ಮೈಸೂರು: 35 ದಿನದಲ್ಲಿಯೇ ಅರಮನೆ ಆವರಣಕ್ಕೆ ಹೊಂದಿಕೊಂಡು, ವಾಪಸ್ ಹೋಗುವಾಗ ಲಾರಿ ಏರಲು ಹಿಂದೇಟು ಹಾಕಿದ ಅಶ್ವತ್ಥಾಮನಿಗೆ, ಕ್ಯಾಪ್ಟನ್ ಅಭಿಮನ್ಯು ತಾನು ಕೂಂಬಿಂಗ್ ಆಪರೇಷನ್ ಎಕ್ಸ್ಪರ್ಟ್ ಎಂದು ತೋರಿಸಿದ್ದಾನೆ.
ಜಂಬೂ ಸವಾರಿಗೆ ಇದೇ ಮೊದಲ ಬಾರಿಗೆ ಆಗಮಿಸಿದ ಅಶ್ವತ್ಥಾಮ, ಇಂದು ಮತ್ತೆ ಕಾಡಿಗೆ ಹೋಗುವಾಗ ಲಾರಿ ಏರಲು ಸತಾಯಿಸಿದ್ದಾನೆ. ನಂತರ ಗೋಪಾಲಸ್ವಾಮಿ ಹಾಗೂ ಧನಂಜಯನ ಸಹಾಯದಿಂದ ಲಾರಿ ಹತ್ತಿಸಲು ಬಹಳಷ್ಟು ಪ್ರಯತ್ನ ಮಾಡಲಾಯಿತು.
ಗೋಪಾಲಸ್ವಾಮಿ ಒಂದು ಲಾರಿ ಹತ್ತಿ, ಹೀಗೆ ಹತ್ತ ಬೇಕು ಎಂದು ತೋರಿಸಿದ್ದಾನೆ. ಅದಕ್ಕೂ ಕ್ಯಾರೇ ಎನ್ನದೇ ಅಶ್ವತ್ಥಾಮ ತನ್ನ ಮೊಂಡಾಟ ಮುಂದುವರಿಸಿದ್ದಾನೆ. ಆಗ ಆನೆಗಳ ಕೂಂಬಿಂಗ್ ಆಪರೇಷನ್ ಎಕ್ಸ್ಪರ್ಟ್ ಅಭಿಮನ್ಯು ಮುಂದೆ ಬಂದಿದ್ದಾನೆ.
ಮಣ್ಣಿನ ಗುಡ್ಡೆಯ ಮೂಲಕ ಅಶ್ವತ್ಥಾಮ ಏನೇ ಮಾಡಿದರು, ಲಾರಿ ಏರಲೇ ಇಲ್ಲ. ನಂತರ ರ್ಯಾಂಪ್ ಲಾರಿ ಏರುವಂತೆ ಕರೆದುಕೊಂಡು ಹೋಗಲಾಯಿತು. ಅಲ್ಲೂ ಮೊಂಡಾಟ ಶುರು ಮಾಡಿದ್ದ. ಇದರಿಂದ ಕೋಪಗೊಂಡ ಅಭಿಮನ್ಯು, ಅಶ್ವತ್ಥಾಮನಿಗೆ ಗುದ್ದಿ ರ್ಯಾಂಪ್ ಲಾರಿ ಹತ್ತಿಸಿದ್ದಾನೆ. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಮೊಂಡಾಟ ಮಾಡಿದ ಅಶ್ವತ್ಥಾಮ, ಅಭಿಮನ್ಯು ಮುಂದೆ ಸೈಲೆಂಟ್ ಆಗಿ ಕಾಡಿಗೆ ಮರಳಿದ್ದಾನೆ.
ಇದನ್ನೂ ಓದಿ: ಅದ್ದೂರಿಯಾಗಿ ಜರುಗಿದ ನಾಡಹಬ್ಬ ದಸರಾ ಜಂಬೂಸವಾರಿ