ETV Bharat / city

ನಾನು ದುರ್ಯೋಧನ ಒಕೆ, ಆದ್ರೆ ದುಶ್ಯಾಸನ ಅಲ್ಲ: ವಿಶ್ವನಾಥ್​ಗೆ ಸಾ.ರಾ.ಮಹೇಶ್​​ ತಿರುಗೇಟು

ಮಾಜಿ ಸಚಿವ ಸಾ.ರಾ.ಮಹೇಶ್ ಹುಣಸೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹೆಚ್​​.ವಿಶ್ವನಾಥ್​ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

Karnataka political developments
ಸಾ.ರಾ.ಮಹೇಶ್ ವಾಗ್ದಾಳಿ
author img

By

Published : Nov 26, 2019, 5:06 PM IST

ಮೈಸೂರು: ವಿಶ್ವನಾಥ್ ಅವರು ಮುಂಬೈನ ಹೋಟಲ್​ನಲ್ಲಿ ತಂಗಿದ್ದಾಗ ಮಾಧ್ಯಮಗಳಿಗೆ ನನಗೆ ಸಾಲ ಇದೆ ಎಂದು ಹೇಳಿದ್ದರು. ಆದರೆ, ನಾಮಪತ್ರದಲ್ಲಿ ಕೋಟಿ ಆಸ್ತಿ ಇದೆ ಎಂದು ಅಫಿಡವಿಟ್​​​​ ಸಲ್ಲಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸಬೇಕು ಎಂದು ಮಾಜಿ ಸಚಿವ ಸಾ.ರಾ.ಮಹೇಶ್ ಆಗ್ರಹಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಚುನಾವಣಾ ಪ್ರಚಾರದಲ್ಲಿ ದೇವೇಗೌಡರ ಫೋಟೋ ಇಟ್ಟುಕೊಂಡು ಪೂಜೆ ಮಾಡುತ್ತೇನೆ ಎನ್ನುತ್ತಾರೆ. ಸಿದ್ದರಾಮಯ್ಯ ಒಳ್ಳೆಯ ಆಡಳಿತಗಾರ ಎಂದು ಹೇಳುತ್ತಾ ಮತದಾರರಿಗೆ ದಿಕ್ಕು ತಪ್ಪಿಸುತ್ತಿದ್ದಾರೆ. ಸಂದರ್ಭಕ್ಕೆ ತಕ್ಕಂತೆ ಬಣ್ಣ ಬದಲಿಸುತ್ತಾರೆ ಎಂದು ಎಂದು ಟೀಕಿಸಿದರು.

ಸಾ.ರಾ.ಮಹೇಶ್ ವಾಗ್ದಾಳಿ

ನನ್ನನ್ನು ದುರ್ಯೋಧನ ಎಂದಿದ್ದಾರೆ. ದುರ್ಯೋಧನ ಎಂದು ಒಪ್ಪಿಕೊಳ್ಳುತ್ತೇನೆ. ಆದರೆ, ದುಶ್ಯಾಸನ ಅಲ್ಲ. ಯಾರು ಒಳ್ಳೆಯವರು ಎಂಬುದು ಚುನಾವಣಾ ಫಲಿತಾಂಶದ ಬಳಿಕ ತಿಳಿಯಲಿದೆ ಎಂದು ಹೆಚ್​.ವಿಶ್ವನಾಥ್​​ಗೆ ತಿರುಗೇಟು ನೀಡಿದರು.

Intro:ಮೈಸೂರು: ಬಾಂಬೆಗೆ ಹೋದಾಗ ಕೆಲವು ಮಾಧ್ಯಮಗಳಲ್ಲಿ ನನಗೆ ಸಾಲ ಇದೆ ಎಂದು ವಿಶ್ವನಾಥ್ ಹೇಳಿದರು ಆದರೆ ನಾಮಪತ್ರ ಸಲ್ಲಿಕೆ ಆದಾಗ ಕೋಟಿ ಆಸ್ತಿ ಹೇಗೆ ಬಂತು ಎಂಬುದನ್ನು ತನಿಖೆ ಮಾಡಬೇಕೆಂದು ವಿಶ್ವನಾಥ್ ವಿರುದ್ಧ ಸಾ.ರಾ.ಮಹೇಶ್ ಮತ್ತೆ ವಾಗ್ದಾಳಿ ನಡೆಸಿದ್ದಾರೆ.
Body:

ಇಂದು ಮಾಜಿ ಸಚಿವ ಹಾಗೂ ಹಾಲಿ ಶಾಸಕ ಸಾ.ರಾ.ಮಹೇಶ್ ವಿಶ್ವನಾಥ್ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿ ಚುನಾವಣಾ ಪ್ರಚಾರದಲ್ಲಿ ದೇವೇಗೌಡರ ಫೋಟೋ ಇಟ್ಟುಕೊಂಡು ಪೂಜೆ ಮಾಡುತ್ತೇನೆ ಎನ್ನುತ್ತಾರೆ. ಸಿದ್ದರಾಮಯ್ಯ ಒಳ್ಳೆಯ ಆಡಳಿತಗಾರ ಎಂದು ಹೇಳಿ‌ ಜನರನ್ನು ದಿಕ್ಕು ತಪ್ಪಿಸಿ ಗೆಲ್ಲಲು ಪ್ರಯತ್ನಿಸುತ್ತಿದ್ದಾರೆ. ಇವರು ಸಂದರ್ಭಕ್ಕೆ ತಕ್ಕಂತೆ ಬಣ್ಣ ಬದಲಿಸುತ್ತಾರೆ ಎಂದು ವಾಗ್ದಾಳಿ ನಡೆಸಿದ ಸಾ.ರಾ.ಮಹೇಶ್ ದುರ್ಯೋಧನ ಎಂದು ನನ್ನ ಬಗ್ಗೆ ವಿಶ್ವನಾಥ್ ಹೇಳುತ್ತಾರೆ ಆದರೆ ನಾನು ದುರ್ಯೋಧನ ಎಂದು ಒಪ್ಪಿಕೊಳ್ಳುತ್ತೇನೆ ಆದರೆ ದುಶ್ಯಾಸನ ಅಲ್ಲಾ.
ಯಾರು ಒಳ್ಳೆಯವರು ಎಂದು ಜನ ತಿರ್ಮಾನ ಮಾಡಲಿದ್ದಾರೆ . ವಿಶ್ವನಾಥ್ ಬಾಂಬೆಗೆ ಹೋದಾಗ ನನಗೆ ಸಾಲ ಇದೆ ಎಂದು ವಿಶ್ವನಾಥ್ ಕೆಲವು ಮಾಧ್ಯಮಗಳಲ್ಲಿ ಹೇಳಿದ್ದರು. ಆದರೆ ಉಪ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸುವಾಗ ಸಾಲ ಇಲ್ಲ.‌ ಕೋಟಿ ಹಣವಿದೆ ಅದು ಹೇಗೆಬಂತು ಎಂಬುದು ತನಿಖೆಯಾಗಲಿ ಎಂದರು.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.