ಮೈಸೂರು: ಅಶ್ಲೀಲ ಸಿಡಿ ವೈರಲ್ ಆಗಿ ರಾಜ್ಯದಲ್ಲಿ ಸಂಚಲನ ಮೂಡಿಸುತ್ತಿದ್ದರೆ, ಇತ್ತ ಶಾಂತಚಿತ್ತರಾಗಿ ಸಚಿವ ರಮೇಶ್ ಜಾರಕಿಹೊಳಿ ನಂಜನಗೂಡಿನ ನಂಜುಂಡೇಶ್ವರನ ದರ್ಶನ ಪಡೆದರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ನಂಜುಂಡೇಶ್ವರ ದೇವಸ್ಥಾನದ ಅಭಿವೃದ್ಧಿಗೆ ಬಜೆಟ್ನಲ್ಲಿ ಹಣ ಸಿಗದಿದ್ದರೆ, ನನ್ನ ಇಲಾಖೆಯಿಂದ ಕೊಡಿಸುತ್ತೇನೆ. ದೇವಸ್ಥಾನದ ವಿಚಾರದಲ್ಲಿ ರಾಜಕೀಯ ಬೇಡ ಎಂದರು.
ದೇವರ ದರ್ಶನ ಪಡೆದು ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಲು ರಮೇಶ್ ತೆರಳುವಾಗ, ತನ್ನದು ಎನ್ನಲಾದ ರಾಸಲೀಲೆಯ ವಿಡಿಯೋ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿತ್ತು. ಈ ಸುದ್ದಿ ತಿಳಿದ ಅವರು ಹೆಚ್. ಡಿ. ಕೋಟೆ ಕಡೆಯ ಅಜ್ಞಾತ ಸ್ಥಳಕ್ಕೆ ತೆರಳಿದರು.