ETV Bharat / city

ಮದುವೆಯಾಗುವುದಾಗಿ ನಂಬಿಸಿ ವಂಚಿಸಿದ ಹೆಡ್ ಕಾನ್ಸ್​ಟೇಬಲ್​ ವಿರುದ್ಧ FIR ದಾಖಲು - ಮದುವೆಯಾಗುವುದಾಗಿ ನಂಬಿಸಿ ಮೋಸ

ಕೃಷ್ಣನ ಮಾತನ್ನ ನಂಬಿದ ಮಹಿಳೆ, ತನ್ನ ಪತಿ ನಂಜಯ್ಯನಿಂದ ವಿಚ್ಛೇದನ ಪಡೆದು ಬೇರ್ಪಟ್ಟಿದ್ದಾಳೆ. ನಂತರ ಕೃಷ್ಣ ಮೈಸೂರಿನ ಗೋಕುಲಂನಲ್ಲಿ ಮನೆ ಬಾಡಿಗೆ ಪಡೆದು ಕೆಲ ದಿನಗಳ ಕಾಲ ಆಕೆಯೊಂದಿಗೆ ಸಂಸಾರ ನಡೆಸಿದ್ದಾನೆ..

FIR
ಹೆಡ್ ಕಾನ್ಸ್​ಟೇಬಲ್​
author img

By

Published : Feb 25, 2022, 12:34 PM IST

ಮೈಸೂರು : ಮದುವೆಯಾಗುವುದಾಗಿ ನಂಬಿಸಿ ಮಹಿಳೆಗೆ ವಂಚಿಸಿದ ಹೆಡ್‌ ಕಾನ್ಸ್​ಟೇಬಲ್ ವಿರುದ್ಧ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ.

ನಂಜನಗೂಡು ತಾಲೂಕು ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಹೆಡ್​ ಕಾನ್ಸ್​ಟೇಬಲ್​ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಸಿ.ಕೃಷ್ಣ ಹಾಗೂ ಈತನ ಮಗ ಕಿರಣ್ ವಿರುದ್ಧ ಎಫ್​ಐಆರ್ ದಾಖಲಾಗಿದೆ.

ದೂರು ದಾಖಲು
ದೂರು ದಾಖಲು

ಕೌಟುಂಬಿಕ ಸಮಸ್ಯೆ ಹಿನ್ನೆಲೆ ಮಹಿಳೆಯೊಬ್ಬರು ಬನ್ನೂರು ಪೊಲೀಸ್​ ಠಾಣೆಗೆ ಭೇಟಿ ನೀಡಿದ್ದಾಗ​ ಹೆಡ್ ಕಾನ್ಸ್​ಟೇಬಲ್ ಕೃಷ್ಣ ಎಂಬಾತ ಸಹಾಯ ಮಾಡುವ ನೆಪದಲ್ಲಿ ಮಹಿಳೆಯನ್ನ ಪರಿಚಯ ಮಾಡಿಕೊಂಡಿದ್ದಾನೆ. ನಂತರ ನಿನ್ನ ಪತಿಗೆ ವಿಚ್ಛೇದನ ಕೊಡು ನಾನು ನಿನ್ನನ್ನು ಮದುವೆಯಾಗುತ್ತೇನೆ ಎಂದು ನಂಬಿಸಿದ್ದಾನೆ.

ಕೃಷ್ಣನ ಮಾತನ್ನ ನಂಬಿದ ಮಹಿಳೆ, ತನ್ನ ಪತಿ ನಂಜಯ್ಯನಿಂದ ವಿಚ್ಛೇದನ ಪಡೆದು ಬೇರ್ಪಟ್ಟಿದ್ದಾಳೆ. ನಂತರ ಕೃಷ್ಣ ಮೈಸೂರಿನ ಗೋಕುಲಂನಲ್ಲಿ ಮನೆ ಬಾಡಿಗೆ ಪಡೆದು ಕೆಲ ದಿನಗಳ ಕಾಲ ಆಕೆಯೊಂದಿಗೆ ಸಂಸಾರ ನಡೆಸಿದ್ದಾನೆ.

ಅಷ್ಟೇ ಅಲ್ಲದೆ, ಮದುವೆಯಾಗುವುದಾಗಿ ನಂಬಿಸಿ ಮಹಿಳೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಈ ಮಧ್ಯೆ ಸೊಸೈಟಿಯಲ್ಲಿ ಮಹಿಳೆಯ ಹೆಸರಿನಲ್ಲಿ 5 ಲಕ್ಷ ರೂ. ಸಾಲ ಪಡೆದಿದ್ದು, ಪ್ರತ್ಯೇಕವಾಗಿ 3 ಲಕ್ಷ ರೂ. ಸಾಲ ಪಡೆದಿದ್ದಾನೆ. ಮಹಿಳೆ, ಕೃಷ್ಣಗೆ ಮದುವೆಯಾಗು ಎಂದು ಒತ್ತಾಯಿಸಿದ್ದಕ್ಕೆ ದೈಹಿಕವಾಗಿ ಕಿರುಕುಳ ನೀಡಲು ಆರಂಭಿಸಿದ್ದಾನೆ ಎನ್ನಲಾಗಿದೆ.

ನ್ಯಾಯ ಕೇಳಲು ಬಂದ ಮಹಿಳೆಯನ್ನ ಕಾನ್ಸ್​ಟೇಬಲ್ ಹಾಗೂ ಆತನ ಮಗ ಹಿಗ್ಗಾಮುಗ್ಗ ಥಳಿಸಿ ಪರಾರಿಯಾಗಿದ್ದಾರೆ. ಅಪ್ಪ-ಮಗನ ದೌರ್ಜನ್ಯಕ್ಕೆ ಸಿಲುಕಿ ಅನಾಥಳಂತೆ ಜಮೀನಿನಲ್ಲಿ ಬಿದ್ದಿದ್ದ ಮಹಿಳೆಯನ್ನ ಗ್ರಾಮಸ್ಥರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಕುರಿತು ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.