ETV Bharat / city

ಗೋಲ್ಡನ್ ವೀವ್ಸ್ ಆಫ್ ಕರ್ನಾಟಕ ಫೋರ್ಟ್ಸ್ ಪುಸ್ತಕ ಲೋಕಾರ್ಪಣೆಗೊಳಿಸಿದ ಸಚಿವ ಸೋಮಶೇಖರ್ - ಛಾಯಾಗ್ರಾಹಕ ವಿಶ್ವನಾಥ್ ಸುವರ್ಣ ಅವರು ಸೆರೆಹಿಡಿದ ಕೋಟೆ ಚಿತ್ರ

ಛಾಯಾಗ್ರಾಹಕರಾದ ವಿಶ್ವನಾಥ್ ಸುವರ್ಣ ಅವರು ಬಹಳ ಶ್ರಮವಹಿಸಿ ರಾಜ್ಯಾದ್ಯಂತ ಪ್ರವಾಸ ಮಾಡಿ ಕೋಟೆಗಳ ಚಿತ್ರಗಳನ್ನು ತೆಗೆದು, ಅದಕ್ಕೆ ಪುಸ್ತಕ ರೂಪ ನೀಡಿರುವುದು ಪ್ರಶಂಸನೀಯ. ಈ ಪುಸ್ತಕಗಳನ್ನು ನಾನು ಹೆಚ್ಚು ಖರೀದಿಸಿ ಅವರಿಗೆ ಪ್ರೋತ್ಸಾಹಿಸುತ್ತೇನೆ..

Minister ST Somashekhar inaugurated book Golden Weaves of Karnataka Forts
ಗೋಲ್ಡನ್ ವೀವ್ಸ್ ಆಫ್ ಕರ್ನಾಟಕ ಫೋರ್ಟ್ಸ್ ಪುಸ್ತಕ ಲೋಕಾರ್ಪಣೆ ಮಾಡಿದ ಸಚಿವ ಎಸ್.ಟಿ.ಸೋಮಶೇಖರ್
author img

By

Published : Sep 6, 2020, 4:09 PM IST

Updated : Sep 6, 2020, 5:18 PM IST

ಮೈಸೂರು : ಕರ್ನಾಟಕದ ಪ್ರತಿ ಕೋಟೆಗಳ ಚಿತ್ರಗಳನ್ನು ಅತ್ಯಂತ ಸೃಜನಶೀಲತೆಯಿಂದ ಸೆರೆಹಿಡಿದು 'ಗೋಲ್ಡನ್ ವೀವ್ಸ್ ಆಫ್ ಕರ್ನಾಟಕ ಫೋರ್ಟ್ಸ್' ಪುಸ್ತಕದಲ್ಲಿ ದಾಖಲಿಸಿರುವುದು ಉತ್ತಮ ಕೆಲಸ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ಹೇಳಿದರು.

ಗೋಲ್ಡನ್ ವೀವ್ಸ್ ಆಫ್ ಕರ್ನಾಟಕ ಫೋರ್ಟ್ಸ್ ಪುಸ್ತಕ ಲೋಕಾರ್ಪಣೆಗೊಳಿಸಿದ ಸಚಿವ ಸೋಮಶೇಖರ್

ಪತ್ರಕರ್ತರ ಭವನದಲ್ಲಿ ಛಾಯಾಗ್ರಾಹಕ ವಿಶ್ವನಾಥ್ ಸುವರ್ಣ ಅವರು ಸೆರೆಹಿಡಿದ ಕೋಟೆ ಚಿತ್ರಗಳ ಸಂಗ್ರಹ 'ಗೋಲ್ಡನ್ ವೀವ್ಸ್ ಆಫ್ ಕರ್ನಾಟಕ ಫೋರ್ಟ್ಸ್' ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಬೀದರ್‌ನಿಂದ ಕಾಸರಗೋಡಿನವರೆಗೂ ಅತ್ಯಂತ ವ್ಯವಸ್ಥಿತವಾಗಿ ಕೋಟೆಯ ಚಿತ್ರಗಳನ್ನು ಹೊಂದಿರುವ ಪುಸ್ತಕ ಇದಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಛಾಯಾಗ್ರಾಹಕರಾದ ವಿಶ್ವನಾಥ್ ಸುವರ್ಣ ಅವರು ಬಹಳ ಶ್ರಮವಹಿಸಿ ರಾಜ್ಯಾದ್ಯಂತ ಪ್ರವಾಸ ಮಾಡಿ ಕೋಟೆಗಳ ಚಿತ್ರಗಳನ್ನು ತೆಗೆದು, ಅದಕ್ಕೆ ಪುಸ್ತಕ ರೂಪ ನೀಡಿರುವುದು ಪ್ರಶಂಸನೀಯ. ಈ ಪುಸ್ತಕಗಳನ್ನು ನಾನು ಹೆಚ್ಚು ಖರೀದಿಸಿ ಅವರಿಗೆ ಪ್ರೋತ್ಸಾಹಿಸುತ್ತೇನೆ ಎಂದು ತಿಳಿಸಿದರು. ಆನ್‌ಲೈನ್‌ನಲ್ಲಿ ಪುಸ್ತಕ ಬಿಡುಗಡೆಗೊಳಿಸಿದ ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರು ಮಾತನಾಡಿ, ವಿಶ್ವನಾಥ್ ಸುವರ್ಣ ಅವರು ತಮ್ಮ ವಿಶೇಷ ಕೈಚಳದಿಂದ ಪ್ರತಿ ಚಿತ್ರಗಳನ್ನು ಸೆರೆಹಿಡಿದು ಪುಸ್ತಕದಲ್ಲಿ ದಾಖಲಿಸಿದ್ದಾರೆ. ಇಂತಹ ಚಿತ್ರಗಳನ್ನು ಕಾಣುವುದು ಅಪರೂಪ ಎಂದರು.

ಯಾವುದೇ ಚಿತ್ರವನ್ನು ತೆಗೆಯಲು ಬಹಳ ಸಂಯಮ, ಶಾಂತಿ ಮತ್ತು ಶಿಸ್ತು ಅವಶ್ಯಕ. ಈ ಅಂಶಗಳನ್ನು ಗಮನದಲ್ಲಿರಿಸಿ ಚಿತ್ರಗಳನ್ನು ಸೆರೆಹಿಡಿದರೆ ಅತ್ಯಂತ ಪರಿಣಾಕಾರಿ ಆಗಿರುತ್ತವೆ ಎಂದು ಶ್ರೀಗಳು ಅಭಿಪ್ರಾಯ ವ್ಯಕ್ತಪಡಿಸಿದರು.

Last Updated : Sep 6, 2020, 5:18 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.