ETV Bharat / city

ಮೈಸೂರು ಪ್ರವಾಸಿ ಸ್ಥಳಗಳ ನಿರ್ಬಂಧ ತೆರವು, ಕಾರಣ ನೀಡಿದ ಉಸ್ತುವಾರಿ ಸಚಿವರು.. - mysuru dasara

ಕೋವಿಡ್ ನಿಯಮ ಪಾಲಿಸಿ ಸಾಮಾಜಿಕ ಅಂತರ, ಸ್ಯಾನಿಟೈಸರ್, ಮಾಸ್ಕ್ ಅನ್ನು ಕಡ್ಡಾಯವಾಗಿ ಹಾಕಿ ಪ್ರವಾಸಿ ತಾಣಗಳನ್ನು ವೀಕ್ಷಣೆ ಮಾಡಲು ಅವಕಾಶ ನೀಡುವಂತೆ ಸಿಎಂ ಬಿಎಸ್​​ವೈ ಸೂಚನೆ ನೀಡಿದ್ದಾರೆ.

minister-st-somashekar-talk-about-mysuru-dasara-issue
ಸಚಿವ ಎಸ್​​ಟಿ ಸೋಮಶೇಖರ್
author img

By

Published : Oct 17, 2020, 4:14 PM IST

ಮೈಸೂರು: ದಸರಾ ಸಂದರ್ಭದಲ್ಲಿ ಪ್ರವಾಸಿ ಸ್ಥಳಗಳಿಗೆ ನಿರ್ಬಂಧ ವಿಧಿಸಿದರೆ ಬರುವ ಜನರಿಗೆ ನಿರಾಶೆಯಾಗುತ್ತದೆ ಎಂಬ ಉದ್ದೇಶದಿಂದ ಮುಖ್ಯಮಂತ್ರಿಗಳು ಸ್ಥಳೀಯರ ಮನವಿ ಮೇರೆಗೆ ನಿರ್ಬಂಧ ತೆಗೆದುಹಾಕಿದ್ದಾರೆ ಎಂದು ಉಸ್ತುವಾರಿ ಸಚಿವ ಎಸ್​​ಟಿ ಸೋಮಶೇಖರ್ ಹೇಳಿಕೆ ನೀಡಿದ್ದಾರೆ.

ಸಚಿವ ಎಸ್​​ಟಿ ಸೋಮಶೇಖರ್

ಕೋವಿಡ್ ಕಾರಣದಿಂದ ಮೈಸೂರಿನ ಪ್ರವಾಸಿ ಸ್ಥಳಗಳಾದ ಅರಮನೆ, ಮೃಗಾಲಯ, ಕೆಆರ್​​ಎಸ್, ಚಾಮುಂಡಿ ಬೆಟ್ಟವನ್ನು ದಸರಾ ಮುಗಿಯುವರೆಗೂ ಕ್ಲೋಸ್ ಮಾಡಲು ಜಿಲ್ಲಾಡಳಿತ ತೀರ್ಮಾನ ಮಾಡಿತ್ತು. ಆದರೆ ನಿನ್ನೆ ರಾತ್ರಿ ಸಿಎಂ ಕೋವಿಡ್ ನಿಯಮ ಪಾಲಿಸಿ ಸಾಮಾಜಿಕ ಅಂತರ, ಸ್ಯಾನಿಟೈಸರ್, ಮಾಸ್ಕ್ ಅನ್ನು ಕಡ್ಡಾಯವಾಗಿ ಹಾಕಿ ಪ್ರವಾಸಿ ತಾಣಗಳನ್ನು ವೀಕ್ಷಣೆ ಮಾಡಲು ಅವಕಾಶ ನೀಡುವಂತೆ ಹೇಳಿದ್ದಾರೆ. ಅದರಂತೆ ನಿರ್ಬಂಧವನ್ನು ತೆಗೆದುಹಾಕಿದ್ದು, ಪ್ರವಾಸಿ ತಾಣಗಳನ್ನು ವೀಕ್ಷಣೆ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಉಸ್ತುವಾರಿ ಸಚಿವ ಎಸ್​​ಟಿ ಸೋಮಶೇಖರ್ ತಿಳಿಸಿದರು.

ಇನ್ನು ಪ್ರತಿದಿನ ಆನ್​ಲೈನ್​ನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೋಡಬಹುದು. ಆದರೆ ದಸರಾ‌ ನೋಡಲು ಬರಬೇಡಿ ಎಂದು ಹೇಳುವುದಿಲ್ಲ, ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡು ಬನ್ನಿ, ಇಲ್ಲದಿದ್ದರೆ ಮನೆಯಲ್ಲೆ ಕೂತು ವರ್ಚುವಲ್ ಕಾರ್ಯಕ್ರಮ ವೀಕ್ಷಿಸಬಹುದು ಎಂದರು. ರಾತ್ರಿ 7 ಗಂಟೆಯಿಂದ 9 ಗಂಟೆವರೆಗೆ ದೀಪಾಲಂಕಾರ ಇರುತ್ತದೆ ಎಂದು ಇದೇ ಸಂದರ್ಭದಲ್ಲಿ ಸಚಿವರು ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.