ಮೈಸೂರು: ಮದುವೆಗೆ ಪೋಷಕರು ನಿರಾಕರಿಸಿದ ಹಿನ್ನೆಲೆ, ಅಪ್ರಾಪ್ತೆಯನ್ನ ಅಪಹರಿಸಿರುವ ಘಟನೆ ನಂಜನಗೂಡಿನ ತಾಲೂಕಿನ ಗೋಳೂರು ಗ್ರಾಮದಲ್ಲಿ ನಡೆದಿದೆ.
15 ವರ್ಷದ ಅಪ್ರಾಪ್ತೆಯನ್ನ ಶಶಿ ಎಂಬಾತ ಅಪಹರಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ. 3 ತಿಂಗಳ ಹಿಂದೆ ಅಪ್ರಾಪ್ತೆಯನ್ನ ಮದುವೆ ಮಾಡಿಕೊಡುವಂತೆ ಶಶಿ, ಆತನ ತಂದೆ ಪುಟ್ಟಯ್ಯ ಹಾಗೂ ದೊಡ್ಡಪ್ಪ ಮಹದೇವು ತಿಳಿಸಿದ್ದರು. ಆದರೆ, ಬಾಲಕಿಯ ಪೋಷಕರು ಈ ಮದುವೆಗೆ ನಿರಾಕರಿಸಿದ್ದರು ಎನ್ನಲಾಗ್ತಿದೆ. ಇದರಿಂದ ಕುಪಿತಗೊಂಡ ಶಶಿಯ ತಂದೆ ಹಾಗೂ ದೊಡ್ಡಪ್ಪ ಮದುವೆ ಮಾಡಿಕೊಡದಿದ್ದಲ್ಲಿ ಪರಿಣಾಮ ಎದುರಿಸುತ್ತೀರಾ ಎಂದು ಬಾಲಕಿಯ ಪೋಷಕರಿಗೆ ಎಚ್ಚರಿಕೆ ನೀಡಿದ್ದರು ಎಂಬ ಆರೋಪ ಕೇಳಿಬಂದಿದೆ.
ಫೆಬ್ರವರಿ 17ರಂದು ಅಪ್ರಾಪ್ತೆ ನಾಪತ್ತೆಯಾಗಿದ್ದು, ನಾಲ್ಕು ದಿನಗಳ ಕಾಲ ಹುಡುಕಾಟ ನಡೆಸಿದಾಗ ಅಪ್ರಾಪ್ತೆ ಶಶಿ ಮನೆಯಲ್ಲಿರುವ ಮಾಹಿತಿ ತಿಳಿದು ಬಂದಿದೆ.
ಓದಿ: ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿ 11ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ : ವಿಡಿಯೋ
ಅಪ್ರಾಪ್ತ ಮಗಳನ್ನ ಶಶಿ, ಆತನ ತಂದೆ ಪುಟ್ಟಯ್ಯ ಮತ್ತು ದೊಡ್ಡಪ್ಪ ಮಹದೇವು ಅಪಹರಿಸಿದ್ದಾರೆಂದು ಬಾಲಕಿಯ ತಾಯಿ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.