ಮೈಸೂರು: ಸಿಎಂ ಯಡಿಯೂರಪ್ಪ ಅವರು ನನ್ನ ಮೇಲೆ ವಿಶ್ವಾಸವಿಟ್ಟು ಮೈಸೂರು ಉಸ್ತುವಾರಿಯಾಗಿ ನೇಮಿಸಿದ್ದಾರೆ, ಅವರ ವಿಶ್ವಾಸಕ್ಕೆ ಹಾಗೂ ಸರ್ಕಾರಕ್ಕೆ ಯಾವುದೇ ಚ್ಯುತಿ ಬಾರದ ರೀತಿಯಲ್ಲಿ ಕೆಲಸ ಮಾಡುತ್ತೇನೆ ಎಂದು ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.
ಇಂದು ಮೈಸೂರಿಗೆ ಆಗಮಿಸಿ ಜಿಲ್ಲೆಯ ಉನ್ನತ ಅಧಿಕಾರಿಗಳ ಸಭೆ ನಡೆಸಿದ ಸಚಿವ ಸೋಮಶೇಖರ್, ನಂತರ ಮಾಧ್ಯಮಗಳ ಜೊತೆ ಮಾತಾನಾಡಿ,ಕೊರೊನಾ ಸೋಂಕಿತರಲ್ಲಿ ಮೈಸೂರು ಎರಡನೇ ಸ್ಥಾನದಲ್ಲಿ ಇದ್ದು, ಇಲ್ಲಿ ಅಧಿಕಾರಗಳು ಯಾವ ರೀತಿ ಕೆಲಸ ಮಾಡುತ್ತಿದ್ದಾರೆ ಎಂಬ ಬಗ್ಗೆ ಮಾಹಿತಿಯನ್ನು ಪಡೆದಿದ್ದೇನೆ. ನಾಳೆ ಜನ ಪ್ರತಿನಿಧಿಗಳ ಸಭೆ ನಡೆಸಿ ನಂತರ ನಂಜನಗೂಡಿಗೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿ ಮಾಹಿತಿಯನ್ನು ಪಡೆಯುತ್ತೇನೆ. ಮೈಸೂರಿನಲ್ಲಿ ಲಾಕ್ಡೌನ್ ಇದೆ. ಆದರೆ,ನಂಜನಗೂಡು ಬಿಟ್ಟು ಬೇರೆಯಲ್ಲೂ ಸೀಲ್ ಡೌನ್ ಮಾಡುವುದಿಲ್ಲ.
ಮೈಸೂರಿನಲ್ಲಿ ಪೊಲೀಸರು ಸರಿಯಾಗಿ ಲಾಕ್ಡೌನ್ ಮಾಡಿಸುತ್ತಿಲ್ಲ ಎಂಬ ಮಾಹಿತಿಯೂ ಬಂದಿದೆ. ನಾಳೆಯಿಂದ ಅನಾವಶ್ಯಕವಾಗಿ ಓಡಾಡಿದರೆ ಅವರ ವಾಹನ ಸೀಜ್ ಮಾಡಿ ವ್ಯಕ್ತಿಗಳನ್ನ ಅರೆಸ್ಟ್ ಮಾಡಿಸುವಂತೆ ಈಗಾಗಲೇ ಪೊಲೀಸರಿಗೆ ತಿಳಿಸಿದ್ದೇನೆ. ರಾಜ್ಯದಲ್ಲಿ ಮಾರುಕಟ್ಟೆಗೆ ತರಕಾರಿಗಳು ಬರಲು ಯಾವುದೇ ಸಮಸ್ಯೆ ಇಲ್ಲ. 14ರ ನಂತರವೂ ರಾಜ್ಯದಲ್ಲಿ ಎಲ್ಲಾ ಜಿಲ್ಲೆಯಲ್ಲಿ ಲಾಕ್ಡೌನ್ ಮುಂದುವರೆಯುವಂತೆ ಸಿಎಂ ಗೆ ನಾವು ತಿಳಿಸಿದ್ದೇವೆ. ಈ ಬಗ್ಗೆ ನಾಳೆ ಪ್ರಧಾನಿಯವರು ಸಿಎಂ ಜೊತೆ ಸಭೆ ನಡೆಸಿ ತೀರ್ಮಾನ ಕೈಗೊಳ್ಳುತ್ತಾರೆ ಎಂದರು.