ಮೈಸೂರು: ಕೊರೊನಾ ಬಿಕ್ಕಟ್ಟಿನ ಕಾರಣದಿಂದ ಈ ಬಾರಿಯೂ ವಿಶ್ವ ಯೋಗ ದಿನಾಚರಣೆ ಪ್ರಯುಕ್ತ ನಡೆಯಬೇಕಿದ್ದ ಸಾಮೂಹಿಕ ಯೋಗ ಪ್ರದರ್ಶನ ರದ್ದು ಮಾಡಲಾಗಿದೆ. ವಿಶೇಷವೆಂದರೆ, ಮನೆಯಲ್ಲಿಯೇ ಬರೋಬ್ಬರಿ ಒಂದು ಲಕ್ಷ ಜನರಿಂದ ಯೋಗ ಪ್ರದರ್ಶನಗೊಳ್ಳಲಿದೆ. ಈಗಾಗಲೇ ಮನೆಮನೆಯಲ್ಲಿ ಯೋಗಾಭ್ಯಾಸ ಸಿದ್ಧತೆ ಮಾಡಿಕೊಳ್ಳಲಾಗುತ್ತದೆ. ಯೋಗ ದಿನಾಚರಣೆಯಂದು ಮನೆಮನೆಯಲ್ಲಿ ಯೋಗ ಪ್ರದರ್ಶನ ಮಾಡಲು ಯೂಟ್ಯೂಬ್ನಲ್ಲಿ ವಿಡಿಯೋ ಬಿಡುಗಡೆ ಮಾಡಲಾಗಿದೆ ಎಂದು ಮೈಸೂರು ಯೋಗ ಫೌಂಡೇಶನ್ ಅಧ್ಯಕ್ಷ ಶ್ರೀಹರಿ ಮಾಹಿತಿ ನೀಡಿದರು.
ಓದಿ: ಕೋವಿಡ್ನಿಂದ ತಂದೆ ಸಾವು; ದಿಕ್ಕು ತೊಚದೇ ಫುಟ್ಪಾತ್ನಲ್ಲಿ ಬಟ್ಟೆ ಮಾರುತ್ತಿರುವ 'ಮಾಹಿ'!
ಜೂನ್ 21 ರಂದು ವಿಶ್ವ ಯೋಗ ದಿನಾಚರಣೆ ಅಂಗವಾಗಿ ಮೈಸೂರಿನಲ್ಲಿ ಸರಳ ಯೋಗ ದಿನಾಚರಣೆಗೆ ಸೂಚಿಸಲಾಗಿದೆ.
2018ರಲ್ಲಿ 60 ಸಾವಿರಕ್ಕಿಂತ ಹೆಚ್ಚು ಮಂದಿಯಿಂದ ಸಾಮೂಹಿಕ ಯೋಗ ಪ್ರದರ್ಶನ ಮಾಡುವ ಮೂಲಕ, ಗಿನ್ನಿಸ್ ದಾಖಲೆಗೆ ಮೈಸೂರು ಹತ್ತಿರವಾಗಿತ್ತು. ಕಳೆದ ಬಾರಿ ಕೊರೊನಾ ಮೊದಲನೇ ಅಲೆ ಕಾರಣಕ್ಕಾಗಿ ಸಾಮೂಹಿಕ ಯೋಗ ಪ್ರದರ್ಶನ ರದ್ದು ಮಾಡಲಾಯಿತು. ಈ ಬಾರಿಯೂ ಕೊರೊನಾ ಎರಡನೇ ಅಲೆ ಹಿನ್ನೆಲೆಯಲ್ಲಿ ಯೋಗ ಪ್ರದರ್ಶನ ರದ್ದು ಮಾಡಲಾಗಿದೆ. ಮನೆಮನೆಯಲ್ಲಿ ಯೋಗಪ್ರದರ್ಶನ ಮಾಡಿ ಫೋಟೋ ಕಳಿಸಿದವರಿಗೆ ಯೋಗ ಸಂಸ್ಥೆಗಳಿಂದ ಇ-ಪ್ರಮಾಣಪತ್ರ ದೊರೆಯಲಿದೆ.