ETV Bharat / city

2003ರ ವಿದ್ಯುತ್‌ ಕಾಯ್ದೆ ತಿದ್ದುಪಡಿ ವಿರೋಧಿಸಿ ರೈತರ ಪ್ರತಿಭಟನೆ.. - mysore news

ಲಾಕ್​ಡೌನ್ ಸಂದರ್ಭದಲ್ಲಿ ಗ್ರಾಮೀಣ ಭಾಗದ ಮನೆಗಳ ಗೃಹಬಳಕೆಯ ವಿದ್ಯುತ್ ಬಿಲ್​ನ ಅವೈಜ್ಞಾನಿಕವಾಗಿ ದುಬಾರಿ ಮಾಡಿದ್ದಾರೆ. ಅಲ್ಲದೆ ಬಿಲ್‌ನ ಪಾವತಿಸುವಂತೆ ರೈತರಿಗೆ ಇಲಾಖೆ ಒತ್ತಡ ಹೇರುತ್ತಿದೆ. ಅವೈಜ್ಞಾನಿಕ ಬಿಲ್‌ನ ರಾಜ್ಯ ಸರ್ಕಾರ ಕೈಬಿಡಬೇಕು.

Farmers protest against power amendment of 2003
2003ರ ವಿದ್ಯುತ್‌ ಕಾಯ್ದೆ ತಿದ್ದುಪಡಿ ವಿರೋಧಿಸಿ ರೈತರ ಪ್ರತಿಭಟನೆ
author img

By

Published : Jun 5, 2020, 5:38 PM IST

ಮೈಸೂರು: ಕೇಂದ್ರ ಸರ್ಕಾರ 2003ರ ವಿದ್ಯುತ್‌ ಕಾಯ್ದೆ ತಿದ್ದುಪಡಿ ಮಾಡಲು ಮುಂದಾಗಿರುವುದನ್ನು ವಿರೋಧಿಸಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದಿಂದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.

2003ರ ವಿದ್ಯುತ್‌ ಕಾಯ್ದೆ ತಿದ್ದುಪಡಿ ವಿರೋಧಿಸಿ ರೈತರ ಪ್ರತಿಭಟನೆ..

ವಿದ್ಯುತ್ ಇಲಾಖೆಯನ್ನ ಖಾಸಗೀಕರಣ ಮಾಡುವುದರಿಂದ ಬಂಡವಾಳಶಾಹಿಗಳಿಗೆ ಅನುಕೂಲವಾಗಲಿದೆ. ಇದರಿಂದ ರೈತರಿಗೆ ಹಾಗೂ ಸಾರ್ವಜನಿಕರಿಗೆ ದೊಡ್ಡ ಹೊಡೆತ ಬೀಳಲಿದೆ. ಖಾಸಗಿಯವರ ವಿರುದ್ಧ ಹೋರಾಟ ಮಾಡುವುದು ಕಷ್ಟವಾಗಲಿದೆ. ಕೇಂದ್ರ ಸರ್ಕಾರ ತಿದ್ದುಪಡಿ ಮಾಡಲು ಮುಂದಾಗಿರುವುದನ್ನ ಕೈ ಬಿಡಬೇಕು. ಲಾಕ್​ಡೌನ್ ಸಂದರ್ಭದಲ್ಲಿ ಗ್ರಾಮೀಣ ಭಾಗದ ಮನೆಗಳ ಗೃಹಬಳಕೆಯ ವಿದ್ಯುತ್ ಬಿಲ್​ನ ಅವೈಜ್ಞಾನಿಕವಾಗಿ ದುಬಾರಿ ಮಾಡಲಾಗಿದೆ. ಅಲ್ಲದೆ ಬಿಲ್‌ನ ಪಾವತಿಸುವಂತೆ ರೈತರಿಗೆ ಇಲಾಖೆ ಒತ್ತಡ ಹೇರುತ್ತಿದೆ. ಅವೈಜ್ಞಾನಿಕ ಬಿಲ್‌ನ ರಾಜ್ಯ ಸರ್ಕಾರ ಕೈಬಿಡಬೇಕಂದು ಒತ್ತಾಯಿಸಿದರು.

ಕೇಂದ್ರ ಸರ್ಕಾರ ಭೂಸುಧಾರಣೆ ಕಾಯ್ದೆ 79ಎ ಮತ್ತು 79ಬಿ ಕಾಯ್ದೆ ರದ್ದುಗೊಳಿಸಿ ಹೊಸ ಭೂಸುಧಾರಣೆ ಕಾಯ್ದೆ ಜಾರಿಗೆ ತಂದು, ಕಾರ್ಪೊರೇಟ್ ಕೃಷಿಗೆ ಅನುಕೂಲ ಮಾಡಿ ಕೊಡುತ್ತಿದೆ. ಈ ಮೂಲಕ ಕೃಷಿಕರ ಭೂಮಿಯನ್ನ ಕಿತ್ತುಕೊಳ್ಳುತ್ತಿದೆ ಎಂದು ಆರೋಪಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.