ಮೈಸೂರು : ಚಾಮುಂಡಿ ತಾಯಿಯ ವರ್ಧಂತಿ ದಿನಕ್ಕೆ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಕೋವಿಡ್ ಹಿನ್ನೆಲೆಯಲ್ಲಿ ಎರಡು ವರ್ಷ ಅದ್ಧೂರಿಯಾಗಿ ಮಾಡಲು ಸಾಧ್ಯವಾಗಿರಲಿಲ್ಲ. ಈ ಸಲ ವಿಶೇಷವಾಗಿ ಚಿನ್ನದ ಪಲ್ಲಕ್ಕಿ ಉತ್ಸವ ವರ್ಧತಿಯ ದಿನ ಇರುತ್ತದೆ ಎಂದು ಪ್ರಧಾನ ಅರ್ಚಕರಾದ ಶಶಿಶೇಖರ್ ದೀಕ್ಷಿತ್ ಚಾಮುಂಡಿ ಬೆಟ್ಟದಲ್ಲಿ ಹೇಳಿಕೆ ನೀಡಿದ್ದಾರೆ.
ಇಂದು ಚಾಮುಂಡಿ ಬೆಟ್ಟದಲ್ಲಿ 3ನೇ ಆಷಾಢ ಶುಕ್ರವಾರದ ನಿಮಿತ್ತ ವಿಶೇಷ ಪೂಜೆಯನ್ನು ನೆರೆವೇರಿಸಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿ, ಜುಲೈ 20ರಂದು ತಾಯಿಯ ವರ್ಧಂತಿ ನಡೆಯಲಿದೆ. ಚಿನ್ನದ ಪಲ್ಲಕ್ಕಿ ಉತ್ಸವ ಈ ಬಾರಿಯ ವರ್ಧಂತಿಯ ವಿಶೇಷ ಆಕರ್ಷಣೆಯಾಗಿರಲಿದೆ. ಸರ್ಕಾರ ಬಸ್ ವ್ಯವಸ್ಥೆ ಮಾಡಿದೇ ಜನ ಸದುಪಯೋಗ ಪಡಿಸಿಕೊಳ್ಳಬೇಕು. ಸರ್ಕಾರಿ ನಿಯಮಗಳನ್ನು ಪಾಲಿಸಿ ಸಹಕರಿಸ ಬೇಕು ಎಂದು ಭಕ್ತರಲ್ಲಿ ವಿನಂತಿಸಿದರು.
ಇಂದು ಆಷಾಢ ಮಾಸದ ಮೂರನೇ ಶುಕ್ರವಾರವಾದ ಕಾರಣ ದೇವಿಗೆ ಲಕ್ಷ್ಮಿಯ ಅಲಂಕಾರ ಮಾಡಲಾಗಿದೆ. ಇದಕ್ಕೂ ಮೊದಲು ಮುಂಜಾನೆ ರುದ್ರಾಭಿಷೇಕ, ಪಂಚಾಮೃತಾಭಿಷೇಕ, ವಿಶೇಷ ಪುಷ್ಪಾರ್ಚನೆ ಮತ್ತು ಕೈಕರ್ಯಗಳು ಜರುಗಿದವು ಎಂದು ದೀಕ್ಷಿತರು ಮಾಹಿತಿ ನೀಡಿದರು.
ಇದನ್ನೂ ಓದಿ: ವನ್ಯ ಜೀವಿಗಳನ್ನು ಮನೆಯಲ್ಲಿ ಸಾಕುವುದು ಶಿಕ್ಷಾರ್ಹ ಅಪರಾಧ: ಡಿಸಿಎಫ್ ಕರಿಕಾಳನ್