ಮೈಸೂರು: ರೈತನೊಬ್ಬ ಸಾಲಭಾದೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೆ.ಆರ್.ನಗರ ತಾಲೂಕಿನ ಬೀಚನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಕೆ.ಆರ್. ನಗರದ ಬೀಚನಹಳ್ಳಿ ಗ್ರಾಮದ ನಿವಾಸಿಯಾದ ಚಂದ್ರಶೇಖರ (63) ಎಂಬುವವರು ಸಾಲಭಾದೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರು ತಮ್ಮ ಜಮೀನಿನಲ್ಲಿ ಬೋರ್ವೆಲ್ ಕೊರೆಯಿಸಲು ಬ್ಯಾಂಕಿನಿಂದ 60 ಸಾವಿರ ರೂ ಸಾಲ ಹಾಗೂ 1 ಲಕ್ಷ ರೂ ಕೈ ಸಾಲ ಮಾಡಿಕೊಂಡಿದ್ದರಂತೆ. ಸಾಲ ತೀರಿಸಲು ಆಗುತ್ತಿಲ್ಲ ಎಂದು ಮನೆಯವರ ಬಳಿ ಹೇಳಿ ಬೈಕ್ ತೆಗೆದುಕೊಂಡು ಹೋಗಿದ್ದಾರೆ ಎಂಬ ಮಾಹಿತಿ ಇದೆ.
ಬೈಕ್ ಹಾಗೂ ಚಂದ್ರಶೇಖರ ಅವರ ಮೃತದೇಹ ಸನ್ಯಾಸಿಪುರ ಹಳೇ ಸೇತುವೆ ಬಳಿ ಪತ್ತೆಯಾಗಿದೆ.
ಕೆ.ಆರ್.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.