ಮೈಸೂರು: ತಾಯಿಯನ್ನು ಹಿಂಬಾಲಿಸುತ್ತ ನಾಲ್ಕು ಮರಿ ಹುಲಿಗಳು ಹೆಜ್ಜೆ ಹಾಕಿರುವ ದೃಶ್ಯ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಕಂಡು ಬಂದಿದೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಕಬಿನಿ ಹಿನ್ನೀರಿನ ಪ್ರದೇಶದಲ್ಲಿ ಸಫಾರಿಗೆ ಹೊರಟ ಸಫಾರಿಗರು ಹುಲಿಯೊಂದಿಗೆ ನಾಲ್ಕು ಮರಿಗಳು ಹೆಜ್ಜೆ ಹಾಕುತ್ತಿರುವುದನ್ನು ಕಂಡು ಖುಷಿಯಾಗಿದ್ದಾರೆ. ಒಂದೇ ಸ್ಥಳದಲ್ಲಿ 5 ಹುಲಿಗಳನ್ನು ಸಫಾರಿಗರು ನೋಡಿದಂತಾಗಿದೆ.
ಇದನ್ನೂ ಓದಿ: ಗುತ್ತಿಗೆದಾರನ ಆತ್ಮಹತ್ಯೆ ಕೇಸ್.. ಪ್ರಾಥಮಿಕ ತನಿಖಾ ವರದಿ ಬಳಿಕವೇ ಮುಂದಿನ ಕ್ರಮ ಎಂದ ಸಿಎಂ
ಇಲ್ಲಿ ಹುಲಿಗಳ ದರ್ಶನ ಭಾಗ್ಯ ಜಾಸ್ತಿಯಾಗಿದೆ. ಅಲ್ಲದೇ ಕೋವಿಡ್ ತಗ್ಗಿರುವುದರಿಂದ ನಾಗರಹೊಳೆಗೆ ಬರುವ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. ನಾಲ್ಕು ಮರಿಗಳೊಂದಿಗೆ ಹುಲಿ ಹೋಗುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.