ಮೈಸೂರು : ನೀಟ್ ಎಕ್ಸಾಮಿನೇಶನ್‌ನಿಂದ ನಮ್ಮ ರಾಜ್ಯಕ್ಕೆ ಏನು ಸಂಬಂಧ?, ಇದರಿಂದ ನಮ್ಮ ರಾಜ್ಯದ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತಿದೆ. ಇದರ ಬಗ್ಗೆ ಸಂಸತ್ತಿನಲ್ಲಿ ನೀವು ಕೇಳಬೇಕು ಎಂದು ಕಾನೂನು ಸಚಿವ ಜೆ ಸಿ ಮಾಧುಸ್ವಾಮಿ, ಸಂಸದ ತೇಜಸ್ವಿ ಸೂರ್ಯರಿಗೆ ವೇದಿಕೆಯಲ್ಲಿ ಪ್ರಶ್ನಿಸಿದರು.
ಓದಿ: ರಮೇಶ್ ಜಾರಕಿಹೊಳಿ ಮಾಧ್ಯಮಗೋಷ್ಟಿಗೆ ಕ್ಷಣಗಣನೆ: ಡಿ.ಕೆ.ಶಿವಕುಮಾರ್ ನಿವಾಸಕ್ಕೆ ಬಿಗಿ ಪೊಲೀಸ್ ಭದ್ರತೆ
ಸರಸ್ವತಿಪುರಂ ಜೆಎಸ್ಎಸ್ ಮಹಿಳಾ ಕಾಲೇಜಿನ ಸಭಾಂಗಣದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ವತಿಯಿಂದ ಏರ್ಪಡಿಸಲಾಗಿದ್ದ 'ರಾಷ್ಟ್ರೀಯ ಐಕ್ಯತೆ ಹಾಗೂ ಪ್ರಾದೇಶಿಕ ಸ್ವಾತಂತ್ರ್ಯ' ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಹೆಚ್.ಡಿ.ಕುಮಾರಸ್ವಾಮಿ ಅವರ ಸರ್ಕಾರ ಇದ್ದಾಗ, ನಾನು ಎಂಎಲ್ಎ ಆಗಿದ್ದೆ ಹಾಗೂ ಜೆಡಿಯು ಲೀಡರ್ ಆಗಿದ್ದೆ. ಸಿಇಟಿ ಪರ್ಸೆಂಟೇಜ್ ಮೇಲೆ ಮೆಡಿಕಲ್ ಸೀಟ್ ಕೊಡುವುದನ್ನು ನಾನು ವಿರೋಧ ಮಾಡಿದ್ದೆ. ಪಿಯುಸಿ ಮೇಲೆ ಪರೀಕ್ಷೆ ಬರೆದು ಮತ್ತೆ ಸಿಇಟಿ ಬರೆದರೆ, ರಾಜ್ಯವಲ್ಲದೇ ಬೇರೆ ರಾಜ್ಯಗಳಿಂದ ಬಂದು ವಿದ್ಯಾರ್ಥಿಗಳು ಬರೆಯುತ್ತಾರೆ. ನಮ್ಮ ರಾಜ್ಯದ ಮಕ್ಕಳಿಗೆ ಅವಕಾಶ ಕಡಿಮೆಯಾಗುತ್ತದೆ ಎಂದು ಹೇಳಿದರು.
ನೀಟ್ ಪರೀಕ್ಷೆ ತಂದಿದ್ದರಿಂದ ಉತ್ತರ ಭಾರತದವರು ಬಂದು ಪ್ರವೇಶಾತಿ ಪಡೆಯುತ್ತಾರೆ. ಇನ್ ಸರ್ವೀಸ್ ಪಿಜಿ ಡಿಪ್ಲೋಮಾ ಕೊಡುತ್ತಿದ್ದೇವೆ ಅದನ್ನು ಕಟ್ ಮಾಡಿದ್ದೀರಿ. ನೋ ಡಿಪ್ಲೊಮಾ ಕೋಸ್೯ ಅಂದ್ರಿ, ಎಂಬಿಬಿಎಸ್ ಮಾಡಿ ಸ್ನಾತಕೋತ್ತರ ಪದವಿ ಮಾಡಬೇಕು ಅಂದುಕೊಂಡವರಿಗೆ ಸ್ಕೋಪ್ ಇಲ್ಲದಂತೆ ಮಾಡಿದ್ದೀರಿ ಎಂದು ಮಾಧುಸ್ವಾಮಿ, ಕೇಂದ್ರ ಸರ್ಕಾರದ ನಡೆಯನ್ನ ಸಂಸದ ತೇಜಸ್ವಿ ಸೂರ್ಯ ಅವರ ಮುಂದೆ ಟೀಕಿಸಿದರು.
ಕೆಲವರಂತೂ ವಿಭೂತಿ ಗಟ್ಟಿಯನ್ನು ಮುಟ್ಟಿಸುವುದಿಲ್ಲ, ಬಾಯಲ್ಲಿ ನಾವೆಲ್ಲ ಒಂದು ಅಂತಾ ಹೇಳುತ್ತೇವೆ. ಆದರೆ, ಕೆಲವರಿಗೆ ಈ ಭಾವನೆ ಬಂದಿಲ್ಲ. ವೀರಶೈವಸಿಸಮ್ ಇಟ್ ನಾಟ್ ಫಾರ್ ಲಿಂಗಾಯತ್ಸ್. ತುಳಿತಕ್ಕೆ ಒಳಗಾದವರಿಗಾಗಿ ಬಸವಣ್ಣ ಒಂದು ವೇದಿಕೆ ನಿರ್ಮಿಸಿದರು ಎಂದರು.