿಸಲು ಅವಕಾಶ ಮಾಡಿಕೊಡುತ್ತೇವೆ ಎಂದು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.