ETV Bharat / city

ಫಾರ್ಮುಲಾಗಾಗಿ ಮೈಸೂರು ನಾಟಿ ವೈದ್ಯನ ಕೊಲೆ: ಸಿನಿಮಾ ಸ್ಟೈಲಲ್ಲಿ ನಡೆದ ಪ್ರಕರಣ ಭೇದಿಸಿದ ಕೇರಳ ಪೊಲೀಸ್​

author img

By

Published : May 14, 2022, 2:18 PM IST

ಮೈಸೂರಿನ ನಾಟಿ ವೈದ್ಯನ ನಿಗೂಢ ನಾಪತ್ತೆ ಪ್ರಕರಣವನ್ನು ಕೊನೆಗೂ ಪೊಲೀಸರು ಭೇದಿಸಿದ್ದಾರೆ. ನಾಟಿ ವೈದ್ಯನ ದುರಂತ ಅಂತ್ಯ ಹಾಗೂ ಈ ಪ್ರಕರಣ ಬೆಳಕಿಗೆ ಬಂದ ಪರಿ ಬಹಳ ರೋಚಕವಾಗಿದೆ. ಯಾವುದೇ ಸಿನಿಮಾ ಕಥೆಯನ್ನು ಮೀರಿಸುವಂತೆ ಮೈಸೂರಿನ ನಾಟಿ ವೈದ್ಯನನ್ನು ಭೀಕರವಾಗಿ ಕೊಲೆ ಮಾಡಲಾಗಿದೆ.

ನಾಟಿ ವೈದ್ಯ ಶಾಬಾ ಷರೀಫ್
ನಾಟಿ ವೈದ್ಯ ಶಾಬಾ ಷರೀಫ್

ಮೈಸೂರು: ಕಳೆದ ಮೂರು ವರ್ಷಗಳ ಹಿಂದೆ ಮೈಸೂರಿನಿಂದ ಅಪಹರಣವಾಗಿದ್ದ ನಾಟಿ ವೈದ್ಯನನ್ನು ಚಿತ್ರಹಿಂಸೆ ನೀಡಿ ಕೊಲೆ ಮಾಡಿರುವ ಘಟನೆ ಕೇರಳದಲ್ಲಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಇದೊಂದು ಸಿನಿಮಾ ಶೈಲಿಯ ಕೊಲೆ ರೀತಿ ಆಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ಜನ ಆರೋಪಿಗಳನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ವಸಂತ ನಗರ ನಿವಾಸಿ ಶಾಬಾ ಷರೀಫ್ (60) ಎಂಬ ನಾಟಿ ವೈದ್ಯ 2019 ರ ಆಗಸ್ಟ್​ನಲ್ಲಿ ತಮ್ಮ ಮನೆಯಿಂದ ಅಪಹರಣಕ್ಕೊಳಗಾಗಿದ್ದರು. ಅವರು ಏನಾದರೂ ಎಂಬುದು ಇದುವರೆಗೂ ತಿಳಿದಿರಲಿಲ್ಲ.

ಕೇರಳದ ಮಲ್ಲಪ್ಪುರಂ ಜೆಲ್ಲೆಯ ನೀಲಂಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದರೋಡೆ ಪ್ರಕರಣವೊಂದು ನಡೆದಿತ್ತು. ಈ ಸಂಬಂಧ ಶೈಬೀನ್ ಅಶ್ರಫ್ ಎಂಬಾತ ನೀಲಂಬೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪೊಲೀಸರು ತನಿಖೆ ಪ್ರಾರಂಭಿಸಿ, ಮೂವರನ್ನು ವಶಕ್ಕೆ ಪಡೆದಿದ್ದರು. ಆಗ ಬಯಲಾಗಿದ್ದು ಶಾಬಾ ಷರೀಫ್ ಕೊಲೆ ಪ್ರಕರಣ.

ಹೌದು, ಬಂಧಿತ ಮೂವರನ್ನು ವಿಚಾರಣೆಗೆ ಒಳಪಡಿಸಿದ ವೇಳೆ ಈ ಕೊಲೆ ರಹಸ್ಯ ಬಯಲಾಗಿದೆ. ತನ್ನ ಮನೆಯಲ್ಲಿ 7 ಲಕ್ಷ ರೂ.ನಗದು ಹಾಗೂ ಚಿನ್ನಾಭರಣ ಕಳ್ಳತನವಾಗಿದೆ ಎಂದು ದೂರು ನೀಡಿದ್ದ ಶೈಬೀ ನ್ಅಶ್ರಫ್​ನೇ ಕೊಲೆಗಾರ ಎಂಬುದನ್ನು ಕೇಳಿ, ಕೇರಳದ ಪೊಲೀಸರು ಬೆಚ್ಚಿಬಿದ್ದಿದ್ದರು. ನಂತರ ಆರೋಪಿಗಳು ಪೆನ್ ಡ್ರೈವ್​ವೊಂದನ್ನು ಪೊಲೀಸರಿಗೆ ನೀಡಿದ್ದರು. ಅದರಲ್ಲಿ ಶಾಬಾ ಷರೀಫ್ ಅವರ ಕೊಲೆಗೆ ಸಂಬಂಧಿಸಿದ ವಿಚಾರಗಳಿದ್ದವು. ಅವುಗಳನ್ನು ಕಂಡು ಪೊಲೀಸರು ಗಾಬರಿಯಾಗಿದ್ದರು.

ನಾಟಿ ವೈದ್ಯ ಶಾಬಾ ಷರೀಫ್
ಕೊಲೆಗೀಡಾದ ನಾಟಿ ವೈದ್ಯ ಶಾಬಾ ಷರೀಫ್

ಅಪಹರಣ, ಕೊಲೆ ನಡೆದಿದ್ದು ಹೇಗೆ?: ಪೈಲ್ಸ್ (ಮೂಲವ್ಯಾಧಿ) ರೋಗಕ್ಕೆ ಪಾರಂಪರಿಕ ಚಿಕಿತ್ಸೆ ನೀಡುತ್ತಿದ್ದ ಷರೀಫ್ ಅದರಲ್ಲಿ ಪರಿಣಿತಿ ಹೊಂದಿದ್ದರು. ಹೀಗಾಗಿ, ಆಗಸ್ಟ್ 2019 ರಲ್ಲಿ ಬೈಕ್​ನಲ್ಲಿ ಬಂದ ಇಬ್ಬರು ಕೇರಳ ಮೂಲದ ಯುವಕರು ಶಾಬಾ ಷರೀಫ್ ಅವರನ್ನು ಭೇಟಿಯಾಗುತ್ತಾರೆ. ನಮ್ಮ ಮನೆಯಲ್ಲಿ ಒಬ್ಬರಿಗೆ ಪೈಲ್ಸ್ ಕಾಯಿಲೆ ಇದೆ ಎಂದು ಕೇಳಿ, ಬೈಕ್​ನಲ್ಲಿ ಕರೆದುಕೊಂಡು ಹೋಗುತ್ತಾರೆ. ನಂತರ ಕಾರಿನಲ್ಲಿ ಅವರನ್ನು ಅಪಹರಿಸಿದ್ದರು.

ಕೇರಳದಲ್ಲಿ ನೀಲಂಬೂರಿಗೆ ಕರೆದೊಯ್ದು ಬಳಿಕ ಷರೀಫ್​ ಅವರನ್ನು ಶೈಬೀನ್ಅಶ್ರಫ್ ಮನೆಗೆ ಕರೆತಂದರು. ಆ ನಂತರ ಆತನೊಂದಿಗೆ ಮಾತನಾಡಿದ ಅಶ್ರಫ್, ಪೈಲ್ಸ್ ಚಿಕಿತ್ಸೆಯ ವಿಧಾನ ಹೇಳಿ ಕೊಡುವಂತೆ ಒತ್ತಡ ಹೇರುತ್ತಾನೆ. ಆದರೆ ಪೂರ್ವಜರಿಂದ ಕಲಿತ ವಿದ್ಯೆಯನ್ನು ಹೇಳಿಕೊಡುವುದಿಲ್ಲ ಎಂದು ಶಾಬಾ ಷರೀಫ್ ನಿರಾಕರಿಸುತ್ತಾರೆ. ಇದರಿಂದ ಕೋಪಗೊಂಡ ಅಶ್ರಫ್, ಅವರನ್ನು ತನ್ನ ಮನೆಯ ಎರಡನೇ ಮಹಡಿಯಲ್ಲಿರುವ ಕೊಠಡಿಯೊಂದರಲ್ಲಿ ಸರಪಳಿ ಬಿಗಿದು ಕೂಡಿ ಹಾಕುತ್ತಾನೆ. ಸತತ ಒಂದು ವರ್ಷ ಅವರಿಗೆ ದೈಹಿಕವಾಗಿ ಚಿತ್ರಹಿಂಸೆ ನೀಡುತ್ತಾರೆ. ಹಿಂಸೆ ತಾಳಲಾರದೆ ಶಾಬಾ ಷರೀಫ್ 2020ರ ಅಕ್ಟೋಬರ್​ನಲ್ಲಿ ಸಾವನ್ನಪ್ಪುತ್ತಾರೆ.

ನಂತರ ಮನೆಗೆ ನುಗ್ಗಿ ಏಳು ಮಂದಿ ಸೇರಿ ಶಾಬಾ ಷರೀಫ್ ದೇಹವನ್ನು ಮಚ್ಚಿನಿಂದ ತುಂಡು, ತುಂಡು ಮಾಡಿ ಚೀಲದಲ್ಲಿ ತುಂಬಿಕೊಂಡು ಕೇರಳದ ನದಿಯೊಂದರಲ್ಲಿ ಬಿಸಾಡುತ್ತಾರೆ. ಇದೇ ವೇಳೆ ಅಶ್ರಫ್ ತನ್ನ ಸಹಚರರಿಗೆ ಕೊಡಬೇಕಾದ ಹಣವನ್ನು ನೀಡಿರಲಿಲ್ಲ. ಹೀಗಾಗಿ, ಆರೋಪಿಗಳು ಏಪ್ರಿಲ್ 24 ರಂದು ಆಶ್ರಫ್ ಮನೆಗೆ ನುಗ್ಗಿ 7 ಲಕ್ಷ ರೂ. ನಗದು ಹಾಗೂ ಚಿನ್ನಾಭರಣವನ್ನು ದರೋಡೆ ಮಾಡಿದ್ದಾರೆ. ಈ ಸಂಬಂಧ ದೂರು ದಾಖಲಿಸಿದಾಗ ಕೊಲೆ ಪ್ರಕರಣ ಬಯಲಿಗೆ ಬಂದಿದೆ.

ನಗರ ಪೊಲೀಸ್ ಕಮಿಷನರ್ ಹೇಳಿದ್ದೇನು? : 2019 ರಲ್ಲಿ ನಾಪತ್ತೆಯಾಗಿದ್ದ ನಾಟಿ ವೈದ್ಯ ಶಾಬಾ ಷರೀಫ್ ಪ್ರಕರಣ ನಗರದ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ಆದರೆ, ನಾಪತ್ತೆಯಾದ ವೈದ್ಯ ಕೇರಳದಲ್ಲಿ ಕೊಲೆಯಾಗಿದ್ದಾನೆ ಎಂಬ ಮಾಹಿತಿ ಗೊತ್ತಾಗಿದ್ದು, ಈ ಸಂಬಂಧ ಕೇರಳ ಪೊಲೀಸರು ತನಿಖೆ ನಡೆಸುತ್ತಿದ್ದರು. ಅವರಿಗೆ ಮೈಸೂರಿನ ಸರಸ್ವತಿಪುರಂ ಪೊಲೀಸರು ಕೆಲವು ಮಾಹಿತಿಗಳನ್ನ ನೀಡಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ 'ಈಟಿವಿ ಭಾರತ'ಕ್ಕೆ ದೂರವಾಣಿಯಲ್ಲಿ ಮಾಹಿತಿ ನೀಡಿದರು.

ಮನೆಗೆ ಬೀಗ ಹಾಕಿ ಹೋಗಿರುವ ಕುಟುಂಬಸ್ಥರು: ಕೊಲೆಯಾಗಿರುವ ಶಾಬಾ ಷರೀಫ್ ಮರಳಿ ಬರುತ್ತಾರೆ ಎಂದು ಕಳೆದ ಮೂರು ವರ್ಷಗಳಿಂದ ವಸಂತ ನಗರದಲ್ಲಿ ಕಾಯುತ್ತಿದ್ದ ಅವರ ಕುಟುಂಬ, ಕೇರಳದಲ್ಲಿ ಕೊಲೆಯಾಗಿದ್ದಾರೆ ಎಂಬ ವಿಚಾರ ತಿಳಿದ ದಿನದಿಂದ ಮನೆಗೆ ಬೀಗ ಹಾಕಿಕೊಂಡು ಹೋಗಿದ್ದು, ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ ಎಂದು ಕೊಲೆಯಾದ ನಾಟಿ ವೈದ್ಯ ಶಾಬಾ ಷರೀಫ್ ಅವರ ಸ್ನೇಹಿತ ಹರೀಶ್ ತಿಳಿಸಿದ್ದಾರೆ.

ಇದನ್ನೂ ಓದಿ: ಬೆಳಗಾವಿ ಮೆಡಿಕಲ್​ ಕಾಲೇಜಲ್ಲಿ ಸೀನಿಯರ್ಸ್-ಜ್ಯೂನಿಯರ್ಸ್ ನಡುವೆ ಮಾರಾಮಾರಿ.. 15 ವಿದ್ಯಾರ್ಥಿಗಳು ಸಸ್ಪೆಂಡ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.