ಮೈಸೂರು : ಮೊದಲು ಗೋಮಾಳ ಆಯ್ತು, ಆಮೇಲೆ ರಾಜಕಾಲುವೆ ಆಯ್ತು. ಈಗ ಸೈಟ್, ಮುಂದೆ ಏನ್ ಬರುತ್ತೋ ಗೊತ್ತಿಲ್ಲ ಎಂದು ಆರ್ಟಿಐ ಕಾರ್ಯಕರ್ತ ಗಂಗರಾಜುಗೆ ಶಾಸಕ ಸಾ.ರಾ.ಮಹೇಶ್ ತಿರುಗೇಟು ನೀಡಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂದೆ ಏನ್ ಬರುತ್ತೋ ಗೊತ್ತಿಲ್ಲ. ಇದರ ಬಗ್ಗೆ ವರದಿ ಬಂದ ಮೇಲೆ ಮಾತನಾಡುತ್ತೇನೆ. ಅಲ್ಲಿಯವರೆಗೆ ಏನನ್ನೂ ಮಾತನಾಡುವುದು ಬೇಡ ಎಂದಿದ್ದಾರೆ.
ವಿಶ್ವನಾಥ್ ಅವರು ನೂರು ಕಾಲ ಚೆನ್ನಾಗಿ ಬಾಳಲಿ : ಈ ಜಿಲ್ಲೆಯಲ್ಲಿ ನಾವಿಬ್ಬರು ಮಾಡಿದ ವೈಯಕ್ತಿಕ ರಾಜಕೀಯವನ್ನು ಬೇರೆ ಯಾರು ಮಾಡಿಲ್ಲ. ವಿಶ್ವನಾಥ್ ಅವರಿಗೆ ಈಗ 75 ವರ್ಷ ತುಂಬುತ್ತಿದೆ. ಅವರು ಹಿರಿಯರು, ಅವರ ಕುಟುಂಬ ನೂರು ಕಾಲ ಚೆನ್ನಾಗಿರಲಿ ಎಂದು ಪ್ರಾರ್ಥನೆ ಮಾಡುತ್ತೇನೆ. ನಾನು ವಿಶ್ವನಾಥ್ ಬಗ್ಗೆ ಮಾತನಾಡುತ್ತಿರುವುದು ಮಾಧ್ಯಮದವರಿಗೆ ಆಶ್ಚರ್ಯವಾಗಿರಬೇಕು. ಏನಪ್ಪಾ ಇವರಿಬ್ಬರು ಯಾವಾಗಲೂ ಕಿತ್ತಾಡುತ್ತಾ ಇದ್ರು, ಈಗ ಅವರ ಬಗ್ಗೆನೇ ಮಾತನಾಡುತ್ತಿದ್ದಾರೆ ಅನ್ನಿಸಿರುತ್ತೆ.
ನನಗೆ ಇವತ್ತಿನ ರಾಜಕಾರಣದಲ್ಲಿ ವೈಯಕ್ತಿಕ ರಾಜಕಾರಣ ಬೇಡ ಅನ್ನಿಸಿದೆ. ಮೇ 8, 9 ಹಾಗೂ 10ರಂದು ವಿಶ್ವನಾಥ್ ಅವರ ಹುಟ್ಟುಹಬ್ಬದ ಕಾರ್ಯಕ್ರಮ ನಡೆಯುತ್ತದೆ.
ಎಲ್ಲಾ ಪಕ್ಷದ ಕಾರ್ಯಕರ್ತರು ಭಾಗವಹಿಸಿ, ರಾಜಕೀಯದ ಸಂದರ್ಭದಲ್ಲಿ ರಾಜಕೀಯ ಮಾಡಿ, ಎಲ್ಲಾ ಸಮಯದಲ್ಲೂ ರಾಜಕೀಯ ಮಾಡುವುದು ಬೇಡ. ಎಲ್ಲರೂ ಬಂದು ವಿಶ್ವನಾಥ್ ಅವರಿಗೆ ಶುಭ ಹಾರೈಸಿ ಎಂದು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಗೃಹ ಸಚಿವ ಮತ್ತು ಅಶ್ವತ್ಥ್ ನಾರಾಯಣ ಮೂಗಿನ ಕೆಳಗೆ ಎಲ್ಲ ನಡೆಯುತ್ತಿದೆ : ಡಿಕೆಶಿ ಆರೋಪ