ಮೈಸೂರು : ಪ್ರತಿಸ್ಪರ್ಧಿ ಬನ್ನೂರು ಕೆ. ರಾಜು ಅವರಿಗಿಂತ 1,305 ಮತಗಳ ಅಂತರದೊಂದಿಗೆ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ(kannada sahitya parishat election) ನೂತನ ಅಧ್ಯಕ್ಷರಾಗಿ ಮಡ್ಡಿಕೆರೆ ಗೋಪಾಲ್ ಜಯಭೇರಿ ಬಾರಿಸಿದ್ದಾರೆ.
ಜಿಲ್ಲೆಯ 17 ಮತಗಟ್ಟೆಗಳಲ್ಲಿ ಸುಗಮವಾಗಿ ಮತದಾನ ನಡೆದಿತ್ತು. ಮೈಸೂರು ತಾಲೂಕಿನಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಮೈಸೂರು ಜಿಲ್ಲೆಯಾದ್ಯಂತ ಒಟ್ಟು 13,378 ಮತದಾರರಲ್ಲಿ 974 ಮಹಿಳೆಯರು ಹಾಗೂ 4,748 ಪುರುಷರು ಸೇರಿ 5,722 ಮತದಾರರು ಮತ ಚಲಾಯಿಸಿದ್ದಾರೆ. ಶೇ.42.77ರಷ್ಟು ಮತದಾನವಾಗಿತ್ತು.
ಮೈಸೂರಿನಲ್ಲಿ ಒಟ್ಟು 7,783 ಮತದಾರರಲ್ಲಿ 2,618 ಮಂದಿ ಮಾತ್ರವೇ ಮತಚಲಾಯಿಸಿದ್ದಾರೆ. ತಾಲೂಕುವಾರು ಮತದಾನ ಗಮನಿಸುವುದಾದರೆ ತಿ. ನರಸೀಪುರದಲ್ಲಿ -285 (ಶೇ.22.37), ಬನ್ನೂರಿನಲ್ಲಿ- 474 (ಶೇ.73.37), ಹುಣಸೂರಿನಲ್ಲಿ- 563 (ಶೇ.51.89), ನಂಜನಗೂಡು- 181 (ಶೇ.44.25), ಹೆಚ್.ಡಿ.ಕೋಟೆ 368 (ಶೇ.55.09), ಕೆ.ಆರ್.ನಗರ 574 (ಶೇ.61), ಪಿರಿಯಾಪಟ್ಟಣ- 387 (ಶೇ.44.43), ಸರಗೂರು- 132 (ಶೇ.65.35) ಹಾಗೂ ಸಾಲಿಗ್ರಾಮದಲ್ಲಿ- 140 (53.44) ರಷ್ಟು ಮತದಾನವಾಗಿತ್ತು.
ಇದನ್ನೂ ಓದಿ: ಪರಿಷತ್ ಫೈಟ್.. ಬಿಡುಗಡೆಯಾಗದ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ.. ಆಕಾಂಕ್ಷಿಗಳಲ್ಲಿ ಹೆಚ್ಚಿದ ದುಗುಡ..